ಗಾನ ಗುಂಗು
ಶಿವಶಕ್ತಿ ಇವೆಂಟ್ಸ್ ಹಾಗೂ ಮತ್ತಿಕೆರೆಯ ಪ್ರಿಸಂ ಮ್ಯೂಸಿಕ್ ಶಾಲೆ ಇತ್ತೀಚೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿನೂತನ ಸಂಗೀತ ಕಾರ್ಯಕ್ರಮ ನೆರೆದವರ ಮನಸೂರೆಗೊಂಡಿತು.
ಮಹೇಶ್ ಮಹದೇವ ಅವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಗೀತ್ ಬಂದಿಶ್ ಮಿಲನ’ ರಾಗ ಆಧಾರಿತ ಚಲನಚಿತ್ರ ಗೀತೆಗಳು ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಒಂದೇ ವೇದಿಕೆಯಲ್ಲಿ ಕೇಳುವ ಅವಕಾಶ ಒದಗಿಬಂದಿತ್ತು.
ಗಣೇಶ ನಮನ ನೃತ್ಯ, ಕೋಗಿಲೆ ಹಾಡಿದೆ ಕೇಳಿದೆಯಾ ಚಿತ್ರಗೀತೆ ಹಾಗೂ ಯಮನ್ ರಾಗದ ಬಂದಿಶ್‌ನೊಂದಿಗೆ ಹಿನ್ನೆಲೆ ಗಾಯಕಿ ಪ್ರಿಯದರ್ಶಿನಿ ಹಾಗೂ ಜಯತೀರ್ಥ ಮೇವುಂಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪೀಲು ರಾಗ, ಭೀಮ್‌ಪಲಾಸಿ ರಾಗದಿಂದ ಆಯ್ದ ಹಲವಾರು ಚಲನಚಿತ್ರ ಗೀತೆ, ಹಿಂದೂಸ್ತಾನಿ ಠುಮರಿ ಹಾಗೂ ಬಂದಿಶ್‌ನೊಂದಿಗೆ ಕಾರ್ಯಕ್ರಮ ಮುಂದುವರೆಯಿತು.
‘ಗಾನ ವಿದ್ಯಾ ಬಡಿ ಕಠಿಣ್ ಹೇ’ ಬಂದಿಶ್ ಹಾಡಿದ ಪ್ರಿಯದರ್ಶಿನಿ ಅವರಿಗೆ ವೇಣು ತಬಲಾದಲ್ಲಿ ಸಾಥ್ ನೀಡಿದರು. ಜಯತೀರ್ಥ ‘ಮೇರೆ ಡೋಲ್ ನಾ ಸುನ್ ತೇರೆ ಪ್ಯಾರ್ ಕಿ ಧುನ್’ ಹಾಡನ್ನು ಹಾಡಿದರು. ನಂತರ ಮುಂಬೈನ ಬಿರ್ಜು ಮಹಾರಾಜ್ ಅವರ ಶಿಷ್ಯವೃಂದದ ಕಥಕ್ ಪ್ರದರ್ಶನ ಮನಮೋಹಕವಾಗಿತ್ತು.
ಕಾರ್ಯಕ್ರಮದಲ್ಲಿ ಉನ್ನತಿ ಗ್ರೂಪ್‌ನ ಸಂಸ್ಥಾಪಕ ಗೋಪಿನಾಥ್, ಅಡಿಗಾಸ್ ಹೋಟೆಲ್‌ನ ಸಂಸ್ಥಾಪಕ ವಾಸುದೇವ ಅಡಿಗ, ನಟ ಶಿವರಾಮ್ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.