ಭಾನುವಾರ, ಜನವರಿ 19, 2020
25 °C

ಖಚಿತ ಫಲಿತಾಂಶ ಹೇಳಲು ಮತಗಟ್ಟೆ ಸಮೀಕ್ಷೆ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಸಕ್ತ ವಿಧಾನಸಭಾ ಚುನಾ­ವಣಾ  ಫಲಿತಾಂಶದ ಅತಿದೊಡ್ಡ ಸುದ್ದಿಯನ್ನು ಯಾವುದೇ ಮತಗಟ್ಟೆ ಸಮೀಕ್ಷೆಗಳು ಸ್ಪಷ್ಟವಾಗಿ ತಿಳಿಸಿರಲಿಲ್ಲ. ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರನ್ನು ಅವರ ಕ್ಷೇತ್ರ­ದಲ್ಲೇ 25 ಸಾವಿ­ರಕ್ಕೂ ಅಧಿಕ ಮತಗಳ ಅಂತರದಿಂದ ಅರ­ವಿಂದ ಕೇಜ್ರಿವಾಲ್‌ ನೇತೃತ್ವದಲ್ಲಿ ಆಮ್‌ ಆದ್ಮಿ ಪಾರ್ಟಿ (ಎಎಪಿ) ಪರಾ­ಭವ­ಗೊಳಿಸಿರುವುದು ಗಮನಾರ್ಹ.

ದೆಹಲಿಯಲ್ಲಿ ಹೊಸ ರಾಜಕೀಯ ಶಕ್ತಿ­ಯಾಗಿ ಎಎಪಿ ಹೊರಹೊಮ್ಮುವು­ದಾಗಿ ಈ ಸಮೀಕ್ಷೆಗಳು ಹೇಳುವಲ್ಲಿ ಯಶ­ಸ್ವಿ­ಯಾಗಿದ್ದರೂ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪಕ್ಷವು ಸಾರ್ವಜನಿಕ ಬೆಂಬಲ ಪಡೆಯುವುದು ಎಂದು ಇವು ಊಹಿಸಿರಲಿಲ್ಲ.70 ಸದಸ್ಯ ಬಲದ ದೆಹಲಿ ವಿಧಾನ­ಸಭೆಯ 28 ಸ್ಥಾನಗಳನ್ನು ಗೆದ್ದಿರುವ ಎಎಪಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರ­ಹೊಮ್ಮಿದ್ದು, ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ 31 ಮತ್ತು 8 ಸ್ಥಾನ­ಗಳಿಗೆ ಮಾತ್ರ ತೃಪ್ತಿ ಪಡ­ಬೇಕಾಗಿದೆ.ಎಎಪಿಗೆ ಸಿ’ವೊಟರ್ಸ್, ಎಸಿ’ನೀಲ್ಸನ್‌ ಮತ್ತು ಆರ್ಗ್‌ಮಾರ್ಗ್‌ 8–16 ಸ್ಥಾನ ನೀಡಿದ್ದು, ಆದರೆ ಈಗ ಗೆದ್ದಿರುವಷ್ಟು ದೊಡ್ಡ ಅಂತರವನ್ನು ಹೇಳಿರಲಿಲ್ಲ. ಟುಡೇ’ಯ ಚಾಣಕ್ಯವು ಎಎಪಿಗೆ 31 ಸ್ಥಾನ ಹೇಳಿ­ದ್ದರೂ, 9 ಸ್ಥಾನಗಳ ಅಂತರ­ವನ್ನು ತಿಳಿಸಿತ್ತು. ಸಿಎನ್‌ಎನ್‌–ಐಬಿಎನ್‌ –ಎಸ್‌ಡಿಎಸ್‌–ದಿ ವೀಕ್‌ ಸಮೀಕ್ಷೆಗಳು ಕೂಡ ಇದೇ ರೀತಿ ಅಂದಾಜಿಸಿದ್ದವು.ಇತರ ಮೂರು ರಾಜ್ಯಗಳಾದ ಮಧ್ಯ­ಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ­ಗಡ­ದಲ್ಲಿ ಬಿಜೆಪಿ ಬಹು­ಮತ ಪಡೆ­ಯುವ ಮತ್ತು ಕಾಂಗ್ರೆಸ್‌ ದೂಳಿಪಟ­ವಾಗುವ ಅಂದಾ­ಜ­ನ್ನು ಸಮೀಕ್ಷೆಗಳು ಮಾಡಿದ್ದವು. ಆದರೆ ಕೇಸರಿ ಪಕ್ಷಕ್ಕೆ ಈಗ ಸಿಕ್ಕಿರುವಷ್ಟು ದೊಡ್ಡ ಬಹುಮತವನ್ನು ಯಾವುದೂ ತಿಳಿಸಿರಲಿಲ್ಲ.

ಪ್ರತಿಕ್ರಿಯಿಸಿ (+)