ಗುರುಮಠಕಲ್: ರೈತರ ತೊಗರಿ ಬೆಳೆಗೆ ಬೆಂಬಲ ಬೆಲೆ ನೀಡುವುದಾಗಿ ತಿಳಿಸಿ ಜಿಲ್ಲೆಯ 4 ಕೇಂದ್ರಗಳಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿದರು. ಬೆಳೆ ಮಾರಾಟವಾಗುವುದು ಎಂದು ಖರೀದಿ ಕೇಂದ್ರಕ್ಕೆ ತಂದ ರೈತರ ಗೋಳು ಕೇಳುವವರಿಲ್ಲದೇ ಪರದಾಡುವಂತಾಗಿದೆ.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಆರಂಭಿಸಲಾದ ತೊಗರಿ ಖರೀದಿ ಕೇಂದ್ರಕ್ಕೆ ಮಾರ್ಚ್ 6ರಂದು ತೊಗರಿ ತಂದ ಇಮ್ಲಾಪುರದ ರೈತರಾದ ನಾರಾಯಣ ಗುಟ್ಟಲ್, ಭೀಮಶಪ್ಪ ಬುಡ್ಡಭೀಮನೋಳ್ ಕಳೆದ 9 ದಿನಗಳಿಂದ ಕೇಂದ್ರದ ಮುಂದೆ ಬೆಳೆ ಇಟ್ಟುಕೊಂದು ರಾತ್ರಿ ಹಗಲೆನ್ನದೇ ಕಾವಲು ಕುಳಿತ್ತಿದ್ದಾರೆ.

ಮಾ.6ರಂದು ತಮ್ಮಲ್ಲಿ ಬೆಳೆ ಖರೀದಿಗೆ ಸಂಬಂಧ ಪಟ್ಟ ದಾಖಲೆಗಳನ್ನು ಅಧಿಕಾರಿಗಳು ಪಡೆದಿದ್ದು ಇನ್ನೆನೂ ತೂಕ ಮಾಡಿ ಬೆಳೆ ತೆಗೆದುಕೊಳ್ಳುವಷ್ಟರಲ್ಲಿ ನಾಳೆ ಬರುತ್ತೇವೆ, ನಾಳೆ ತೂಕ ಮಾಡಲಾಗುವುದು ಎಂದು ಹೇಳಿ ತೆರಳಿದ ಅಧಿಕಾರಿಗಳು ಇದುವರೆಗೂ ಸುಳಿದಿಲ್ಲಾ. ಕೇಂದ್ರದ ಮುಂದೆ ಹಾಕಿದ ಬೆಳೆಗೆ ರಕ್ಷಣೆ ಇಲ್ಲದೇ ರಾತ್ರಿ ಹಗಲೆನ್ನದೇ ಚೀಲದ ಸುತ್ತಲೂ ಮುಳ್ಳು ಬೇಲಿ ಹಾಕಿಕೊಂಡು ಕಾಲ ಕಳೆಯುತ್ತಿದ್ದಾರೆ.

ಜಾನುವಾರುಗಳು, ಹಂದಿಗಳು ಬೆಳೆಗೆ ಬಾಯಿ ಹಾಕುತ್ತಿರುವುದನ್ನು ತಪ್ಪಿಸಲು ಹರಸಾಹಸ ಪಡಬೇಕಾಗಿದೆ. ಇನ್ನೊಂದೆಡೆ ಚೀಲಗಳಿಗೆ ಗೆದ್ದಲು ಅಂಟಿಕೊಂಡು ಬೆಳೆ ಹಾಕಿದ್ದ ಚೀಲಗಳು ನಾಶವಾಗಿದ್ದು ಬಯಲಿಗೆ ಹಾಕಿ ಕೊಂಡು ಕುಳಿತ್ತಿದ್ದು ಅವರ ಗೋಳು ಕೇಳಲು ಯಾವ ಒಬ್ಬ ಅಧಿಕಾರಿಯು ಬಂದ್ಲ್ಲಿಲ. ಖರೀದಿ ಮಾಡುವುದಾಗಿ ಭರವಸೆ ನೀಡಿ ದಾಖಲೆಗಳನ್ನು ಪಡೆದು ಮೋಸ ಮಾಡಿದ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಯಾದಗಿರಿ ಜಿಲ್ಲೆಯ 4 ಕೇಂದ್ರಗಳಾದ ಶಹಾಪುರ-2,273, ಸುರಪುರ-1,668, ಯಾದಗಿರಿ-1,428 ಮತ್ತು ಗುರುಮಠಕಲ್-580 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ. ತೊಗರಿ ಖರೀದಿಗಾಗಿ ಇದುವರೆಗೆ ಸರ್ಕಾರದ ಯಾವುದೇ ಅನುದಾನವ್ಲ್ಲಿಲ ಸರ್ಕಾರದ ಹಂತದಲ್ಲಿ ತೊಗರಿ ಖರೀದಿಗಾಗಿ ಲೋನ್ ರೂಪದಲ್ಲಿ ಹಣವನ್ನು ನೀಡಲಾಗಿ ಅದನ್ನು ಎರಡು ತಿಂಗಳಲ್ಲಿ ನಾವು ವಾಪಸ್ ಮಾಡಬೇಕಾಗಿದೆ ಸರ್ಕಾದ ಹಂತದಲ್ಲಿ ಯಾವ ರೀತಿಯ ನಿರ್ದೇಶನ ಬರುತ್ತದೆಯೋ ಆ ರೀತಿಯಲ್ಲಿ ತಾವು ಕೆಲಸ ಮಾಡುವುದಾಗಿ ಮತ್ತು ಎರಡನೇ ಹಂತದ ಹಣ ಮಂಜೂರಾದರೆ ಮಾತ್ರ ತೊಗರಿ ಖರೀದಿ ಕೇಂದ್ರ ಪ್ರಾರಂಭವಾಗುತ್ತದೆ ಇಲ್ಲವಾದಲ್ಲಿ ಇ್ಲ್ಲಲ ಎಂದು ತೊಗರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ ಗಡ್ಡಿಮನಿ ತಿಳಿಸಿದ್ದಾರೆ.

ತೊಗರಿ ಕೇಂದ್ರದಲ್ಲಿ ಮಾ.6ರಂದು ಖರೀದಿ ಸ್ಥಗಿತಗೊಂಡರೆ ಮಾ.14ರಂದು ಸಿಬ್ಬಂದಿಯೊಬ್ಬರು ಬಂದು ಕೇಂದ್ರದ ಮುಂದೆ 13ರಿಂದ ತೊಗರಿ ಖರೀದಿ ಸ್ಥಗಿತಗೊಂಡಿದೆ ಎಂಬ ಮಾಹಿತಿ ಫಲಕ ತೂಗು ಹಾಕಿರುವುದು ಅಧಿಕಾರಿಗಳ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಕನ್ನಡಿಯಾಗಿದೆ. ಸೂಕ್ತ ಮಾಹಿತಿ ನೀಡದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಪರದಾಡುವಂತಾಗಿದೆ. ಕೂಡಲೇ ತೊಗರಿ ಖರೀದಿ ಕೇಂದ್ರ ಆರಂಭವಾಗದಿದ್ದರೇ ಬೆಳೆಯನ್ನು ರಸ್ತೆಗೆ ಚೆಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ರೈತರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.