ಬೆಂಗಳೂರು: `ಸಂವಿಧಾನದ 21(ಎ) ಕಲಂ ಅನ್ವಯ ಖಾಸಗಿ ಶಿಕ್ಷಣ ಸಂಸ್ಥೆಗಳೂ ಸಹ, 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕಲ್ಲವೇ?' ಎಂದು ಹೈಕೋರ್ಟ್ ಮೌಖಿಕವಾಗಿ ಪ್ರಶ್ನಿಸಿದೆ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಸಂಗ್ರಹಿಸಬಹುದಾದ ಶುಲ್ಕದ ಪ್ರಮಾಣ ಕುರಿತು ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ, ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ) ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ, ಕೋರ್ಟ್ನ ಏಕಸದಸ್ಯ ನ್ಯಾಯಪೀಠ ಈ ಪ್ರಶ್ನೆಯನ್ನು ಮುಂದಿಟ್ಟಿದೆ.

6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಬೇಕು ಎಂದು ಸಂವಿಧಾನದ 21(ಎ) ಕಲಂ ಹೇಳುತ್ತದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಸ್ವರೂಪ ಹೇಗಿರಬೇಕು ಎಂಬುದನ್ನು ಸರ್ಕಾರ ಕಾನೂನಿನ ಮೂಲಕ ನಿಗದಿ ಮಾಡಬೇಕು ಎಂದೂ ಇದೇ ಕಲಂ ಹೇಳುತ್ತದೆ. 21(ಎ) ಕಲಂ ಅನ್ವಯ ಶಿಕ್ಷಣವು ಮೂಲಭೂತ ಹಕ್ಕಾಯಿತು.

ಏನು ಪ್ರಕರಣ?: ಖಾಸಗಿ ಶಾಲೆಗಳು ಪ್ರತಿ ವಿದ್ಯಾರ್ಥಿಯಿಂದ ಗರಿಷ್ಠ ಎಷ್ಟು ಶುಲ್ಕ ಸಂಗ್ರಹಿಸಬಹುದು ಎಂಬುದನ್ನು ನಿಗದಿ ಮಾಡಿ, ಸರ್ಕಾರ 2000ನೇ ಇಸವಿಯಲ್ಲೇ ಒಂದು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಕೆಲವು ಅಂಶಗಳು ಖಾಸಗಿ ಶಾಲೆಗಳ ಸ್ವಾಯತ್ತೆಗೆ ಧಕ್ಕೆ ತರುವಂತಿದೆ. ವಿದ್ಯಾರ್ಥಿಗಳಿಂದ ಎಷ್ಟು ಶುಲ್ಕ ಸಂಗ್ರಹಿಸಬಹುದು ಎಂಬುದನ್ನು ಶಾಲೆಗಳ ಆಡಳಿತ ಮಂಡಳಿಗಳು ನಿರ್ಧರಿಸಲು ಈ ಅಧಿಸೂಚನೆ ಅವಕಾಶ ನೀಡುವುದಿಲ್ಲ. ಅಧಿಸೂಚನೆಯು ಖಾಸಗಿ ಶಾಲೆಗಳ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವಂತಿದೆ. ಇದನ್ನು ರದ್ದು ಮಾಡಬೇಕು ಎಂಬ ಕೋರಿಕೆ `ಕುಸ್ಮಾ' ಸಲ್ಲಿಸಿರುವ ಅರ್ಜಿಯಲ್ಲಿದೆ.

ಅರ್ಜಿಯ ವಿಚಾರಣೆಯನ್ನು ಇತ್ತೀಚೆಗೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅವರು, `21(ಎ) ಕಲಂ ಅನ್ವಯ ಖಾಸಗಿ ಶಾಲೆಗಳೂ ಉಚಿತ ಶಿಕ್ಷಣ ಒದಗಿಸಬೇಕು ಅಲ್ಲವೇ?' ಎಂದು `ಕುಸ್ಮಾ' ಪರ ವಕೀಲರನ್ನು ಮೌಖಿಕವಾಗಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ, `21(ಎ) ಕಲಂ ಅನ್ವಯ ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್ಲರಿಗೂ ಉಚಿತ ಶಿಕ್ಷಣ ನೀಡಬೇಕೇ ಎಂಬುದನ್ನು ಶಾಸನಸಭೆಗಳು ನಿರ್ಧರಿಸುತ್ತವೆ. ಅದು ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ' ಎಂದು `ಕುಸ್ಮಾ' ಪರ ವಕೀಲರು ವಾದಿಸಿದ್ದಾರೆ.

ಇದೇ ಪ್ರಕರಣದ ವಿಚಾರಣೆ ವೇಳೆ ನ್ಯಾ. ರಮೇಶ್ ಅವರು, `ಈ ಕಲಂ ಪ್ರಕಾರ, 6ರಿಂದ 14 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕಿತ್ತು. ಶಿಕ್ಷಣ ಹಕ್ಕು ಕಾಯ್ದೆಯ ಅಡಿ ಖಾಸಗಿ ಶಾಲೆಗಳಿಗೆ ಸೇರ್ಪಡೆ ಆಗುವ ವಿದ್ಯಾರ್ಥಿಗಳು ಮಾತ್ರವಲ್ಲ, ಇನ್ನುಳಿದ ವಿದ್ಯಾರ್ಥಿಗಳು ಶುಲ್ಕ ಮರುಪಾವತಿಗೆ ಕೋರಿದರೆ ಅದನ್ನು ಒಪ್ಪಿಕೊಳ್ಳಬೇಕು' ಎಂದು ಹೇಳಿದ್ದರು.

ಅಲ್ಲದೆ, ವಿದ್ಯಾರ್ಥಿಗಳು ನೀಡಬೇಕಿರುವ ಶುಲ್ಕವನ್ನು ಸರ್ಕಾರವು ಶಾಲೆಗಳಿಗೆ ಪಾವತಿ ಮಾಡಬೇಕಾಗುತ್ತದೆ ಎಂದೂ ನ್ಯಾ. ರಮೇಶ್ ಅವರು ಹಿಂದೆಯೇ ಹೇಳಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಯವರು ಸೋಮವಾರದಿಂದ ಮತ್ತೆ ನಡೆಸಲಿದ್ದಾರೆ. ಕೆಲವು ಖಾಸಗಿ ಶಾಲೆಗಳು ದುಬಾರಿ ಶುಲ್ಕ ವಸೂಲು ಮಾಡುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯೂ, `ಕುಸ್ಮಾ' ಸಲ್ಲಿಸಿರುವ ಅರ್ಜಿಯ ಜೊತೆಗೇ ನಡೆಯಲಿದೆ. ಅರ್ಜಿಗಳ ಕುರಿತು ಸರ್ಕಾರವೂ ತನ್ನ ನಿಲುವು ತಿಳಿಸಬೇಕು ಎಂದು ನ್ಯಾಯಮೂರ್ತಿಯವರು ಹೇಳಿದ್ದಾರೆ.

ವಿದ್ಯಾರ್ಥಿಗಳಿಂದ ಗರಿಷ್ಠ ಎಷ್ಟು ಶುಲ್ಕ ಪಡೆಯಬಹುದು (ಬಾಕ್ಸ್ ನೋಡಿ) ಎಂಬುದನ್ನು ಹೇಳಿರುವ ಅಧಿಸೂಚನೆ, ಶಾಲಾ ಕಟ್ಟಡದ ವಿಸ್ತರಣೆ, ಹೊಸ ಕಟ್ಟಡ ನಿರ್ಮಾಣ ಮತ್ತು ಕಲಿಕಾ ಉಪಕರಣಗಳ ಖರೀದಿಗೆ ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಮಾಡಬಹುದು ಎಂದು ಸ್ಪಷ್ಟಪಡಿಸಿದೆ. ಆದರೆ ಈ ಮೊತ್ತವನ್ನು ಒಬ್ಬ ವಿದ್ಯಾರ್ಥಿಯಿಂದ ಒಮ್ಮೆ ಮಾತ್ರ ಸಂಗ್ರಹಿಸಬಹುದು.

ಒಬ್ಬನೇ ವಿದ್ಯಾರ್ಥಿಯಿಂದ ಪದೇ ಪದೇ ಸಂಗ್ರಹ ಮಾಡುವಂತಿಲ್ಲ. ಈ ಮೊತ್ತವು ವಿದ್ಯಾರ್ಥಿಯೊಬ್ಬನಿಂದ ಸಂಗ್ರಹಿಸುವ ವಾರ್ಷಿಕ ಶುಲ್ಕಕ್ಕಿಂತ ಹೆಚ್ಚಿರಬಾರದು ಎಂದು ಅಧಿಸೂಚನೆ ತಾಕೀತು ಮಾಡಿದೆ.

ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಕ್ಕೆ ಸೂತ್ರ
ಸರ್ಕಾರ ಹೊರಡಿಸಿರುವ ಅಧಿಸೂಚನೆ ಅನ್ವಯ, ಖಾಸಗಿ ಶಾಲೆಗಳು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಪ್ರಮಾಣದ ಶುಲ್ಕವನ್ನು ವಿದ್ಯಾರ್ಥಿಗಳಿಂದ ಸಂಗ್ರಹ ಮಾಡುವಂತಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಎಷ್ಟು ಮೊತ್ತ ಸಂಗ್ರಹಿಸಬಹುದು ಎಂಬುದನ್ನು ಲೆಕ್ಕ ಹಾಕಲು ಅಧಿಸೂಚನೆಯಲ್ಲೇ ಒಂದು ಸೂತ್ರ ನೀಡಲಾಗಿದೆ. ಅದು ಹೀಗಿದೆ:

ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ನೀಡುವ ವೇತನದ ಒಟ್ಟು ವಾರ್ಷಿಕ ಮೊತ್ತ 1 ಲಕ್ಷ ರೂಪಾಯಿ ಎಂದಿಟ್ಟುಕೊಳ್ಳಿ. ವೇತನ ಪಾವತಿಗೆ ಬೇಕಿರುವ ಅಷ್ಟೂ ಮೊತ್ತವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸಬಹುದು.

ಅಲ್ಲದೆ, ವೇತನ ಪಾವತಿಗೆ ಬೇಕಿರುವ ಒಟ್ಟು ಮೊತ್ತದ ಶೇಕಡ 30ರಷ್ಟನ್ನು (ಅಂದರೆ, ಇಲ್ಲಿ 30 ಸಾವಿರ ರೂಪಾಯಿ) ಆಕಸ್ಮಿಕ ವೆಚ್ಚಗಳು ಮತ್ತು ಶಾಲೆಯ ನಿರ್ವಹಣಾ ವೆಚ್ಚಕ್ಕೆ ವಿದ್ಯಾರ್ಥಿಗಳಿಂದ ಸಂಗ್ರಹ ಮಾಡಬಹುದು. ಅಂದರೆ ಇಲ್ಲಿ ಉದಾಹರಣೆಗೆ ಬಳಸಿಕೊಂಡಿರುವ ಶಾಲೆಯು ಪ್ರತಿ ವರ್ಷ ತನ್ನ ವಿದ್ಯಾರ್ಥಿಗಳಿಂದ ಒಟ್ಟು 1.30 ಲಕ್ಷ ಶುಲ್ಕ ಸಂಗ್ರಹಿಸಬಹುದು.

ಆ ಶಾಲೆಯಲ್ಲಿ 100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದಾದಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿ ನೀಡಬೇಕಿರುವ ವಾರ್ಷಿಕ ಶುಲ್ಕ 1,300 ರೂಪಾಯಿ ಆಗುತ್ತದೆ. ಅಧಿಸೂಚನೆಯ ಈ ಅಂಶವನ್ನು `ಕುಸ್ಮಾ' ಬಲವಾಗಿ ವಿರೋಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.