ಮಂಗಳವಾರ, ಜೂನ್ 15, 2021
26 °C

ಗಾರೆ ಕೆಲಸಗಾರ ಲೋಕಸಭೆ ಅಭ್ಯರ್ಥಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಾರೆ ಕೆಲಸ ಮಾಡುವ ನಾಯಂಡಹಳ್ಳಿ ನಿವಾಸಿ ಪ್ರಭು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ  ನಾಮಪತ್ರ ಸಲ್ಲಿಸಿದ್ದಾರೆ.ಪ್ರಭು ಅವರ ಬಳಿ ಬ್ಯಾಂಕ್‌ ಖಾತೆಯಾಗಲಿ, ಪಾನ್‌ ಕಾರ್ಡಾಗಲಿ ಇಲ್ಲ. ಆದರೆ ಕೈಯಲ್ಲಿ ₨ 30 ಸಾವಿರ ನಗದು ಹಾಗೂ ಅಂದಾಜು ₨ 60 ಸಾವಿರ ಮೌಲ್ಯದ 20 ಗ್ರಾಂ ಚಿನ್ನ ಇದೆ ಎಂದು ನಾಮಪತ್ರದೊಂದಿಗೆ ನೀಡಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಾಥಮಿಕ ಶಿಕ್ಷಣ ಪಡೆದಿರುವ ಇವರ ಬಳಿ ಒಟ್ಟು 90 ಸಾವಿರ ಮೌಲ್ಯದ ಚರಾಸ್ತಿ ಇದೆ. ಇದನ್ನು ಹೊರತು ಪಡಿಸಿ ಮನೆ, ಖಾಲಿ ನಿವೇಶನ, ವಾಹನ ಸೇರಿದಂತೆ ಬೇರೆ ಯಾವ ಆಸ್ತಿಯೂ ಇಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.