ಭಾನುವಾರ, ಜನವರಿ 19, 2020
20 °C

ಖರಗ್‌ಪುರ ಐಐಟಿಯಲ್ಲಿ ಜಾಗತಿಕ ಉದ್ಯಮಶೀಲತಾ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಶ್ವಿಮ ಬಂಗಾಳದ ಖರಗ್‌ಪುರದಲ್ಲಿರುವ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ (ಐಐಟಿ) ಜ.10ರಿಂದ ಮೂರು ದಿನಗಳ ಜಾಗತಿಕ ಉದ್ಯಮಶೀಲತಾ ಸಮಾವೇಶ ನಡೆ­ಯಲಿದೆ. ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿ­ಗಳಲ್ಲಿ ಉದ್ಯಮಶೀಲತೆ­ಯನ್ನು ಉತ್ತೇಜಿ­ಸುವ ಸಲುವಾಗಿ ಈ ಸಮಾವೇಶವನ್ನು ಆಯೋಜಿಸಲಾಗಿದೆ.ದೇಶ– ವಿದೇಶದ ಸುಮಾರು 20 ಸಾವಿರ ವಿದ್ಯಾರ್ಥಿಗಳು ಸಮಾವೇಶ­ದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮೂರು ದಿನಗಳ ಕಾಲ ತಜ್ಞರಿಂದ ಉಪನ್ಯಾಸ,  ವಿಚಾರ ಸಂಕಿರಣ, ಚರ್ಚಾ­ಕೂಟಗಳು ನಡೆಯಲಿವೆ. ಮೈಕ್ರೊ­ಸಾಫ್ಟ್‌, ಇಂಟೆಲ್‌, ವಿಪ್ರೊ ಮತ್ತಿತರ ಕಂಪೆನಿಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.ಸಮಾವೇಶದಲ್ಲಿ ಭಾಗವಹಿಸಲು ಬಯಸು­ವವರು www.ges.ecell-iitkgp.org ವೆಬ್‌ಸೈಟ್‌ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 78726 84123 / 74065 31376 ಅನ್ನು ಸಂಪರ್ಕಿಸಲು ಕೋರಲಾಗಿದೆ.

ಪ್ರತಿಕ್ರಿಯಿಸಿ (+)