ಮಂಗಳವಾರ, ಮೇ 24, 2022
30 °C

ಗಾಲ್ಫ್: ಗುರ್ಬಾನಿ ಸಿಂಗ್, ಅದಿತಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗುರ್ಬಾನಿ ಸಿಂಗ್ ಗುರುವಾರ ಇಲ್ಲಿ ಕೊನೆಗೊಂಡ ಉಷಾ ದಕ್ಷಿಣ ಭಾರತ ಮಹಿಳೆಯರ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆದರು.ಕರ್ನಾಟಕ ಗಾಲ್ಫ್ ಸಂಸ್ಥೆಯ (ಕೆಜಿಎ) ಕೋರ್ಸ್‌ನಲ್ಲಿ ನಡೆದ ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಗುರ್ಬಾನಿ 71 ಸ್ಕೋರ್ ಮಾಡಿದರು. ಒಟ್ಟು 219 ಸ್ಕೋರ್‌ಗಳೊಂದಿಗೆ ಅವರು ಮೊದಲ ಸ್ಥಾನ ಪಡೆದರು. ಗೌರಿ ಮೊಂಗಾ (222) ಹಾಗೂ ಸ್ಥಳೀಯ ಗಾಲ್ಫರ್ ಅದಿತಿ ಅಶೋಕ್ (235) ಮೂರನೇ ಸ್ಥಾನ ಪಡೆದರು.ಆದರೆ ಅದಿತಿ (218) ಈ ನಿರಾಶೆಯನ್ನು `ಬಿ~ (13ರಿಂದ 14 ವರ್ಷ) ವಿಭಾಗದ ಸ್ಪರ್ಧೆಯಲ್ಲಿ ಹೋಗಲಾಡಿಸಿದರು. ಅವರು ಈ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.