`ಮಾತಾಡ್ಬೇಕು ಮಿಂಚ್ ಹೊಡ್ದಂಗೆ' ಎನ್ನುತ್ತಾರೆ ಹಿರಿಯರು. ನಾವಾಡುವ ಪ್ರತಿ ಮಾತಿನಲ್ಲೂ ಮಿಂಚಿನ ಸಂಚಾರವಿರಬೇಕು. ಕೇಳಿದವರನ್ನು ಪ್ರಭಾವಿಸುವಂತಿರಬೇಕು. ಮಾತು ಬ್ರಹ್ಮಾಸ್ತ್ರವಿದ್ದಂತೆ. ನಮ್ಮ ಮಾತು ಕೇಳುಗರನ್ನು ದಶದಿಕ್ಕುಗಳಲ್ಲೂ ಆವರಿಸಿಕೊಳ್ಳುವಂತಿರಬೇಕು.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ನನ್ನೂರು. ಚನ್ನರಾಯಪಟ್ಟಣದ ಕೋಟೆ ನಿವಾಸಿಯಾದ್ದರಿಂದ ನನಗೆ ಕೋಟೆ ನಾಗಾರಾಜ ಎಂಬ ಹೆಸರು ಬಂತು. ಮೂಲತಃ ರಂಗಭೂಮಿ ಕಲಾವಿದನಾದ ನಾನು ಚಿಕ್ಕಂದಿನಿಂದಲೂ ಆಸಕ್ತ ಸ್ನೇಹಿತರ ಒಡಗೂಡಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. `ಗುರುಜ್ಯೋತಿ ಯುವಕ ಸಂಘ'ದ ಜತೆಗೂಡಿ ಆಡಿದ ನಾಟಕಗಳಿಗೆ ಲೆಕ್ಕವಿಲ್ಲ. ಒಂದರ್ಥದಲ್ಲಿ ಅಭಿನಯವೇ ನನ್ನ ಮಾತಿನ ಗಾರುಡಿಗೆ ತಳಹದಿ. ಅದು ನನ್ನ ವ್ಯಕ್ತಿತ್ವವನ್ನು ಪಕ್ವಗೊಳಿಸುತ್ತಾ ಹೋಯಿತು. ಎಲ್ಲಿ ವೇದಿಕೆ ಸಿಕ್ಕರೂ ಮೈಕ್ ಹಿಡಿದು ಮಾತನಾಡುವುದು ನನಗೆ ಮೊದಲಿನಿಂದಲೂ ಇರುವ ಗೀಳು. ನಮ್ಮ ಕುಟುಂಬದೊಳಗೆ ಹಾಗೂ ಸುತ್ತಮುತ್ತ ನಡೆವ ಸಣ್ಣ ಸಣ್ಣ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಅವನ್ನು ಮನಸ್ಸಿನಲ್ಲಿಟ್ಟುಕೊಂಡು ಅವುಗಳಿಗೆ ಮೊನಚು ಪದಗಳ ಉಡುಗೆ ತೊಡಿಸಿ ಪಂಚಿಂಗ್ ಹನಿಗವನಗಳನ್ನು ಕಟ್ಟುತ್ತಿದ್ದೆ. ಸಮಯ ಸಿಕ್ಕಾಗಲೆಲ್ಲಾ ಅವುಗಳನ್ನು ಹರಿಬಿಡುತ್ತಿದ್ದೆ.

ನಾನು ಒಮ್ಮೆ 91.1 ಚಾನೆಲ್ನಲ್ಲಿ ಹದಿನೈದು ನಿಮಿಷಗಳ ಸಂದರ್ಶನಕ್ಕೆ ಹೋಗಿದ್ದೆ. ಆಗ `ಅಂದು ಮುಳುಗಿದರು ಸಹಸ್ರಾರು ಜನರು ಟೈಟಾನಿಕ್ನಲ್ಲಿ, ಇಂದು ಪ್ರತಿದಿನ ಲಕ್ಷಾಂತರ ಜನರು ಮುಳುಗುತ್ತಿದ್ದಾರೆ ಟೈಟಾಗುವ ಟಾನಿಕ್ನಲ್ಲಿ' ಎಂಬ ಹನಿಗವನವನ್ನು ವಾಚಿಸಿದ್ದೆ. ಈ ಹನಿಗವನದ ವಾಚನಕ್ಕೆ ಶೋತೃಗಳಿಂದ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ನನಗೆ ಕಾರ್ಯಕ್ರಮವೊಂದನ್ನು ವಾಚಿಸುವ ಅವಕಾಶವೂ ಸಿಕ್ಕಿತು. ಚಾನೆಲ್ನವರು ನಿತ್ಯ ಬೆಳಿಗ್ಗೆ 8.10ರಿಂದ ರಾತ್ರಿ 9.10ರವರೆಗೆ, ಪ್ರತಿ ಗಂಟೆಗೊಮ್ಮೆ ಹನಿಗವನಗಳನ್ನು `ಪಂಚ್ ಪಟೇಲ' ಕಾರ್ಯಕ್ರಮದಲ್ಲಿ ವಾಚಿಸಲು ಅವಕಾಶ ಮಾಡಿಕೊಟ್ಟರು.

ನನ್ನ ಬಗ್ಗೆ ಸಾಕಷ್ಟು ಅಸೂಯೆ ಹೊಂದಿದ್ದವರು `ನಿನ್ನ ಮುಖವನ್ನ ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡಿದ್ದೀಯಾ? ನಿನ್ನ ಮಾತುಗಾರಿಕೆಯಿಂದ ಹೇಗೆ ತಾನೆ ಯಶಸ್ಸು ಸಾಧಿಸಲು ಸಾಧ್ಯ?' ಎಂದು ಅವಮಾನಿಸುತ್ತಿದ್ದರು. ಆದರೆ ಇಂದು ಅವರೇ ನನ್ನನ್ನು ಕರೆದು ಸನ್ಮಾನ ಮಾಡುತ್ತಾರೆ. ಹಾಸ್ಯ ಕಾರ್ಯಕ್ರಮಗಳನ್ನು ಆಯೋಜಿಸಲು ಆಹ್ವಾನ ನೀಡುತ್ತಾರೆ. ಯಾವುದೇ ವ್ಯಕ್ತಿಗೆ ಬಾಹ್ಯ ಸೌಂದರ್ಯಕ್ಕಿಂತಲೂ ಆಂತರಿಕ ಸೌಂದರ್ಯ ಮುಖ್ಯ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಅದೇ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯತ್ತದೆ.

ಸುಮಾರು ಇಪ್ಪತ್ತು ವರ್ಷ ಸ್ವಂತದ `ನಾಗಾ ಪ್ರಿಂಟರ್ಸ್'ನಲ್ಲಿ ಶ್ರಮವಹಿಸಿ ದುಡಿದೆ. ಮುದ್ರಣಾಲಯದ ಸಾಂಗತ್ಯವೇ ನನ್ನ ಅಕ್ಷರ ಜ್ಞಾನದ ವೃದ್ಧಿಗೆ ದಾರಿದೀಪ. ಮುದ್ರಣಕ್ಕಾಗಿ ಬರುತ್ತಿದ್ದ ಆಹ್ವಾನ ಪತ್ರಿಕೆಗಳ ಮೇಲೆ ಹನಿಗವನವನ್ನೂ ಮುದ್ರಿಸಿಕೊಡುತ್ತಿದ್ದೆ. ಕಾಲಾಂತರದಲ್ಲಿ ಇದಕ್ಕೆ ಬೇಡಿಕೆಯೂ ಹೆಚ್ಚಿತು. ಸ್ಥಳೀಯ ಪತ್ರಿಕೆಗಳೂ ನನ್ನ ಹನಿಗವನಗಳನ್ನು ಪ್ರಕಟಿಸುತ್ತಿದ್ದವು. ಆದರೂ ಏಕೋ ನನ್ನ ಬರಹಗಳು ಹೆಚ್ಚಿನ ಪ್ರಾಶಸ್ತ್ಯ ಪಡೆದಿರಲಿಲ್ಲ. ಇಂದು `ಪಂಚ್ ಪಟೇಲ' ಕಾರ್ಯಕ್ರಮದಲ್ಲಿ ಹನಿಗವನಗಳ ವಾಚನಕ್ಕೆ ಮನ್ನಣೆ ದೊರಕಿದೆ.

ಶ್ರದ್ಧೆಯಿಂದಲೇ ಮುಂದುವರಿಸಿದ ನನ್ನ ಪ್ರಯತ್ನಕ್ಕೆ ವೃತ್ತಿ ಬದುಕಿನಲ್ಲಿ ಇಂತಹದೊಂದು ಸುದಿನ ಬರಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಕಳೆದ ಒಂದೂವರೆ ವರ್ಷದಿಂದ ಪ್ರಸಾರವಾಗುತ್ತಿರುವ ಕಾರ್ಯಕ್ರಮದಲ್ಲಿ ಒಂದು ಹನಿಗವನವನ್ನೂ ಪುನರಾವರ್ತಿಸಿಲ್ಲ. ಕೋಟೆ ನಾಗರಾಜ ಒಬ್ಬ ನಟ ಮಾತ್ರ ಎಂದು ತಿಳಿದಿದ್ದ ಕೇಳುಗ ಸಮುದಾಯಕ್ಕೆ `ಪಂಚ್ ಪಟೇಲ' ಬೇರೊಂದು ಸಂದೇಶವನ್ನು ದಾಟಿಸಿದೆ. ಈಗ ಕೋಟೆ ನಾಗರಾಜ ನಟನಷ್ಟೇ ಅಲ್ಲ; ಆತ ಒಬ್ಬ ಕ್ರಿಯಾಶೀಲ ಬರಹಗಾರ, ಮಾತುಗಾರ ಎಂಬುದೂ ಜನರಿಗೆ ಅರಿವಾಗಿದೆ.

`ನಗೆಲೋಕ' ಎಂಬ ನಮ್ಮದೇ ಹಾಸ್ಯ ತಂಡದ ಮೂಲಕ ರಾಜ್ಯೋತ್ಸವ, ಗಣಪತಿ ಮತ್ತು ಅಣ್ಣಮ್ಮ ಉತ್ಸವಗಳ ಸಂದರ್ಭದಲ್ಲಿ ಸಂಘ ಸಂಸ್ಥೆಗಳಿಂದ ಆಯೋಜಿಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಒಂದು ಗಂಟೆಗೂ ಹೆಚ್ಚು ಅವಧಿಯ ಕಾರ್ಯಕ್ರಮದಲ್ಲಿ ಯಾವೊಂದು ಜೋಕನ್ನೂ ಪುನರಾವರ್ತಿಸಿದ ಉದಾಹರಣೆ ಇಲ್ಲ. ಇದಕ್ಕೆ ಸೂಕ್ತ ದಾಖಲೆಗಳೂ ನನ್ನ ಬಳಿ ಇವೆ. ಅಲ್ಲದೇ ಜೀ ಕನ್ನಡ ವಾಹಿನಿಯ `ಕಾಮಿಡಿ ಕಿಲಾಡಿಗಳು', ಉದಯ ವಾಹಿನಿಯ `ಕಾಮಿಡಿ ಖಾನಾವಳಿ' ಹಾಗೂ `ನಮಸ್ತೆ ಕರುನಾಡಿಗೆ', ಈಟಿವಿ ವಾಹಿನಿಯ `ಬಗೆ ಬಗೆ ನಗೆ' ಕಾರ್ಯಕ್ರಮಗಳೂ ನನ್ನ ಮಾತುಗಾರಿಕೆಗೆ ವೇದಿಕೆಯಾಗಿವೆ. ಇದಕ್ಕಿಂತ ಇನ್ನೇನು ಬೇಕು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.