ಶನಿವಾರ, ಜನವರಿ 18, 2020
27 °C

ಗಗನಕ್ಕೇರಿದ ತಿಪ್ಪೆ ಗೊಬ್ಬರದ ಬೆಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ರಾಸಾಯನಿಕ ಗೊಬ್ಬರದ ಬಳಕೆಯಿಂದ ಫಲವತ್ತಾದ ಭೂಮಿಗಳು ಹಾಳಾಗುತಿವೆ ಅಲ್ಲದೆ, ಪ್ರತಿ ಬೆಳೆಗೂ ಅಗತ್ಯ ರಸಗೊಬ್ಬರ ಬಳಕೆಯಿಂದ ಖರ್ಚು ಹೆಚ್ಚಾಗುತ್ತದೆ. ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ಕಡಿಮೆ ಖರ್ಚು, ಭೂಮಿಯ ಫಲವತ್ತತೆಗೆ ತಿಪ್ಪೆ ಗೊಬ್ಬರ ಬಳಕೆಗೆ ರೈತರು ಹೆಚ್ಚಿನ ಆಸಕ್ತಿ ವಹಿಸುತ್ತಿರುವುದರಿಂದ ತಿಪ್ಪೆ ಗೊಬ್ಬರದ ಬೆಲೆ ಗಗನಕ್ಕೇರಿದೆ.ಈ ಮುಂಚೆ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆಕಾಲ ಅಂತ್ಯ ಹಾಗೂ ಮಳೆಗಾಲ ಆರಂಭದ ದಿನಗಳಲ್ಲಿ ತಿಪ್ಪೆಗೊಬ್ಬರವನ್ನು ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಜಮೀನಿಗೆ ಹೇರುವುದು ಭಾರಿ ಉತ್ಸಾಹ ಮತ್ತು ಸಂಭ್ರಮ ಕಾಣುತ್ತಿತ್ತು. ಆದರೆ, ಕೃಷಿ ಚಟುವಟಿಕೆಗಳಲ್ಲಿ ತಂತ್ರಜ್ಞಾನದ ಆವಿಷ್ಕಾರ, ಯಂತ್ರಗಳ ಮತ್ತು ರಾಸಾಯನಿಕ ಗೊಬ್ಬರ ಬಳಕೆಯಿಂದ ಆ ಸಂಭ್ರಮಾಚರಣೆ ಕಣ್ಮರೆಯಾಗಿದೆ.ಯಂತ್ರಗಳ ಬಳಕೆಯಿಂದ, ಬರಗಾಲದ ಭವಣೆಗೆ ಜಾನುವಾರ ಸಾಕಾಣಿಕೆ ಕ್ಷೀಣಿಸಿದೆ. ಈ ಮಧ್ಯೆ ರೈತ ತಿಪ್ಪೆಗೊಬ್ಬರದತ್ತ ಹೆಚ್ಚಿನ ಒಲವು ತೋರುತ್ತಿರುವುದು ಭಾರಿ ಬೇಡಿಕೆಗೆ ಕಾರಣವಾಗಿದೆ. ರೂ.1000 ದಿಂದ 1200 ಇದ್ದ ಒಂದು ಟ್ರ್ಯಾಕ್ಟರ್ ತಿಪ್ಪೆಗೊಬ್ಬರದ ಬೆಲೆ ಸಧ್ಯ ರೂ. 3000 ದಿಂದ 3500 ಆಗಿದೆ. ಟ್ರ್ಯಾಕ್ಟರ್ ಮೂಲಕ ಜಮೀನಿಗೆ ಹೇರಿ, ಹರಹಲು ಅಂದಾಜು ರೂ.5000ಸಾವಿರ ಖರ್ಚು ತಗಲುತ್ತಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ.ಹಂದಿ, ಕೋಳಿ, ಕುರಿ ಸೇರಿದಂತೆ ಇತರೆ ಕೆಲ ಜಾನುವಾರುಗಳ ಗೊಬ್ಬರ ತಿಪ್ಪೆಗೊಬ್ಬರಕ್ಕಿಂತ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ. ಕೆಲ ರೈತರು ಎಷ್ಟೆ ತುಟ್ಟಿಯಾಗಲಿ ಜಮೀನಿನ ಫಲವತ್ತತೆ ಉಳಿಬೇಕು, ಹೆಚ್ಚುವರಿ ಇಳುವರಿ ಪಡೆಯಬೇಕು ಎಂಬ ಜಿಜ್ಞಾಸೆವುಳ್ಳವರು ತಿಪ್ಪೆಗೊಬ್ಬರದತ್ತ ಮುಖಮಾಡಿದ್ದಾರೆ. ಬೆಲೆ ಕೈಗೆಟುಕದ ಬಹುತೇಕ ರೈತರು ಮಾತ್ರ ರಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ ಎಂದು ರೈತ ಮುಖಂಡ ಅಮರಣ್ಣ ಸಮಸ್ಯೆ ಹೇಳಿಕೊಂಡರು.ಪ್ರಗತಿಪರ ರೈತ ಮುಖಂಡ ಶರಣಗೌಡ ಬಸ್ಸಾಪುರ ಅವರನ್ನು ಸಂಪರ್ಕಿಸಿದಾಗ ರಾಸಾಯನಿಕ ಗೊಬ್ಬರ ಬಳಕೆ ರೈತರು ಸಂಕಷ್ಟ ಸಿಲುಕಿಸಿದೆ. ಸಾವಯವ ಕೃಷಿಯತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಹೀಗಾಗಿ ತಿಪ್ಪೆಗೊಬ್ಬರಕ್ಕೆ ಭಾರಿ ಬೆಲೆ ಬಂದಿದೆ. ತಿಪ್ಪೆಗೊಬ್ಬರ ಬಳಕೆಯಿಂದ ಜಮೀನಿನ ಫಲವತ್ತತೆ ಕಾಪಾಡುವ ಜೊತೆಗೆ ಒಮ್ಮೆ ಜಮೀನಿಗೆ ಹಾಕಿದರೆ ಕನಿಷ್ಠ 8-10 ವರ್ಷ ರೈತ ನಿಶ್ಚಿಂತಿ ಬೆಳೆ ಪಡೆಯಬಹುದಾಗಿದೆ. ಹೀಗಾಗಿ ತಿಪ್ಪೆಗೊಬ್ಬರದ ಬೆಲೆ ಗಗನಕ್ಕೇರಿದೆ ಎಂದು ಅನುಭವ ಹಂಚಿಕೊಂಡರು.

ಪ್ರತಿಕ್ರಿಯಿಸಿ (+)