ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಎರಡು ಸಲ `ರನ್ನರ್ ಅಪ್~ ಎನಿಸಿಕೊಂಡಿದೆ. ಟ್ರೋಫಿ ಎತ್ತಿಹಿಡಿಯುವ ಗುರಿ ಈಡೇರಿಲ್ಲ. 2009 ಮತ್ತು 2011 ರಲ್ಲಿ ಫೈನಲ್ನಲ್ಲಿ ಮುಗ್ಗರಿಸುವ ದುರಾದೃಷ್ಟ ಆರ್ಸಿಬಿ ತಂಡವನ್ನು ಕಾಡಿತ್ತು.

ಡೇನಿಯಲ್ ವೆಟೋರಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಇದೀಗ ಹೊಸ ಕನಸು, ಭರವಸೆಯನ್ನು ಹೊತ್ತುಕೊಂಡು ಐದನೇ ಋತುವಿನ ಟೂರ್ನಿಯಲ್ಲಿ ಶನಿವಾರ ತನ್ನ ಅಭಿಯಾನ ಆರಂಭಿಸಲಿದೆ. ಬೆಂಗಳೂರಿನ ತಂಡದ ಮೊದಲ ಎದುರಾಳಿ ಡೆಲ್ಲಿ ಡೇರ್ಡೆವಿಲ್ಸ್.

ವೀರೇಂದ್ರ ಸೆಹ್ವಾಗ್ ಮುಂದಾಳುತ್ವದ ಡೆಲ್ಲಿ ಟೂರ್ನಿಯಲ್ಲಿ ಈಗಾಗಲೇ ಶುಭಾರಂಭ ಮಾಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಈ ತಂಡ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಎಂಟು ವಿಕೆಟ್ಗಳ ಜಯ ಪಡೆದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯುವ ಪಂದ್ಯದಲ್ಲಿ ಆರ್ಸಿಬಿ ಗೆಲುವಿನ `ಫೇವರಿಟ್~ ಎನಿಸಿಕೊಂಡರೂ, ಡೆಲ್ಲಿ ತಂಡವನ್ನು ಕಡೆಗಣಿಸಲು ಸಾಧ್ಯವಿಲ್ಲ.

`ಆರ್ಸಿಬಿ ಸಕಲ ರೀತಿಯಲ್ಲೂ ಸಜ್ಜಾಗಿದೆ~ ಎಂದು ಡೇನಿಯಲ್ ವೆಟೋರಿ ಹೇಳಿದ್ದಾರೆ. ಮೊದಲ ಪಂದ್ಯ ತವರು ನೆಲದಲ್ಲಿ ನಡೆಯಲಿರುವುದು ಒಂದು ರೀತಿಯಲ್ಲಿ ಬೆಂಗಳೂರಿನ ತಂಡಕ್ಕೆ ಸಕಾರಾತ್ಮಕ ಅಂಶ ಎನಿಸಿದೆ. ಇದರ ಪ್ರಯೋಜನ ಪಡೆಯುವುದು ಆಟಗಾರರ ಉದ್ದೇಶ.

ಗೇಲ್, ಕೊಹ್ಲಿ ಮೇಲೆ ಭರವಸೆ: ಆರ್ಸಿಬಿ ತಂಡದ ಹೆಸರು ಕೇಳಿದೊಡನೆ ಮೊದಲು ನೆನಪಾಗುವುದು ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್. ಕಳೆದ ಬಾರಿಯ ಟೂರ್ನಿಯಲ್ಲಿ ಈ ಆರಂಭಿಕ ಬ್ಯಾಟ್ಸ್ಮನ್ ನೀಡಿದ್ದು ಅದ್ಭುತ ಪ್ರದರ್ಶನ. ಏಕಾಂಗಿ ಹೋರಾಟದ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸುವ ತಾಕತ್ತು ಗೇಲ್ ಬಾಹುಗಳಲ್ಲಿ ಅಡಗಿದೆ. ಆದ್ದರಿಂದ ತಂಡ ಈ ಬಾರಿಯೂ ಅವರನ್ನೇ ನೆಚ್ಚಿಕೊಂಡಿದೆ.

ಗೇಲ್ ಜೊತೆ ಬ್ಯಾಟಿಂಗ್ನಲ್ಲಿ ಬಲ ನೀಡಲಿರುವ ಇನ್ನೊಬ್ಬ ಆಟಗಾರ ವಿರಾಟ್ ಕೊಹ್ಲಿ. ಭಾರತ ತಂಡದ ಬ್ಯಾಟಿಂಗ್ನ ಬೆನ್ನೆಲುಬು ಎನಿಸಿರುವ ಕೊಹ್ಲಿ ಮೇಲೆ ನಿರೀಕ್ಷೆಯ ಭಾರ ಇರುವುದು ಸಹಜ. ಕಳೆದ ಕೆಲ ತಿಂಗಳುಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಆಡುವ ಸಂದರ್ಭ ಈ ಬ್ಯಾಟ್ಸ್ಮನ್ ವೈಫಲ್ಯ ಅನುಭವಿಸಿದ್ದು ಕಡಿಮೆ. ಕೊಹ್ಲಿ ಮತ್ತು ಗೇಲ್ ಸಿಡಿದು ನಿಂತರೆ ಎದುರಾಳಿ ತಂಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಇವರಿಬ್ಬರ ಕುರಿತ ಪ್ರಶ್ನೆ ಎದುರಾದಾಗ ನಾಯಕ ವೆಟೋರಿ, `ಕಳೆದ ವರ್ಷದಂತೆ ಈ ವರ್ಷವೂ ಗೇಲ್ ಮಿಂಚಬೇಕೆಂಬುದು ನನ್ನ ಬಯಕೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲೂ ಅವರು ಒಂದೆರಡು ಶತಕ ಗಳಿಸಲು ಯಶಸ್ವಿಯಾಗಿದ್ದರು. ವಿಶ್ವದ ಅತ್ಯುತ್ತಮ ಟ್ವೆಂಟಿ-20 ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ಗೇಲ್ ಐಪಿಎಲ್ನಲ್ಲಿ ಆಡುವುದನ್ನು ಇಷ್ಟಪಡುವರು~ ಎಂದರು.

`ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಹಾಗೂ ಏಷ್ಯಾ ಕಪ್ ಟೂರ್ನಿಯಲ್ಲಿ ಅವರು ಅದನ್ನು ಸಾಬೀತುಪಡಿಸಿದ್ದರು. ಕೊಹ್ಲಿ ಒಬ್ಬ ಪ್ರಬುದ್ಧ ಆಟಗಾರನಾಗಿ ಬದಲಾಗಿದ್ದಾರೆ~ ಎಂದು ಹೇಳಿದರು.

ಜಹೀರ್ ಖಾನ್ ಮತ್ತು ಆರ್. ವಿನಯ್ ಕುಮಾರ್ ಅವರನ್ನೊಳಗೊಂಡ ಬೌಲಿಂಗ್ ವಿಭಾಗ ಕೂಡಾ ಸಮತೋಲನದಿಂದ ಕೂಡಿದೆ. ಗಾಯದ ಸಮಸ್ಯೆಯಿಂದ ಬಳಲಿದ್ದ ಜಹೀರ್ ಇದೀಗ ಚೇತರಿಸಿಕೊಂಡಿದ್ದಾರೆ. ಆದರೆ ಅವರು ಶನಿವಾರ ಕಣಕ್ಕಿಳಿಯುವುದು ಖಚಿತವಾಗಿಲ್ಲ. ವಿಕೆಟ್ ಕೀಪರ್ನ ಜವಾಬ್ದಾರಿಯನ್ನು ಎಬಿ ಡಿವಿಲಿಯರ್ಸ್ ನಿರ್ವಹಿಸಲಿದ್ದಾರೆ.

ಮತ್ತೊಂದೆಡೆ ಡೆಲ್ಲಿ ತನ್ನದೇ ಯೋಜನೆಗಳನ್ನು ರೂಪಿಸಿಕೊಂಡು ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ದೊರೆತ ಗೆಲುವಿನ ಆತ್ಮವಿಶ್ವಾಸದ ಬಲ ಕೂಡಾ ಈ ತಂಡದ ಜೊತೆಗಿದೆ. ಮಾಹೇಲ ಜಯವರ್ಧನೆ, ಕೆವಿನ್ ಪೀಟರ್ಸನ್ ಮತ್ತು ಡೇವಿಡ್ ವಾರ್ನರ್ ಅವರಂತಹ ಪ್ರಮುಖ ಆಟಗಾರರು ಇಲ್ಲದೆಯೂ ಗೆಲುವು ದೊರೆತಿರುವುದು ಡೆಲ್ಲಿ ನಾಯಕ ಸೆಹ್ವಾಗ್ಗೆ ಸಂತಸ ನೀಡಿದೆ.

ಮೊದಲ ಪಂದ್ಯದಲ್ಲಿ ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಇರ್ಫಾನ್ ಪಠಾಣ್. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಅವರು ಆಲ್ರೌಂಡ್ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಡೇರ್ಡೆವಿಲ್ಸ್ ತಂಡ ಸೆಹ್ವಾಗ್ ಮತ್ತು ಆ್ಯರನ್ ಫಿಂಚ್ ಅವರಿಂದ ಉತ್ತಮ ಆರಂಭ ನಿರೀಕ್ಷಿಸುತ್ತಿದೆ. ಹಾಗಾದಲ್ಲಿ ಇತರ ಬ್ಯಾಟ್ಸ್ಮನ್ಗಳ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ.

ಈ ತಂಡದ ಬೌಲರ್ಗಳಾದ ಮಾರ್ನ್ ಮಾರ್ಕೆಲ್, ಉಮೇಶ್ ಯಾದವ್ ಮತ್ತು ರೆಲೋಫ್ ವಾನ್ ಡೆರ್ ಮೆರ್ವ್ ಅವರು ಆರ್ಸಿಬಿ ಬ್ಯಾಟ್ಸ್ಮನ್ಗಳನ್ನು ಹೇಗೆ ನಿಯಂತ್ರಿಸುವರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸೆಹ್ವಾಗ್ ಅವರ ಮೇಲೆ ನಿಯಂತ್ರಣ ಹೇರಲು ನಿರ್ದಿಷ್ಟ ಯೋಜನೆ ಇದೆಯೇ ಎಂಬ ಪ್ರಶ್ನೆಗೆ ವೆಟೋರಿ, `ಸೆಹ್ವಾಗ್ ಅವರಂತಹ ಆಟಗಾರನನ್ನು ಎದುರಿಸುವುದು ಕಷ್ಟ. ಸ್ಪಿನ್ ಮತ್ತು ವೇಗದ ಬೌಲಿಂಗ್ ದಾಳಿಯನ್ನು ಅವರು ಚೆನ್ನಾಗಿ ಎದುರಿಸಬಲ್ಲರು~ ಎಂದು ಉತ್ತರಿಸಿದರು.

ಶುಕ್ರವಾರ ಸಂಜೆಯ ವೇಳೆಗೆ ಉದ್ಯಾನನಗರಿಯಲ್ಲಿ ಮೋಡ ಕವಿದ ವಾತಾವರಣವಿತ್ತು. ಕೆಲವೆಡೆ ಮಳೆಯೂ ಆಗಿತ್ತು. ಈ ಕಾರಣ ಇಂದಿನ ಪಂದ್ಯಕ್ಕೆ ಮಳೆಯ ಭೀತಿಯೂ ಎದುರಾಗಿದೆ.

ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಡೇನಿಯಲ್ ವೆಟೋರಿ (ನಾಯಕ), ಮಾಯಂಕ್ ಅಗರ್ವಾಲ್, ಕೆ.ಪಿ. ಅಪ್ಪಣ್ಣ, ಶ್ರೀನಾಥ್ ಅರವಿಂದ್, ಅರುಣ್ ಕಾರ್ತಿಕ್, ರಾಜು ಭಟ್ಕಳ್, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಮೊಹಮ್ಮದ್ ಕೈಫ್, ಜಹೀರ್ ಖಾನ್, ವಿರಾಟ್ ಕೊಹ್ಲಿ, ಚಾರ್ಲ್ ಲಾಂಗ್ವೆಲ್ಟ್, ಆ್ಯಂಡ್ರ್ಯೂ ಮೆಕ್ಡೊನಾಲ್ಡ್, ಅಭಿಮನ್ಯು ಮಿಥುನ್, ಮುತ್ತಯ್ಯ ಮುರಳೀಧರನ್, ಡಿರ್ಕ್ ನಾನೆಸ್, ರ್ಯಾನ್ ನಿನನ್, ಹರ್ಷಲ್ ಪಟೇಲ್, ಲೂಕ್ ಪೊಮರ್ಸ್ಬ್ಯಾಕ್, ಚೇತೇಶ್ವರ ಪೂಜಾರ, ಜಮಾಲುದ್ದೀನ್ ಸಯ್ಯದ್ ಮೊಹಮ್ಮದ್, ಸೌರಭ್ ತಿವಾರಿ, ಆರ್.ವಿನಯ್ ಕುಮಾರ್.

ಡೆಲ್ಲಿ ಡೇರ್ಡೆವಿಲ್ಸ್: ವೀರೇಂದ್ರ ಸೆಹ್ವಾಗ್ (ನಾಯಕ), ಅಜಿತ್ ಅಗರ್ಕರ್, ಇರ್ಫಾನ್ ಪಠಾಣ್, ಉಮೇಶ್ ಯಾದವ್, ನಮನ್ ಓಜಾ, ಶಹಬಾಜ್ ನದೀಮ್, ವೇಣುಗೋಪಾಲ್ ರಾವ್, ವಿಕಾಸ್ ಮಿಶ್ರಾ, ಯೋಗೇಶ್ ನಗರ್, ವರುಣ್ ಆ್ಯರನ್, ಕುಲ್ದೀಪ್ ರಾವಲ್, ಮನ್ಪ್ರೀತ್ ಜುನೇಜಾ, ಆ್ಯರನ್ ಫಿಂಚ್, ಆಂಡ್ರೆ ರಸೆಲ್, ಡಗ್ ಬ್ರೇಸ್ವೆಲ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ನ್ ಮಾರ್ಕೆಲ್, ವಾನ್ಡೆರ್ ಮೆರ್ವ್.

ಪಂದ್ಯದ ಆರಂಭ: ಸಂಜೆ 4.00ಕ್ಕೆ, ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.