ಬೆಂಗಳೂರಿನಲ್ಲಿ ಎಲ್ಲ ಸಂಸ್ಕೃತಿಯ ಜನರೂ ಇದ್ದಾರೆ. ವಿದೇಶಿ ಆಹಾರಗಳನ್ನು ಇಷ್ಟಪಡುವ ಸ್ಥಳೀಯರೂ ಇಲ್ಲಿ ಸಾಕಷ್ಟಿದ್ದಾರೆ. ಜನರ ಈ ಮನೋಭಾವ ಸಂಸ್ಕೃತಿಯ ವ್ಯಾಪ್ತಿ ಹಿಗ್ಗಲು ಕಾರಣವಾಯಿತು.

ಆಹಾರ ಸಂಸ್ಕೃತಿಯಲ್ಲಾದ ಪಲ್ಲಟಗಳನ್ನು ಗಮನದಲ್ಲಿಟ್ಟುಕೊಂಡು ಮೈದಳೆದಿದ್ದೇ `ಟಿಫಾನೀಸ್~. ಅಂದಹಾಗೆ, ಟಿಫಾನೀಸ್ ಕಾಂಟಿನೆಂಟಲ್ ಫುಡ್ಗೆ ಹೆಸರುವಾಸಿ ಅಂತ ಹೇಳಿಕೊಂಡರು ಟಿಫಾನೀಸ್ ರೆಸ್ಟೋರೆಂಟ್ ಅಂಡ್ ಬಾರ್ನ ವ್ಯವಸ್ಥಾಪಕ ವಿಜಯ್ ಡಿಸೋಜಾ.

ಮೇಜಿನ ಮೇಲಿಟ್ಟಿದ್ದ ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಪ್ಲೇಟ್ಗೆ ಕೈಹಾಕಿ ಒಂದೆರೆಡು ಗೋಡಂಬಿ ಎತ್ತಿ ಬಾಯಿಗೆ ಹಾಕಿಕೊಂಡು ಮಾತು ಮುಂದುವರಿಸಿದರು ವಿಜಯ್.

ಟಿಫಾನೀಸ್ ಶುರುವಾಗಿದ್ದು 1974ರಲ್ಲಿ. ಆಗಿನಿಂದಲೂ ಈ ರೆಸ್ಟೋರಾ ಕಾಂಟಿನೆಂಟಲ್ ಫುಡ್ ಇಷ್ಟಪಡುವವರ ನೆಚ್ಚಿನ ತಾಣವಾಗಿದೆ. ನಮ್ಮಲ್ಲಿ ಇಂಡಿಯನ್, ಚೈನೀಸ್, ಥಾಯ್, ಪಾಸ್ತಾ ಹೀಗೆ ಎಲ್ಲ ಬಗೆಯ ಆಹಾರಗಳು ಲಭ್ಯ. ಆದರೆ, ಕಾಂಟಿನೆಂಟಲ್ ಫುಡ್ಗೆ ಟಿಫಾನೀಸ್ ಹೆಸರುವಾಸಿ ಆಗಿರುವುದು.

ಕ್ರಿಸ್ಮಸ್, ಹೊಸವರ್ಷ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಆಹಾರೋತ್ಸವಗಳನ್ನು ನಡೆಸುತ್ತೇವೆ. ಈ ಆಹಾರೋತ್ಸವ ಪರಿಕಲ್ಪನೆ ಸುತ್ತುವುದು ಕಾಂಟಿನೆಂಟಲ್ ಫುಡ್ನ ಸುತ್ತಲೇ. ಒಮ್ಮೆ ರುಚಿ ಸವಿದ ವಿದೇಶಿಯರು ಮುಂದಿನ ಬಾರಿ ನಗರಕ್ಕೆ ಬಂದಾಗ ತಪ್ಪದೇ ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗೆಯೇ, ನಗರದಲ್ಲಿರುವ ಕ್ರಿಶ್ಚಿಯನ್ನರು ನಮ್ಮ ಖಾಯಂ ಗಿರಾಕಿಗಳು.

ಅಂದಹಾಗೆ, ನಾವು ನಮ್ಮ ರೆಸ್ಟೋರಾದಲ್ಲಿ ಹೊಸ ಬಗೆಯ ಆಹಾರವೊಂದನ್ನು ಪರಿಚಯಿಸಿದ್ದೇವೆ. ಹೆಸರು `ಚಿಕನ್ ಮಿನಿಟ್ಸ್ ಇಟ್ಸ್ ಟೇಕ್~ ಎನ್ನುತ್ತಾ ಟೇಬಲ್ ಮೇಲಿದ್ದ ವೈನ್ ಹೀರುವ ಗ್ಲಾಸ್ನಲ್ಲಿ ಐಸ್ಕ್ಯೂಬ್ ತುಂಬಿ ಅದರ ಮೇಲಿಟ್ಟಿದ್ದ ಪೈನಾಪಲ್, ಚೆರ್ರಿ ಹಾಗೂ ಚೀಸ್ ಮಿಶ್ರಣದ ಸ್ಪಾಟರ್ಸ್ನ ರುಚಿ ನೋಡುವಂತೆ ಸೂಚಿಸಿದರು. ನಮ್ಮ ಸಿಗ್ನೇಚರ್ ಡಿಶ್ನ ರುಚಿ ನೋಡಿ ಅಂತ ಹೇಳುತ್ತಾ ಅದನ್ನು ತಯಾರಿಸಲು ಬಾಣಸಿಗರಿಗೆ ಹೇಳಿದರು.

ಸ್ಪಲ್ಪ ದಪ್ಪವಿರುವ ಕೋಳಿಯ ಎದೆಭಾಗವನ್ನು ಕತ್ತರಿಸಿ, ಮಸಾಲೆ ಮಿಶ್ರಣ ಮಾಡಿ ಅದನ್ನು ಹೆಂಚಿನ ಮೇಲೆ ಕೆಂಪು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಲಾಗುತ್ತದೆ. ಒಂದು ಹದಕ್ಕೆ ಬೆಂದ ನಂತರ ಅದನ್ನು ಪ್ಲೇಟ್ ಮೇಲಿಟ್ಟು, ಸೌತೆಕಾಯಿ, ಹೂಕೋಸು, ಕ್ಯಾರೆಟ್, ಟೊಮೊಟೊ, ಬಟಾಣಿ, ಬೇಬಿಕಾರ್ನ್ ಹಾಕಿ ಸಿಂಗರಿಸಲಾಗುತ್ತದೆ. ಅದಕ್ಕೆ ಸಿಹಿ ಮಿಶ್ರಿತ ಹುಣಸೆಹಣ್ಣಿನ ಸಾಸ್ ಅದ್ದಿಕೊಳ್ಳಲು ಕೊಡುತ್ತೇವೆ~ ಎನ್ನುವ ವೇಳೆಗೆ ಆ ತಿನಿಸು ಟೇಬಲ್ ಮೇಲೆ ಬಂದು ಕುಳಿತಿತ್ತು. ತಂದಿಟ್ಟ ತಿನಿಸಿನ ರುಚಿ ನೋಡಲು ವಿಜಯ್ ಅನುವು ಮಾಡಿಕೊಟ್ಟರು. ಕ್ಷಣಾರ್ಧದಲ್ಲಿ ತಯಾರಾದ ಈ ತಿನಿಸು ವಿಜಯ್ ಹೇಳಿದಷ್ಟು ರುಚಿಕಟ್ಟಾಗಿ ಇರದಿದ್ದರೂ ಚಿಕನ್ ಪ್ರಿಯರು ಒಮ್ಮೆ ಇದರ ಸವಿ ನೋಡಬಹುದು.

ಆನಂತರ, ಒಂದರ ಹಿಂದೆ ಒಂದರಂತೆ ಬಂದ ಫಿಶ್ ಟಿಕ್ಕಾ, ಚಿಕನ್ ಶೆಸ್ವಾನ್ ನೂಡಲ್ಸ್, ಗೋಲ್ಡನ್ ಫ್ರೈಯ್ಡ ಪ್ರಾನ್ಸ್ (ಸಿಗಡಿ) ರುಚಿಯಲ್ಲಿ ಅದ್ಭುತವಾಗಿದ್ದವು. ರೋಸ್ಟೆಡ್ ಡಕ್ನ ಸ್ವಾದವನ್ನು ತಿಂದೇ ಅನುಭವಿಸಬೇಕು. ಹುರಿದ ಬಾತುಕೋಳಿ ಮಾಂಸವನ್ನು ಬೆಣ್ಣೆ ಅಥವಾ ಸಾಸ್ನಲ್ಲಿ ಅದ್ದಿ ತಿನ್ನುವ ಸಿಕ್ಕುವ ರುಚಿಯ ಸೊಬಗೇ ಬೇರೆ.

ಕಾಂಟಿನೆಂಟಲ್ ಫುಡ್ ಇಷ್ಟಪಡುವ ಜನರಿಗೆ ಟಿಫಾನೀಸ್ ಅತ್ಯುತ್ತಮ ಆಹಾರ ತಾಣ. ರೆಸ್ಟೋರಾದಲ್ಲಿ ಕುಳಿತು ಬಿಯರ್ ಅಥವಾ ಸ್ಕಾಚ್ ಗುಟುಕರಿಸುತ್ತಾ ಈ ಆಹಾರವನ್ನು ಕುಟುಂಬ ಸಮೇತರಾಗಿ ಆಸ್ವಾದಿಸಬಹುದು.

ಸ್ಥಳ: ಟಿಫಾನೀಸ್ ರೆಸ್ಟೋರೆಂಟ್ ಅಂಡ್ ಬಾರ್, 7ನೇ ಮಹಡಿ, ದೇವತಾ ಪ್ಲಾಜಾ, ರೆಸಿಡೆನ್ಸಿ ರಸ್ತೆ. ಮಾಹಿತಿಗೆ: www.tiffanyshotels.net, ಬುಕಿಂಗ್ಗಾಗಿ: 2221 3130, 2221 0377.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.