ಬುಧವಾರ, ಜೂನ್ 16, 2021
23 °C

ಕ್ಷಮಾದಾನ ಅರ್ಜಿ ಇತ್ಯರ್ಥ

ಕೆ.ವಿ. ಸೀತಾರಾಮಯ್ಯ,ಹಾಸನ Updated:

ಅಕ್ಷರ ಗಾತ್ರ : | |

ಕ್ಷಮಾದಾನದ ಅರ್ಜಿಗಳನ್ನು ವಿಳಂಬ ವಾಗಿ ಇತ್ಯರ್ಥ ಮಾಡಿದ್ದಲ್ಲಿ ಅಪ­ರಾಧಿಗಳ ಗಲ್ಲು ಶಿಕ್ಷೆ­ಯನ್ನು  ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿ­ಸಬ­ಹುದು ಎಂದು ನೀಡಿರುವ ತೀರ್ಪನ್ನು ಪುನರ್‌ ಪರಿ­ಶೀಲಿಸುವಂತೆ ಸಲ್ಲಿಸಿದ್ದ ಮನ­ವಿ­­ಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದರಿಂದ ಕೇಂದ್ರಕ್ಕೆ ಮುಜು­ಗರ ಆಗಿದೆ.  ಅಧಿಕಾರ­ಶಾಹಿಗಳಿಗೆ ಈ ತೀರ್ಪಿ­ನಿಂದ ಅನುಕೂಲ ಮತ್ತು ಅನನು­ಕೂಲ ಎರಡೂ ಆಗಿದೆ,



ಗಲ್ಲು ಶಿಕ್ಷೆಗೆ ಒಳಗಾಗಿರುವವರನ್ನು ಬದುಕಿಸಬೇಕು ಎಂಬ ಇಚ್ಛೆ ಇದ್ದರೆ ವಿಳಂಬ ನೀತಿ ಅನುಸರಿಸಿದರಾಯಿತು.  ಇದನ್ನು ವಿಳಂಬದಾನ ಎಂದರೂ ತಪ್ಪಿಲ್ಲ.  ವಿಳಂಬದಾನ ಜೀವದಾನಕ್ಕೆ ಮೆಟ್ಟಿಲಾಗು ತ್ತದೆ.  ಅಪರಾಧಿಯನ್ನು ನೇಣು ಹಗ್ಗಕ್ಕೆ ಗುರಿ ಮಾಡಬೇಕೆಂದು ಮನಸ್ಸಿದ್ದರೆ ತ್ವರಿತ ವಾಗಿ ನಿರ್ಧಾರ ತೆಗೆದುಕೊಂಡು ಅಂತಹವ ರನ್ನು ನೇಣುಗಂಬಕ್ಕೇರಿಸಿ ಸುಪ್ರೀ ಕೋರ್ಟ್ ತೀರ್ಪಿಗೆ ತಲೆಬಾಗಿರುವುದಾಗಿ ಹೇಳಿಕೊಳ್ಳ ಬಹುದು.  ಕ್ಷಮಾದಾನದ ಅರ್ಜಿಗಳನ್ನು ಎಷ್ಟು ದಿನಗಳೊಳಗೆ ಇತ್ಯರ್ಥ ಮಾಡಬೇಕು ಎಂಬುದನ್ನು ಕೋರ್ಟ್ ನಿಗದಿ ಪಡಿಸಿಲ್ಲ. 

   

ಕ್ಷಮಾದಾನವನ್ನು ರಾಷ್ಟ್ರಪತಿಯವರೇ ನೀಡಬೇಕಾಗಿದ್ದರೂ ಅವರು ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಗೃಹಖಾತೆಯ  ನಿರ್ದೇಶನವನ್ನೇ ಪಾಲಿಸಬೇಕು.   ಸಚಿವಾಲ ಯವು ಎಲ್ಲಾ ಪ್ರಕರಣಗಳಲ್ಲೂ ಉದ್ದೇಶ ಪೂರ್ವವಾಗಿಯೇ ವಿಳಂಬ ನೀತಿ ಅನುಸರಿಸುತ್ತದೆ ಎನ್ನಲಾಗದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.