ಗಾಲ್ (ಎಎಫ್ಪಿ): ಆಫ್ ಸ್ಪಿನ್ನರ್ ದಿಲ್ರುವಾನ್ ಪೆರೇರಾ (70ಕ್ಕೆ6) ಅವರ ದಾಳಿಗೆ ಕಂಗಾಲಾದ ಆಸ್ಟ್ರೇಲಿಯಾ ತಂಡ ಎರಡನೇ ಇನಿಂಗ್ಸ್ನಲ್ಲಿ 183 ರನ್ಗೆ ಆಲೌಟ್ ಆಯಿತು. ಇದರಿಂದ ಶ್ರೀಲಂಕಾ ‘ವಾರ್ನ್–ಮುರಳೀಧರನ್’ ಟ್ರೋಫಿಗಾಗಿ ಇಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ 2–0ರಲ್ಲಿ ಮುನ್ನಡೆ ಪಡೆದುಕೊಂಡಿತು.

ಪ್ರವಾಸಿ ತಂಡ ಮೊದಲ ಇನಿಂಗ್ಸ್ನಲ್ಲಿ 106 ರನ್ಗೆ ಆಲೌಟ್ ಆಗಿತ್ತು. ಎರಡನೇ ಇನಿಂಗ್ಸ್ನಲ್ಲಿಯೂ ಈ ತಂಡಕ್ಕೆ ಬ್ಯಾಟಿಂಗ್ ವೈಫಲ್ಯ ಕಾಡಿದ್ದರಿಂದ ಮೂರೇ ದಿನಗಳಲ್ಲಿ ಪಂದ್ಯ ಮುಗಿದು ಹೋಯಿತು.

ಪ್ರಥಮ ಇನಿಂಗ್ಸ್ನಲ್ಲಿ ರಂಗನಾ ಹೆರಾತ್ ಮತ್ತು ದಿಲ್ರುವಾನ್ ತಲಾ ನಾಲ್ಕು ವಿಕೆಟ್ ಉರುಳಿಸಿದ್ದರು. ಪಂದ್ಯದಲ್ಲಿ ಒಟ್ಟು ಹತ್ತು ವಿಕೆಟ್ ಕಬಳಿಸಿದ ದಿಲ್ರುವಾನ್ ಪಂದ್ಯ ಶ್ರೇಷ್ಠ ಗೌರವ ಪಡೆದರು.

ಆರಂಭದಲ್ಲಿಯೇ ಪ್ರಾಬಲ್ಯ: ಲಂಕಾ ತಂಡ ಪ್ರವಾಸಿ ತಂಡಕ್ಕೆ ಮೊದಲ ಓವರ್ನಲ್ಲಿಯೇ ಆಘಾತ ನೀಡಿತು. ಜೋ ಬರ್ನ್ಸ್ ಅವರನ್ನು ಹೆರಾತ್ ಪೆವಿಲಿಯನ್ಗೆ ಕಳುಹಿಸಿದರು. ಕಾಂಗರೂಗಳ ನಾಡಿನ ತಂಡ ಒಟ್ಟು ಹತ್ತು ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಮಧ್ಯಮ ಕ್ರಮಾಂಕದ ಕೆಲ ಬ್ಯಾಟ್ಸ್ಮನ್ಗಳು ಆಸರೆಯಾಗದೇ ಹೋಗಿದ್ದರೆ ತಂಡ ನೂರು ರನ್ಗಳ ಒಳಗೆ ಆಲೌಟ್ ಆಗುತ್ತಿತ್ತು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ 281 ಮತ್ತು ಎರಡನೇ ಇನಿಂಗ್ಸ್್ 237. ಆಸ್ಟ್ರೇಲಿಯಾ 106 ಹಾಗೂ ದ್ವಿತೀಯ ಇನಿಂಗ್ಸ್ 183 (ಡೇವಿಡ್ ವಾರ್ನರ್ 41, ಸ್ಟೀವನ್ ಸ್ಮಿತ್ 30, ಆ್ಯಡಮ್ ವೋಗ್ಸ್ 28, ಮಿಷೆಲ್ ಸ್ಟಾರ್ಕ್ 26; ರಂಗನಾ ಹೆರಾತ್ 74ಕ್ಕೆ2, ದಿಲ್ರುವಾನ್ ಪೆರೇರಾ 70ಕ್ಕೆ6). ಫಲಿತಾಂಶ: ಶ್ರೀಲಂಕಾಕ್ಕೆ 229 ರನ್ ಜಯ. ಪಂದ್ಯ ಶ್ರೇಷ್ಠ: ದಿಲ್ರುವಾನ್ ಪೆರೇರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.