ಇಸ್ಲಾಮಾಬಾದ್ (ಪಿಟಿಐ/ಎಎಫ್ಪಿ): ದೇಶದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಪಾಕಿಸ್ತಾನವು 1,300 ಕಿ.ಮೀ. ದೂರ ನೆಗೆಯಬಲ್ಲ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಬುಧವಾರ ಯಶಸ್ವಿಯಾಗಿ ನಡೆಸಿತು.

`ಹತ್ಫ್-5' ( ಘೋರಿ) ಕ್ಷಿಪಣಿಯನ್ನು ಎಲ್ಲಿ ಪರೀಕ್ಷೆಗೊಳಪಡಿಸಲಾಯಿತು ಎನ್ನುವುದನ್ನು ಸೇನೆ ಬಹಿರಂಗಪಡಿಸಲಿಲ್ಲ. ದ್ರವ ಇಂಧನ ಚಾಲಿತ ಈ ಕ್ಷಿಪಣಿಯು ಸಾಂಪ್ರದಾಯಿಕ ಹಾಗೂ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲದು. ಈ ವರ್ಷದಲ್ಲಿ ಪಾಕಿಸ್ತಾನವು ಪರೀಕ್ಷಾರ್ಥ ಪ್ರಯೋಗ ನಡೆಸಿದ 8ನೇ ಕ್ಷಿಪಣಿ ಇದಾಗಿದೆ. ಎರಡು ತಿಂಗಳ ಹಿಂದೆಯಷ್ಟೇ 700 ಕಿ.ಮೀ ದೂರ ನೆಗೆಯಬಲ್ಲ `ಹತ್ಫ್-7' ಕ್ಷಿಪಣಿ ಪ್ರಯೋಗ ನಡೆಸಲಾಗಿತ್ತು. ಭಾರತದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಅಗ್ನಿ-5 ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದ ಕೆಲವೇ ವಾರಗಳಲ್ಲಿ ಪಾಕಿಸ್ತಾನವು ಐದು ಕ್ಷಿಪಣಿಗಳನ್ನು ಪರೀಕ್ಷೆಗೊಳಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.