ಸೋಮವಾರ, ಜನವರಿ 20, 2020
26 °C

ಕ್ರಿಕೆಟ್‌: ಸಂಯುಕ್ತ ವಲಯಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್‌: ಸಂಯುಕ್ತ ವಲಯಕ್ಕೆ ಜಯ

ಬೆಂಗಳೂರು: ರಾಯಚೂರು ವಲಯ ತಂಡವನ್ನು ಎರಡನೇ ಇನಿಂಗ್ಸ್‌ ನಲ್ಲಿಯೂ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಸಂಯುಕ್ತ ನಗರ ಇಲೆವೆನ್‌ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಶ್ರಯದಲ್ಲಿ ನಡೆದ 14 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್‌ ಟೂರ್ನಿಯಲ್ಲಿ ಹತ್ತು ವಿಕೆಟ್‌ಗಳ ಗೆಲುವು ಸಾಧಿಸಿತು.ರಾಯಚೂರು ವಲಯ ಮೊದಲ ಇನಿಂಗ್ಸ್‌ನಲ್ಲಿ 126 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 37.4 ಓವರ್‌ಗಳಲ್ಲಿ 107 ರನ್‌ ಮಾತ್ರ ಕಲೆ ಹಾಕಿತು. ಇದಕ್ಕುತ್ತರವಾಗಿ ಸಂಯುಕ್ತ ನಗರ ವಲಯ ಪ್ರಥಮ ಇನಿಂಗ್ಸ್‌ನಲ್ಲಿ 233 ರನ್‌ ಗಳಿಸಿತು. ಗುರುವಾರ ಮೂರು ಎಸೆತಗಳಲ್ಲಿ ನಾಲ್ಕು ರನ್‌ ಕಲೆ ಹಾಕಿ ಗೆಲುವಿನ ನಗೆ ಬೀರಿತು.ಸಂಕ್ಷಿಪ್ತ ಸ್ಕೋರು: ರಾಯಚೂರು ವಲಯ: 126 ಹಾಗೂ ದ್ವಿತೀಯ ಇನಿಂಗ್ಸ್‌ 37.4 ಓವರ್‌ಗಳಲ್ಲಿ 107. (ವಿಜಯ್‌ ರೆಡ್ಡಿ 48; ರಿತ್ವಿಕಾ ರಮೇಶ್‌ 19ಕ್ಕೆ7). ಸಂಯುಕ್ತ ನಗರ ಇಲೆವೆನ್: 233 ಹಾಗೂ ದ್ವಿತೀಯ ಇನಿಂಗ್ಸ್‌ 0.3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 4 ರನ್‌. ಫಲಿತಾಂಶ: ಸಂಯುಕ್ತ ನಗರ ವಲಯಕ್ಕೆ ಮೂರು ಪಾಯಿಂಟ್‌.ಬೆಂಗಳೂರು ನಗರ ಇಲೆವೆನ್‌: 471 ಹಾಗೂ ಎರಡನೇ ಇನಿಂಗ್ಸ್‌ 35 ಓವರ್‌ಗಳಲ್ಲಿ 147ಕ್ಕೆ5 ಡಿಕ್ಲೇರ್ಡ್‌. ಮಂಗಳೂರು ವಲಯ: 160 ಹಾಗೂ ದ್ವಿತೀಯ ಇನಿಂಗ್ಸ್‌ 21 ಓವರ್‌ಗಳಲ್ಲಿ 75ಕ್ಕೆ6. ಫಲಿತಾಂಶ: ಡ್ರಾ.ಮೈಸೂರು ವಲಯ: ಮೊದಲ ಇನಿಂಗ್ಸ್‌ 184 ಮತ್ತು 65 ಓವರ್‌ ಗಳಲ್ಲಿ 8 ವಿಕೆಟ್‌ಗೆ 213. (ಬಿ.ಎಸ್‌. ಹರ್ಷ 46, ಕೆ. ನಿರಂಜನ 56; ಅಖಿಲ್‌ದೇವ್‌ ಅರಸ್‌ 14ಕ್ಕೆ2, ಜಾಹ್ನನ್‌ 39ಕ್ಕೆ2. ಉಪಾಧ್ಯಕ್ಷರ ಇಲೆವೆನ್‌ ಪ್ರಥಮ ಇನಿಂಗ್ಸ್‌ 63.3 ಓವರ್‌ಗಳಲ್ಲಿ 162 (ರೋಹನ್‌ ನಾಯಕರ್‌ 78, ಸುಧಾನ್ಶು 44; ನಿರಂಜನ್‌ 63ಕ್ಕೆ3).ಫಲಿತಾಂಶ: ಡ್ರಾಅಧ್ಯಕ್ಷರ ಇಲೆವೆನ್: 358 ಹಾಗೂ ಎರಡನೇ ಇನಿಂಗ್ಸ್‌  3.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 24. ಶಿವಮೊಗ್ಗ ವಲಯ: 229 ಮತ್ತು ದ್ವಿತೀಯ ಇನಿಂಗ್ಸ್‌ 47.1 ಓವರ್‌ಗಳಲ್ಲಿ 149. (ಆಕಾಶ್‌ ಎನ್‌.ಆರ್‌. ಶರ್ಮ 55, ವಿಶ್ವಾಸ್‌ ಗೌಡ 21, ಎ.ವಿ. ಸುಪ್ರಿತ್‌ ಗೌಡ 20, ಶುಭಾಂಗ್‌ ಹೆಗ್ಡೆ 65ಕ್ಕೆ5, ಬಿ.ಪಿ. ದೇವದತ್‌ 39ಕ್ಕೆ4). ಫಲಿತಾಂಶ: ಅಧ್ಯಕ್ಷರ ಇಲೆವೆನ್‌ಗೆ ಗೆಲುವು.ತುಮಕೂರು ವಲಯ: ಮೊದಲ ಇನಿಂಗ್ಸ್‌ 96 ಮತ್ತು 65. ಓವರ್‌ಗಳಲ್ಲಿ 144. (ಎಸ್‌. ನಿರ್ಮಿತ್‌ 65, ಸಿ. ಪ್ರಜ್ವಲ್‌ ಔಟಾಗದೆ 37; ಎಸ್‌.ಎಸ್‌. ಮಾಧವನ್‌ 28ಕ್ಕೆ4, ಪ್ರವೀಲ್‌ ಸಿಂಗ್‌ 28ಕ್ಕೆ2. ಬೆಂಗಳೂರು ವಲಯ: 84.3 ಓವರ್‌ಗಳಲ್ಲಿ 311 (ಸಿದ್ಧಾರ್ಥ್‌ ಎಸ್‌. ಮಾಧವನ್‌ ಔಟಾಗದೆ 27, ವತ್ಸಲ್‌ ಜೈನ್‌ 25; ಸಂಜಯ್‌ 47ಕ್ಕೆ3, ಎಚ್‌.ಬಿ. ರಘು 52ಕ್ಕೆ2, ಬಿ. ಮನೋಜ್‌ 61ಕ್ಕೆ2). ಫಲಿತಾಂಶ: ಡ್ರಾ

ಪ್ರತಿಕ್ರಿಯಿಸಿ (+)