ಪರ್ತ್ (ಪಿಟಿಐ): ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಹೀನಾಯ ಪ್ರದರ್ಶನ ನೀಡುತ್ತಿರುವುದು ಆತಿಥೇಯ ದೇಶದ ಕ್ರಿಕೆಟ್ ಸಂಸ್ಥೆಗೆ ದೊಡ್ಡ ನಷ್ಟವನ್ನುಂಟುಮಾಡಿದೆ. ಆಸೀಸ್ ವಿರುದ್ಧದ ಮೊದಲ ಮೂರು ಟೆಸ್ಟ್ಗಳಲ್ಲಿ ಒಟ್ಟು 10 ದಿನಗಳ ಆಟ ಮಾತ್ರ ನಡೆದಿದೆ. ಇದರಿಂದ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ (ಸಿಎ) ಹಿನ್ನಡೆ ಉಂಟಾಗಿದೆ.

ಟೆಸ್ಟ್ ಪಂದ್ಯಗಳು ಪೂರ್ಣ ಐದು ದಿನಗಳ ಕಾಲ ನಡೆದಿದ್ದರೆ ಟಿಕೆಟ್ ಮಾರಾಟದಿಂದ ಹೆಚ್ಚಿನ ಹಣ ಸಂಪಾದಿಸಬಹುದಿತ್ತು. ಆದರೆ `ಮಹಿ~ ಬಳಗಕ್ಕೆ ಪಂದ್ಯವನ್ನು ಐದು ದಿನಗಳವರೆಗೆ ಮುಂದುವರಿಸಲು ಸಾಧ್ಯವಾಗದ್ದು ಸಿಎಗೆ ಇನ್ನಿಲ್ಲದ ನಿರಾಸೆ ಉಂಟುಮಾಡಿದೆ.

ಪರ್ತ್ನಲ್ಲಿ ನಡೆದ ಮೂರನೇ ಟೆಸ್ಟ್ ಎರಡೂವರೆ ದಿನಗಳಲ್ಲೇ ಕೊನೆಗೊಂಡಿದೆ. ಮೆಲ್ಬರ್ನ್ ಮತ್ತು ಸಿಡ್ನಿಯಲ್ಲಿ ನಡೆದ ಮೊದಲ ಎರಡು ಟೆಸ್ಟ್ಗಳು ನಾಲ್ಕು ದಿನಗಳ ಒಳಗೆಯೇ ಮುಕ್ತಾಯ ಕಂಡಿತ್ತು. ಈ ಮೂರು ಪಂದ್ಯಗಳನ್ನು ವೀಕ್ಷಿಸಲು ದೊಡ್ಡ ಸಂಖ್ಯೆಯ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಆಗಮಿಸಿದ್ದರು.

ಪರ್ತ್ ಕ್ರಿಕೆಟ್ ಟೆಸ್ಟ್ನ ಮೂರನೇ ದಿನದಾಟ ವೀಕ್ಷಿಸಲು ಭಾನುವಾರ 14,352 ಮಂದಿ ನೆರೆದಿದ್ದರು. ಆಸ್ಟ್ರೇಲಿಯಾ ತಂಡ ಮೂರನೇ ದಿನ ಸುಲಭ ಗೆಲುವು ಪಡೆಯುವುದು ಖಚಿತವಾಗಿತ್ತು. ಆದರೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕ್ರಿಕೆಟ್ ಪ್ರೇಮಿಗಳು ಅಂಗಳಕ್ಕೆ ಆಗಮಿಸಿದ್ದು ಅಚ್ಚರಿಯೇ ಸರಿ. ಈ ಪಂದ್ಯ ಐದು ದಿನಗಳ ಕಾಲ ನಡೆದಿದ್ದಲ್ಲಿ, ಸಿಎ ಟಿಕೆಟ್ ಮಾರಾಟದ ಮೂಲಕ ಹೆಚ್ಚಿನ ಲಾಭ ಗಳಿಸುವ ಸಾಧ್ಯತೆಯಿತ್ತು.

`ಏಕದಿನ ಪಂದ್ಯಗಳಲ್ಲೂ ಗೆಲುವು~

ಪರ್ತ್ (ಪಿಟಿಐ): `ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರರಲ್ಲಿ ಜಯ ಪಡೆದಿರುವ ನಮ್ಮ ತಂಡ ಭಾರತ ವಿರುದ್ಧದ ಏಕದಿನ ಪಂದ್ಯಗಳಲ್ಲೂ ಗೆಲುವು ಸಾಧಿಸುತ್ತದೆ~ ಎಂದು ಆಸ್ಟ್ರೇಲಿಯಾ ತಂಡದ ಕೋಚ್ ಮಿಕಿ ಆರ್ಥರ್ ಹೇಳಿದ್ದಾರೆ.

`ಅಡಿಲೇಡ್ ಟೆಸ್ಟ್ನಲ್ಲಿ ಏನಾಗುವುದೋ ಗೊತ್ತಿಲ್ಲ. ಆದರೆ, ತ್ರಿಕೋನ ಸರಣಿಯಲ್ಲಿ ಭಾರತವನ್ನು ಸೋಲಿಸುತ್ತೇವೆ. ಆಲ್ರೌಂಡರ್ ಶೇನ್ ವ್ಯಾಟ್ಸನ್ ತಂಡಕ್ಕೆ ಮರಳಿರುವುದು ನಮ್ಮ ಶಕ್ತಿಯನ್ನು ಹೆಚ್ಚಿಸಿದೆ~ ಎಂದು ಅವರು ಹೇಳಿದ್ದಾರೆ.

`ಫೆಬ್ರುವರಿ 5ರಂದು ಮೆಲ್ಬರ್ನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸೀಸ್ ತಂಡಗಳ ನಡುವೆ ಏಕದಿನ ಪಂದ್ಯ ನಡೆಯಲಿದೆ.

ವ್ಯಾಟ್ಸನ್ ಭಾರತ ವಿರುದ್ಧ 10 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅದರಿಂದ 410 ರನ್ ಗಳಿಸಿ 41.00 ಸರಾಸರಿ ಹೊಂದಿದ್ದಾರೆ. 12 ವಿಕೆಟ್ ಸಹ ಪಡೆದಿದ್ದಾರೆ~ ಎಂದು ಕೋಚ್ ವಿವರಿಸಿದರು.

`ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ತಿರುಗೇಟು ನೀಡುವ ಬಗ್ಗೆ ಭಾರತ ಯೋಚಿಸುತ್ತಿರಬಹುದು. ಅದರೆ, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಆ ತಂಡದಲ್ಲೂ ಸಾಕಷ್ಟು ಅನುಭವಿ ಆಟಗಾರರಿದ್ದಾರೆ~ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.