ಶನಿವಾರ, ಏಪ್ರಿಲ್ 17, 2021
31 °C

ಗರಿಬಿಚ್ಚಿದ ತಿರಂಗ; ಮೊಳಗಿದ ದೇಶಭಕ್ತಿ ಗೀತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮೇಲ: ಸಮೀಪದ ಗುಡ್ಡಳ್ಳಿ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 66 ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು.ಧ್ವಜಾರೋಹಣವನ್ನು ಗ್ರಾಮದ ಹಿರಿಯರಾದ ಮಳೇಂದ್ರಯ್ಯ ಮಠ ನೆರವೇರಿಸಿದರು. ಅಧ್ಯಕ್ಷತೆಯನ್ನು ಎಸ್. ಡಿ.ಎಂ.ಸಿ ಅಧ್ಯಕ್ಷ ಸಾತಲಿಂಗಪ್ಪಗೌಡ ಬಿರಾದಾರ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಶಿವಶಂಕರ ಬಿರಾದಾರ,ಗ್ರಾಪಂ ಸದಸ್ಯ ಲಕ್ಷ್ಮಣ ಭತಗುಣ,ಸಿದ್ದಪ್ಪ ನಾಲ್ಕಮನ, ಸಿದ್ಧನಗೌಡ ಬಿರಾದಾರ, ಮಲ್ಲನಗೌಡ ಪಾಟೀಲ,ವಿಠ್ಠಲಗೌಡ ಬಿರಾದಾರ, ಮಹಾಂತಗೌಡ ಬಿರಾದಾರ,ಬಾಬುರಾಯ ಬಿರಾದಾರ, ಮಲ್ಲಿಕಾರ್ಜುನ ಟೆಂಗ,ಬಾಬು ಪಟೇಲ ಕಡಣಿ, ಶಿಕ್ಷಕರಾದ ರಾಜು ಭೂಸನೂರ,ಎ.ಎಸ್.ಡಂಬಳಕರ,ಎಸ್.ಸಿ ಮೇತ್ರಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಭುವನೇಶ್ವರಿ ಓತಿಹಾಳ ಹಾಗೂ ನಮ್ರತಾ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಮುಖ್ಯೋಪಾಧ್ಯಾಯ ಎಸ್.ಬಿ.ಪಾತಾಳಿ ಸ್ವಾಗತಿಸಿದರು, ಯು. ಪರಮೇಶ್ವರ ನಿರೂಪಿಸಿದರು.ದೇವಣಗಾಂವ  ಗ್ರಾಪಂ ಕಾರ್ಯಾಲಯ : ಸಮೀಪದ ದೇವಣಗಾಂವ ಗ್ರಾ.ಪಂ. ಕಾರ್ಯಾಲಯ ಆವರಣದಲ್ಲಿ ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಹರಗೋಲ ಧ್ವಜಾರೋಹಣ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯ ಕಾಶೀನಾಥ ಗಂಗನಳ್ಳಿ ಕೋಲಿ,ಗ್ರಾಪಂ ಉಪಾಧ್ಯಕ್ಷ ರಾಜೇಂದ್ರ ಕಣ್ಮೇಶ್ವರ, ಗ್ರಾಪಂ ಸದಸ್ಯೆ ಪಂಚಾಕ್ಷರಿ ಖೇಳಗಿ, ಸಿದ್ದಯ್ಯ ಮಠಪತಿ, ಬಸವರಾಜ ತಾವರಖೇಡ, ಜಗನ್ನಾಥ ಸೊಡ್ಡಿ ಷಣ್ಮುಖಪ್ಪ ಸೋಮನಾಯಕ, ಮಲ್ಲೇಶಿ ಹೊಸಮನಿ , ಚಾಂದ್‌ಸಾಬ್ ಅಡಾಡಿ, ಸಿದ್ದಪ್ಪ ಅತಾಪಿ ಉಪಸ್ಥಿತರಿದ್ದರು.ವ್ಯವಸಾಯ ಸೇವಾ ಸಹಕಾರ ಸಂಘ ದೇವಣಗಾಂವ: ಸಮೀಪದ ದೇವಣಗಾಂವ  ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಗ್ರಾಮದ ಹಿರಿಯರಾದ ಗುರುರಾಜ ಕುಲಕರ್ಣಿ ಧ್ವಜಾರೋಹಣ ನೆರವೇರಿಸಿದರು.ಸಿದ್ದಾರಾಮ ಹಂಗರಗಿ,ಶಿವಪ್ಪ ಹಾಳಕಿ, ಶಿವಪ್ಪಮೇತ್ರಿ, ಪಂಪಣ್ಣ ರಜಪೂತ,ಚನ್ನಪ್ಪ ಗಂಗನಳ್ಳಿ,ಗಾಲಿಬ ನಾಗಾವಿ ಡಾ.ಸಿದ್ದಣ್ಣ ಪಾಟೀಲ ಮುಂತಾದವರಿದ್ದರು.ನ್ಯೂ ಇಂಗ್ಲಿಷ್ ಶಾಲೆ ಆಲಮೇಲ: ಆಲಮೇಲ ಪಟ್ಟಣದ ಬಸವ ನಗರದಲ್ಲಿನ  ನ್ಯೂ ಇಂಗ್ಲಿಷ್ ಶಾಲೆಯಲ್ಲಿ  ಧ್ವಜಾರೋಹಣವನ್ನು ಎಂ.ಡಿ.ಪಾಟೀಲ (ಗಾಂಧಿಗೌಡ) ನೆರವೇರಿಸಿದರು.ಸಮಾರಂಭದ ಅದ್ಯಕ್ಷತೆಯನ್ನು ಶಾಲಾ ಸಂಚಾಲಕ ಬೋಗೇಶ್ ತೇಲಿ ವಹಿಸಿದ್ದರು. ಶರಣಗೌಡ ಪಾಟೀಲ, ಪ್ರವೀಣ ಕಂದಾರೆ, ಅಭಿಶೇಖ ಬೋವಿ, ಮಲ್ಲಿಕಾರ್ಜುನ ದಾಳಿ ಉಪಸ್ಥಿತರಿದ್ದರು.ಬಸವನಬಾಗೇವಾಡಿ ವರದಿ

ಬಸವನಬಾಗೇವಾಡಿ: ದೇಶದ ಸ್ವಾತಂತ್ರ್ಯಕ್ಕಾಗಿ  ಭಗತ್‌ಸಿಂಗ್, ಚಂದ್ರಶೇಖರ ಆಝಾದ್, ಮದನಲಾಲ ದಿಂಗ್ರಾ ನಗುನಗುತ್ತಾ  ತಮ್ಮ ಜೀವನ ತ್ಯಾಗ ಮಾಡಿದರು. ಅವರ ತ್ಯಾಗ ಬಲಿದಾನದ ಫಲವಾಗಿ ಸ್ವಾತಂತ್ರ್ಯ ದೊರೆತಿದೆ.   ಎಂದು ವಿಶ್ವ ಹಿಂದು ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಣ್ಣ ಪಟ್ಟಣಶೆಟ್ಟಿ ಹೇಳಿದರು.ಸ್ಥಳೀಯ ಬಸವೇಶ್ವರ ದೇವಾಲಯ ಹೊರ ಆವರಣದಲ್ಲಿ ಆಗಸ್ಟ್ 14ರ ಮಧ್ಯರಾತ್ರಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.  ಪ್ರಾಸ್ತಾವಿಕ ಮಾತನಾಡಿದ ವಿಎಚ್‌ಪಿ ವಿಭಾಗೀಯ ಸಂಚಾಲಕ ಸಂಗನಗೌಡ ಪಾಟೀಲ ಮಾತನಾಡಿದರು.  ಜಿಲ್ಲಾ ಸಹ ಸಂಚಾಲಕ ಚಂದ್ರಶೇಖರ ಉಂಡೊಡಿ, ಮಾತನಾಡಿದರು, ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ಧಲಿಂಗದೇವರು  ಧ್ವಜಾರೋಹಣ ನೆರವೇರಿಸಿದರು, ಸುಶ್ಮೀತಾ ಉಕ್ಕಲಿ ಪ್ರಾರ್ಥನಾ ಗೀತೆ ಹೇಳಿದರು, ಶ್ರೀಮಂತ ಅವಟಿ  ದೇಶಭಕ್ತಿ ಗೀತೆ ಹೇಳಿದರು, ಪರಶುರಾಮ ಜಮಖಂಡಿ ಸ್ವಾಗತಿಸಿದರು, ತಾಲ್ಲೂಕು ಘಟಕದ ಕಾರ್ಯದರ್ಶಿ ಶಿವಾನಂದ ನಾಗರಾಳ ವಂದಿಸಿದರು. ರಾಜಶೇಖರ ಪಾಟೀಲ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.