ಸೋಮವಾರ, ಮೇ 17, 2021
22 °C

ಕ್ರಿಕೆಟ್: ಗೆಲುವಿನತ್ತ ಆಸ್ಟ್ರೇಲಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಲ್: ವೇಗಿ ರ‌್ಯಾನ್ ಹ್ಯಾರಿಸ್ (24ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವಿನತ್ತ ದಾಪುಗಾಲು ಇಟ್ಟಿದ್ದಾರೆ.



ಗಾಲ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಗೆಲುವಿಗೆ 379 ರನ್‌ಗಳ ಗುರಿ ಪಡೆದಿರುವ ಶ್ರೀಲಂಕಾ ತನ್ನ ಎರಡನೇ ಇನಿಂಗ್ಸ್‌ನಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ 52 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 120 ರನ್ ಗಳಿಸಿದೆ.



ಮಾಜಿ ನಾಯಕ ಮಾಹೇಲ ಜಯವರ್ಧನೆ (ಬ್ಯಾಟಿಂಗ್ 57) ಹಾಗೂ ಆ್ಯಂಜೆಲೊ ಮ್ಯಾಥ್ಯುಸ್ (ಬ್ಯಾಟಿಂಗ್ 32) ತಂಡಕ್ಕೆ ಆಸರೆಯಾಗಿದ್ದಾರೆ.



ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್: 86.4 ಓವರ್‌ಗಳಲ್ಲಿ 273 ಹಾಗೂ 59.2 ಓವರ್‌ಗಳಲ್ಲಿ 210 (ಮೈಕಲ್ ಕ್ಲಾರ್ಕ್ 60; ರಂಗನಾ ಹೇರತ್ 79ಕ್ಕೆ5); ಶ್ರೀಲಂಕಾ: ಮೊದಲ ಇನಿಂಗ್ಸ್: 50 ಓವರ್‌ಗಳಲ್ಲಿ 105 ಹಾಗೂ 52 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 120 (ಜಯವರ್ಧನೆ ಬ್ಯಾಟಿಂಗ್ 57, ಆ್ಯಂಜೆಲೊ ಮ್ಯಾಥ್ಯುಸ್ ಬ್ಯಾಟಿಂಗ್ 32; ರ‌್ಯಾನ್ ಹ್ಯಾರಿಸ್ 24ಕ್ಕೆ3).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.