ಶನಿವಾರ, ಏಪ್ರಿಲ್ 10, 2021
30 °C

ಗಾ.್ರಪಂ. ವಿರುದ್ಧ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡುಬಿದ್ರಿ: ಎರಡು ತಿಂಗಳ ಹಿಂದೆ ಉದ್ಘಾಟನೆಗೊಂಡ ಪಡುಬಿದ್ರಿಯ ಹೈಟೆಕ್ ಮೀನು ಮಾರುಕಟ್ಟೆ ಗುರುವಾರ ಮೀನು ಮಾರಾಟ ಮಹಿಳೆಯರಿಗೆ ಹಸ್ತಾಂತರಗೊಂಡರೂ ಗ್ರಾಮ ಪಂಚಾಯಿತಿ ನಿಯಮವನ್ನು ವಿರೋಧಿಸಿ ಹಳೆ ಮೀನು ಮಾರುಕಟ್ಟೆಯಲ್ಲಿಯೇ ಕೆಲವು ಮಹಿಳೆಯರು ಮೀನು ಮಾರಾಟ ಮಾಡುವ ಮೂಲಕ ಗ್ರಾಪಂ ವಿರುದ್ಧ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಹಳೆ ಮೀನು ಮಾರುಕಟ್ಟೆಯಲ್ಲಿ ಮೀನು ಮೀನು ಮಾರಾಟ ಮಾಡುತಿದ್ದ ಕೆಲವು ಮಹಿಳೆಯರು  ನಾವು ಆಯ್ಕೆ ಮಾಡಿದ ಮಳಿಗೆಯಲ್ಲಿ ವ್ಯಾಪಾರಕ್ಕೆ ಅನುಮತಿ ನೀಡಬೇಕು ಎಂದು ಈ ಹಿಂದೆ ಮಾರುಕಟ್ಟೆ ನಿರ್ವಹಣೆ ಹೊಂದಿರುವ  ಪಡುಬಿದ್ರಿ ಗ್ರಾಮ ಪಂಚಾಯಿತಿಗೆ  ಮನವಿ ಸಲ್ಲಿಸಿದ್ದರು.  ಆದರೆ ಗ್ರಾಮ ಪಂಚಾಯಿತಿ ಇದನ್ನು ತಿರಸ್ಕರಿಸಿ ಎಲ್ಲರಿಗೂ ಸಮಾನತೆ ನೀಡುವ ಉದ್ದೇಶದಿಂದ ಗ್ರಾಪಂ ನಿರ್ಣಯದಂತೆ ಚೀಟಿ ಪ್ರಕ್ರಿಯೆ ನಡೆಸುವುದಾಗಿ ಹೇಳಿ ಗುರುವಾರ ಚೀಟಿ ಪ್ರಕ್ರಿಯೆ ನಡೆಸಲಾಯಿತು.ಇದರಿಂದ ಗುರುವಾರ ಕೆಲಕಾಲ ಗೊಂದಲಕ್ಕೆ ಕಾರಣವಾದರೂ ಬಳಿಕ ಮಾತುಕತೆ ಮೂಲಕ ಪರಿಹರಿಸಿ ಈ ನಿಯಮ ಕೇವಲ 15ದಿನಗಳ ಕಾಲ ಮಾತ್ರ ಇರುತ್ತದೆ.  ಪಂಚಾಯಿತಿ  ನಿಬಂಧನೆಗಳಿಗೆ ಬದ್ಧರಾಗಿರಬೇಕು ಎಂದು ಗ್ರಾಪಂ ಅಧ್ಯಕ್ಷೆ  ವಿಜಯಲಕ್ಷ್ಮೀ ಆಚಾರ್ಯ  ಹೇಳಿ ವಿವಾದಕ್ಕೆ ತೆರೆ ಎಳೆದರು.ಆದರೆ ಶುಕ್ರವಾರ ಕೆಲವು ಮೀನು ಮಾರಾಟ ಮಾಡುವ ಮಹಿಳೆಯರು ಶುಕ್ರವಾರ  ನೂತನ ಮೀನು ಮಾರುಕಟ್ಟೆಗೆ ತೆರಳದೆ  ಹಳೇ ಮೀನು ಮಾರುಕಟ್ಟೆಯಲ್ಲೇ  ಮೀನು ಮಾರಾಟ ನಡೆಸುವ  ಮೂಲಕ ಅಸಮಾಧಾನ ಸೂಚಿಸಿದರು. ಮಾಹಿತಿ ಅರಿತ  ಗ್ರಾಮ ಪಂಚಾಯಿತಿ ಅಧ್ಯಕ್ಷೆ  ವಿಜಯಲಕ್ಷ್ಮೀ ಆಚಾರ್ಯ  ಮಾರುಕಟ್ಟೆಗೆ ಆಗಮಿಸಿ  ಸಮಸ್ಯೆ ಪರಿಹಾರಕ್ಕೆ  ಯತ್ನಿಸಿದರೂ  ಫಲಕಾರಿಯಾಗಲಿಲ್ಲ.ತುರ್ತು ಸಭೆ: ನೂತನ ಮಾರುಕಟ್ಟೆಯು ಪಡುಬಿದ್ರಿಯಲ್ಲಿ  ಸ್ಥಾಪಿಸಲಾಗಿದ್ದು, ಮಾರಾಟಗಾರರ ಅಸಹಕಾರದಿಂದ  ಮಾರುಕಟ್ಟೆ ನಿರ್ವಹಣೆಗೆ ತೊಡಕಾಗಿದೆ.  ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ  ತುರ್ತು ಸಭೆ ಕರೆದು ಹಳೇ ಮಾರುಕಟ್ಟೆಯನ್ನು ತಕ್ಷಣ ಕೆಡವಿ, ಪ್ರತಿಯೊಬ್ಬರೂ ಹೊಸ ಮಾರುಕಟ್ಟೆಯಲ್ಲೇ ಮೀನು ಮಾರಾಟಕ್ಕೆ  ನಿರ್ದೇಶನ  ನೀಡಲಾಗುವುದು ಎಂದು ಅಧ್ಯಕ್ಷೆ  ವಿಜಯಲಕ್ಷ್ಮೀ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.