ಬೆಂಗಳೂರು ಅಂತರರಾಷ್ಟ್ರೀಯ ತಾಂತ್ರಿಕ ಉದ್ಯಾನ (ಐಟಿಪಿಬಿ) ಇತ್ತೀಚೆಗೆ ಆಯೋಜಿಸಿದ್ದ 15ನೇ ಹೆಲ್ತಿ ಲೈಫ್ಸ್ಟೈಲ್ ಮೀಟ್ಗೆ ವರ್ಣರಂಜಿತ ತೆರೆ ಬಿದ್ದಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐಟಿ ಟೆಕ್ಕಿಗಳು ಕೀಬೋರ್ಡ್, ಮೌಸ್, ಮಾನಿಟರ್ ಮರೆತು ತಮಗಿಷ್ಟವಾದ ಕ್ರೀಡೆಯಲ್ಲಿ ಭಾಗವಹಿಸಿ ಖುಷಿ ಪಟ್ಟರು. ಈ ಕಾರ್ಯಕ್ರಮದಲ್ಲಿ 45 ಐಟಿ ಕಂಪನಿಗಳಿಂದ ಒಟ್ಟು 2,200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಕ್ರಿಕೆಟ್, ಫುಟ್ ಬಾಲ್, ವಾಲಿಬಾಲ್, ಥ್ರೋಬಾಲ್ ಮತ್ತು ಒಳಾಂಗಣ ಕ್ರೀಡೆಗಳಾದ ಕೇರಂ, ಚೆಸ್ ಆಡಿ ತಮ್ಮ ಕ್ರೀಡಾ ಪ್ರೀತಿ ಮೆರೆದರು. ಅಂದಹಾಗೆ, ಪಾರ್ಕ್ ಸ್ಕ್ವೇರ್ ಕಟ್ಟಡದಲ್ಲಿ ನಡೆದ ಇಂಟರ್-ಕಾರ್ಪೊರೇಟ್ ಬೌಲಿಂಗ್ ಪಂದ್ಯ ಈ ವರ್ಷದ ಪ್ರಮುಖ ಆಕರ್ಷಣೆಯಾಗಿತ್ತು.

ಜನರಲ್ ಮೋಟಾರ್ಸ್ ಟೆಕ್ನಿಕಲ್ ಸೆಂಟರ್ ಇಂಡಿಯಾ, ಐಟಿಪಿಬಿಯ ಒಟ್ಟಾರೆ ಚಾಂಪಿಯನ್ ಆಗಿ ಹೊರಹೊಮ್ಮಿತು. ವಾಲಿಬಾಲ್, ಥ್ರೋಬಾಲ್, ಚೆಸ್ ಮತ್ತು ಇತರೆ ಫಿಟ್ನೆಸ್ ಪಂದ್ಯಗಳಲ್ಲಿ ಪಾರಮ್ಯ ಸಾಧಿಸುವ ಮೂಲಕ ಹೆಚ್ಚು ಟ್ರೋಫಿ ಗೆದ್ದುಕೊಂಡಿತು.

ಫಸ್ಟ್ ಅಡ್ವಾಂಟೇಜ್ ಆಫ್ ಶೋರ್ ಮತ್ತು ಟಾಟಾ ಕನ್ಸ್ಲ್ಟೆನ್ಸಿ ತಂಡಗಳು ಜನರಲ್ ಮೋಟಾರ್ಸ್ಗೆ ತೀವ್ರ ಸ್ಪರ್ಧೆ ಒಡ್ಡಿದವು. ಸ್ಪರ್ಧೆಯಲ್ಲಿ ಗೆದ್ದವರಿಗೆ ಆಕರ್ಷಕ ಟ್ರೋಫಿ ಹಾಗೂ ಇತರೆ ಬಹುಮಾನ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.