ಶುಕ್ರವಾರ, ಜೂನ್ 25, 2021
29 °C
ನಾನು ಸಮರ್ಥ ಆಮ್‌ ಆದ್ಮಿ– ವಾಸುದೇವ್‌

ಖಾಲಿ ಕುರ್ಚಿಯ ಮುಂದೆ ಪ್ರಚಾರ ಕಾರ್ಯತಂತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಅದು ಜಿಲ್ಲಾ ಮಟ್ಟದ ಕಾರ್ಯಕರ್ತರ ಚುನಾವಣಾ ಕಾರ್ಯ ತಂತ್ರ ಸಭೆ. ಎಲ್ಲಾ ಎಂಟು ವಿಧಾನ ಸಭಾ ಕ್ಷೇತ್ರಗಳ ಪ್ರಮುಖ ಕಾರ್ಯ ಕರ್ತರು ಅಲ್ಲಿರಬೇಕಿತ್ತು. ಆದರೆ ಇದ್ದುದು ಬೆರಳೆಣಿಕೆಯ ಮಂದಿ ಮಾತ್ರ. ಸುಳ್ಯ ಕ್ಷೇತ್ರದವರು ಯಾರಿದ್ದಾರೆ ಕೈಎತ್ತಿ ಎಂದು ಕೂಗಿದರೆ ಒಬ್ಬರೂ ಇಲ್ಲ. ಬೆಳ್ತಂಗಡಿ, ಪುತ್ತೂರಿನ ಒಬ್ಬೊಬ್ಬರು ಇದ್ದರು. ಇಂತಹ ಸ್ಥಿತಿಯಲ್ಲೇ ಕಾರ್ಯತಂತ್ರ ಸಭೆ ನಡೆಯಿತು.ಇದು ನಡೆದುದು ಭಾನುವಾರ ನಗರದ ಡಾನ್‌ ಬಾಸ್ಕೊ ಸಭಾಂಗಣದಲ್ಲಿ. ಆಮ್‌ ಆದ್ಮಿ ಪಕ್ಷದ ಚುನಾವಣಾ ಕಾರ್ಯತಂತ್ರ ರೂಪಿಸುವುದಕ್ಕಾಗಿ ಸಂಜೆ 4.30ಕ್ಕೆ ಸಭೆ ಕರೆಯಲಾಗಿತ್ತು. 5.30 ಗಂಟೆಯಾದರೂ ಸೇರಿದ ಕಾರ್ಯಕರ್ತರ ಸಂಖ್ಯೆ 25ರಷ್ಟು ಮಾತ್ರ! ಆದರೂ ಪಕ್ಷದ ಅಭ್ಯರ್ಥಿ ಎಂ.ಆರ್‌.ವಾಸುದೇವ್ ಚುನಾವಣಾ ಕಾರ್ಯತಂತ್ರ ಹೆಣೆಯುತ್ತಿದ್ದರು. ಜಿಲ್ಲಾ ಸಂಚಾಲಕ ಧರ್ಮೇಶ್‌ ಜತೆಗಿ ದ್ದರು. ದೊಡ್ಡ ಸಭಾಂಗಣದ ಖಾಲಿ ಕುರ್ಚಿಗಳು ಚುನಾವಣಾ ಕಾರ್ಯ ತಂತ್ರವನ್ನು ಕಂಡು ಅಣಕಿಸುತ್ತಿದ್ದವು.ಸಮರ್ಥ ಅಭ್ಯರ್ಥಿ:ಶನಿವಾರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಡೆದ ವಿದ್ಯಮಾನವನ್ನೇ ಉಲ್ಲೇಖಿಸಿ ತಮ್ಮ ಮಾತು ಆರಂಭಿಸಿದ ಎಂ.ಆರ್‌.ವಾಸುದೇವ್‌, ಭ್ರಷ್ಟಾಚಾರ ನಿಗ್ರಹಿಸುವ ಕನಸು ಹೊತ್ತ, ಅಭಿ ವೃದ್ಧಿಯ ಸ್ಪಷ್ಟ ದೂರದೃಷ್ಟಿ ಇಟ್ಟುಕೊಂಡಿರುವ ಸಮರ್ಥ ಅಭ್ಯರ್ಥಿ ತಾವು ಎಂದರು.ನಮೋ ಬ್ರಿಗೇಡ್‌ ನವರು ತಮ್ಮನ್ನು ಕರೆಸಿದ್ದು ಮಂಗ ಳೂರು ಮ್ಯಾನೇಜ್‌ಮೆಂಟ್‌ ಅಸೋಸಿ ಯೇಶನ್‌ನ ಅಧ್ಯಕ್ಷನ ನೆಲೆಯಲ್ಲಿ ಆರ್ಥಿಕ ಸಲಹೆಗಾಗಿಯೇ ಹೊರತು, ಪಕ್ಷದ ಹಿತೈಷಿಯಾಗಿ ಅಲ್ಲ. ಭಾರತೀಯ ವಿದ್ಯಾಭವನ, ಸಂಗೀತ ಪರಿಷತ್‌ನಂತಹ ಹಲವಾರು ಸಂಘಟನೆಗಳಲ್ಲಿ ಸಕ್ರಿಯ ರಾಗಿರುವ ತಾವು ಇತರ ಪಕ್ಷದವರು ಕರೆದರೆ ಇನ್ನು ಮುಂದೆಯೂ ಸೂಕ್ತ ಸಲಹೆ, ಸಹಕಾರ ನೀಡಲು ಅವರಲ್ಲಿಗೆ ಹೋಗದೆ ಇರುವುದಿಲ್ಲ ಎಂದರು.‘ನಾನು ವಿವಿಧ ಪಕ್ಷಗಳ ನಾಯಕರನ್ನು ಹಿಡಿದುಕೊಂಡು ಮಂಗಳೂರು ವಿಮಾನನಿಲ್ದಾಣದ ಅಭಿವೃದ್ಧಿಗೆ ಶ್ರಮಿಸಿ ದ್ದೇನೆ. ನನ್ನ ಕ್ರಿಯಾಶೀಲತೆಯಿಂ ದಾಗಿಯೇ ವಿಮಾನನಿಲ್ದಾಣ ಇಂದು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿದೆ. ಇಲ್ಲವಾಗಿದ್ದರೆ ಇನ್ನು ಐದು ವರ್ಷ ವಾದರೂ ಅದರ ಸ್ಥಿತಿಗತಿ ಸುಧಾರಿ ಸುತ್ತಿರಲಿಲ್ಲ. ವಿಮಾನ ನಿಲ್ದಾಣದ ಅಭಿವೃದ್ಧಿಯಲ್ಲಿ ಎದುರಾಗಿದ್ದ ಹಲವಾರು ಅಡೆತಡೆಗಳನ್ನು ಸಮರ್ಥ ವಾಗಿ ನಿಭಾಯಿಸಿದ ಹೆಮ್ಮೆಯೂ ನನಗಿದೆ.ಇಲ್ಲೆಲ್ಲ ನನಗೆ ನೆರವಾಗಿದ್ದುದು ನನ್ನ ಮೇಲಿನ ಆತ್ಮವಿಶ್ವಾಸ ಮತ್ತು ಇತರರನ್ನು ಮನವೊಲಿಸುವ ನನ್ನ ಕೌಶಲ. ಇದೇ ರೀತಿಯಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿ ಕೋನ ನನ್ನಲ್ಲಿದೆ. ಭದ್ರಾ ಜಲಾಶಯದ ಮುಳುಗಡೆ ಪ್ರದೇಶದಿಂದ ಬಂದ, 11 ಮಕ್ಕಳ ಕುಟುಂಬದಲ್ಲಿ ಬೆಳೆದ ನನಗೆ ಬಡತನ, ಬಡವರ ಕಷ್ಟ ಏನೆಂಬುದು ಗೊತ್ತಿದೆ.ಮನೆಯಲ್ಲಿ ನೆಮ್ಮದಿಯಿಂದ ಇದ್ದ ನನ್ನನ್ನು ಎಳೆದು ತಂದು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದೇ ಜನತೆ, ಇದೀಗ ಪಕ್ಷದಲ್ಲೇ ಇಲ್ಲದ ಯಾರೋ ಏನೋ ಹೇಳಿದರೆಂದು ನಾನು ಎದೆಗುಂದುವ ಪ್ರಶ್ನೆಯೇ ಇಲ್ಲ’ ಎಂದು ವಾಸುದೇವ್‌ ತಿಳಿಸಿದರು.ಮಂಗಳೂರು ನಗರ, ತಾಲ್ಲೂಕು ಕೇಂದ್ರಗಳಿಗೆ ತೆರಳಿ ಸಾಧ್ಯವಾದಷ್ಟು ಮಟ್ಟಿಗೆ ಜನರಿಗೆ ಎಎಪಿ ಬಗ್ಗೆ ತಿಳಿಸುವ ಕರಪತ್ರ ಹಂಚಲು, ಕೊನೆಯ ಹಂತದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿ ಜನರ ಮನವೊಲಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.