ಗುರುವಾರ , ಮೇ 13, 2021
35 °C

ಕ್ರಿಕೆಟ್: ಕೆವಿನ್ ಪೀಟರ್ಸನ್ ಭರ್ಜರಿ ಶತಕ:ಇಂಗ್ಲೆಂಡ್ ತಂಡದ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ: ಕೆವಿನ್ ಪೀಟರ್ಸನ್ (151) ಅವರ ಭರ್ಜರಿ ಶತಕದ ನೆರವಿನಿಂದ ಇಂಗ್ಲೆಂಡ್ ತಂಡದವರು ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದಾರೆ.ಪಿ. ಸಾರಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಗುರುವಾರ ಇಂಗ್ಲೆಂಡ್ 152.3 ಓವರ್‌ಗಳಲ್ಲಿ 460 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ 185 ರನ್‌ಗಳ ಅಮೂಲ್ಯ ಮುನ್ನಡೆ ಪಡೆಯಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ಲಂಕಾ ದಿನದಾಟದ ಅಂತ್ಯಕ್ಕೆ 1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 4 ರನ್ ಗಳಿಸಿದೆ.ಇದಕ್ಕೆ ಕಾರಣವಾಗಿದ್ದು ಪೀಟರ್ಸನ್ ಹಾಗೂ ಜೊನಾಥನ್ ಟ್ರಾಟ್ (64). ಪೀಟರ್ಸನ್ ಕೇವಲ 165 ಎಸೆತಗಳಲ್ಲಿ 151 ರನ್ ಗಳಿಸಿದರು. ಅವರ ಈ ಇನಿಂಗ್ಸ್‌ನಲ್ಲಿ 16 ಬೌಂಡರಿಗಳು ಹಾಗೂ ಆರು ಸಿಕ್ಸರ್‌ಗಳಿದ್ದವು. ಪ್ರವಾಸಿ ತಂಡದವರು ಒಂದು ಹಂತದಲ್ಲಿ ಐದು ವಿಕೆಟ್ ನಷ್ಟಕ್ಕೆ 380 ರನ್ ಗಳಿಸಿದ್ದರು. ಆದರೆ ಅದಕ್ಕೆ 80 ರನ್ ಸೇರಿಸುವಷ್ಟರಲ್ಲಿ ಕೊನೆಯ ಐದು ವಿಕೆಟ್ ಕಳೆದುಕೊಂಡರು.ಆತಿಥೇಯ ಶ್ರೀಲಂಕಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 275 ರನ್ ಗಳಿಸಿತ್ತು. ಸರಣಿಯಲ್ಲಿ ಸಿಂಹಳೀಯ ಪಡೆ 1-0 ಮುನ್ನಡೆ ಹೊಂದಿದೆ.ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: ಮೊದಲ ಇನಿಂಗ್ಸ್ 111.1 ಓವರ್‌ಗಳಲ್ಲಿ 275 ಹಾಗೂ 1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 4; ಇಂಗ್ಲೆಂಡ್: ಮೊದಲ ಇನಿಂಗ್ಸ್ 152.3 ಓವರ್‌ಗಳಲ್ಲಿ 460 (ಅಲಸ್ಟರ್ ಕುಕ್ 94, ಜೊನಾಥನ್ ಟ್ರಾಟ್ 64, ಕೆವಿನ್ ಪೀಟರ್ಸನ್ 151, ಸಮಿತ್ ಪಟೇಲ್ 29; ರಂಗನಾ ಹೆರಾತ್ 133ಕ್ಕೆ6, ತಿಲಕರತ್ನೆ ದಿಲ್ಶಾನ್ 73ಕ್ಕೆ2).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.