ಬುಧವಾರ, ಮೇ 25, 2022
22 °C

ಗಾಯಗೊಂಡ ಕೆವಿನ್ ಪೀಟರ್ಸನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಭಾರತ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಆಟದ ಮೂಲಕ ಫಾರ್ಮ್ ಕಂಡುಕೊಂಡಿದ್ದ ಇಂಗ್ಲೆಂಡ್ ತಂಡದ ಕೆವಿನ್ ಪೀಟರ್ಸನ್ ಐದನೇ ಪಂದ್ಯ ಶುರುವಾಗಲು ಕೆಲ ನಿಮಿಷ ಇರುವಾಗ ಆಘಾತಕ್ಕೊಳಗಾದರು.ಇಂಗ್ಲೆಂಡ್ ಬೌಲಿಂಗ್ ಕೋಚ್ ಮುಷ್ತಾಕ್ ಅಹ್ಮದ್ ಆಟಗಾರರಿಗೆ ಫೀಲ್ಡಿಂಗ್ ಅಭ್ಯಾಸ ಮಾಡಿಸುತ್ತಿದ್ದರು. ಆಗ ನಿಯೊ ಕ್ರಿಕೆಟ್ ಚಾನೆಲ್‌ನ ಸಿಬ್ಬಂದಿಯೊಂದಿಗೆ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಮಾತನಾಡುತ್ತಾ ನಿಂತಿದ್ದ ಅವರ ಕೈಗೆ ಚೆಂಡು ಬಂದಪ್ಪಳಿಸಿತು.ಈ ಕಾರಣ ಅವರ ಎಡಗೈ ಹೆಬ್ಬೆರಳು ಊದಿಕೊಂಡಿತು. ಹಾಗಾಗಿ ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ. ಅವರ ಬದಲಿಗೆ ಇಯಾನ್ ಬೆಲ್ ಸ್ಥಾನ ಪಡೆದರು.  ಮುಂಬೈನಲ್ಲಿ ನಡೆದ ನಾಲ್ಕನೇ ಪಂದ್ಯದ್ಲ್ಲಲ್ಲಿ ಕೂಡ ಫೀಲ್ಡಿಂಗ್ ವೇಳೆ ಅವರ ಕೈಗೆ ಪೆಟ್ಟಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.