ಸ್ವಂತ ಆಸಕ್ತಿಯಿಂದ ಬೆಂಗಳೂರಿನ 35 ಕಿ.ಮೀ. ದೂರದಲ್ಲಿ `ಸ್ಫೂರ್ತಿವನ' ಎಂಬ ಸಸ್ಯ ತಾಣವನ್ನು ಬೆಳೆಸುತ್ತಿರುವ ಈಶ್ವರ್ಪ್ರಸಾದ್ `ಪರಿಸರ ಪ್ರಸಾದ್' ಎಂದೇ ಪರಿಚಿತರು. ಸುಮಾರು 5000ಕ್ಕೂ ಹೆಚ್ಚಿನ ಮರಗಳು ಸ್ಫೂರ್ತಿವನದಲ್ಲಿ ರೂಪ ಪಡೆಯುತ್ತಿವೆ. ಪರಿಸರ ರಕ್ಷಣೆಯ ಆಸೆ ಹೊತ್ತು ಗಿಡ ಬೆಳೆಸಲು ತಮ್ಮನ್ನು ತೊಡಗಿಸಿಕೊಂಡ ಪ್ರಸಾದ ಅವರಿಗೆ ನೋವಿದೆ. ಪರಿಸರ ರಕ್ಷಣೆಗೆ ವರ್ಷಪೂರ್ತಿ ಎಲ್ಲರೂ ದುಡಿಯಬೇಕಾದ ಅಗತ್ಯವಿದೆ ಎಂಬ ಚಿಂತನೆ ಅವರದ್ದು. ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಹೀಗೆ...

`ಪರಿಸರ ರಕ್ಷಣೆಗೆ ಸಸ್ಯಗಳನ್ನು ಬೆಳೆಸಬೇಕು ಎಂಬ ಕಲ್ಪನೆ ಹಳತಾಗಿದೆ. ಇಂದು ನೆಟ್ಟ ಗಿಡಗಳು ಮರವಾಗಿ ಬೆಳೆಯುತ್ತವೆ ಎಂಬ ಯಾವ ನಂಬಿಕೆಯೂ ಇಲ್ಲ. ಗಿಡ ನೆಟ್ಟು ಬೆಳೆಸುವುದು ಒಳ್ಳೆಯ ಮನಸ್ಸಿನ ಒಂದು ಪ್ರತೀಕ ಅಷ್ಟೇ. ಪರಿಸರ ರಕ್ಷಣೆಗೆ ಗಿಡ ನೆಡುವ ಸಂಸ್ಕೃತಿಗೂ ಮಿಗಿಲಾಗಿ ಯೋಚಿಸಬೇಕಿದೆ. ಈಗ ಗಿಡ ನೆಡುವುದೂ ಹಣ ಮಾಡುವ ಒಂದು ದಂಧೆಯಾಗಿದೆಯೇ ಹೊರತು ನಿಜವಾದ ಪರಿಸರಪ್ರೇಮದಿಂದ ಮಾಡುವ ಕೆಲಸವಾಗಿ ಉಳಿದಿಲ್ಲ. ಇಂಥವರ ಮಧ್ಯೆ ಪ್ರಾಮಾಣಿಕರ ಮೇಲೂ ಜನರಿಗೆ ಸಂಶಯ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್, ನೀರು ಉಳಿಸುವುದು ಎಲ್ಲದಕ್ಕಿಂತ ತುಂಬಾ ಮುಖ್ಯ. ನಮ್ಮ ಮನಸ್ಥಿತಿ ಹೇಗಿದೆ ಎಂಬುದಕ್ಕೆ ಒಂದು ಚಿಕ್ಕ ಉದಾಹರಣೆ. ಕೇವಲ ಅಧಿಕಾರಿ ವರ್ಗದಲ್ಲಿರುವವರು 50 ಲಕ್ಷ ಜನ ಇದ್ದಾರೆ ಎಂದಿಟ್ಟುಕೊಂಡರೆ ಅವರೆಲ್ಲರು ಸೌರಶಕ್ತಿ ಇಲ್ಲವೇ ಸೋಲಾರ್ ವಾಟರ್ ಹೀಟರ್ ಅನ್ನೇ ಬಳಸಿದರೆ ಪ್ರತಿದಿನ 2 ಯೂನಿಟ್ನಷ್ಟು ವಿದ್ಯುತ್ ಉಳಿತಾಯವಾಗುತ್ತದೆ. ಅಂದರೆ ಸುಮಾರು ಒಂದು ಕೋಟಿ ಯೂನಿಟ್ ವಿದ್ಯುತ್ ಉಳಿತಾಯವಾಗುತ್ತದೆ. ಹೆಚ್ಚಿನಂಶ ಯಾರ ಮನೆಯಲ್ಲೂ ಈ ವ್ಯವಸ್ಥೆ ಇಲ್ಲ. ಒಂದು ವೇಳೆ ಸೌರಶಕ್ತಿಯೇ ಹೆಚ್ಚಾಗಿ ಬಳಕೆಯಾಗುತ್ತಿದ್ದಲ್ಲಿ ರಾಯಚೂರಲ್ಲಿರುವ ವಿದ್ಯುತ್ ಸ್ಥಾವರವನ್ನು ತಿಂಗಳಿಗೆ 3-4 ದಿನ ನಿಲ್ಲಿಸಬಹುದಿತ್ತಲ್ಲ.

ಮಳೆ ನೀರನ್ನು ಹಿಡಿದಿಡಬೇಕು ಎಂದು ನಿಯಮ ಮಾಡಿದ್ದಾರೆ ಜಲಮಂಡಳಿಯವರು. ಅದು ಪಾಲನೆ ಆಗುತ್ತಿಲ್ಲ. ಒಂದು ವೇಳೆ ಮಳೆ ನೀರನ್ನು ಹಿಡಿದಿಟ್ಟರೆ, ಸಮರ್ಪಕವಾಗಿ ಬಳಸಿಕೊಂಡರೆ ಬೆಂಗಳೂರಿಗೆ ಈಗ ತಲೆದೋರಿರುವ ನೀರಿನ ಸಮಸ್ಯೆ ಬರುತ್ತಿರಲಿಲ್ಲ. ಮತ್ತು ಎಲ್ಲೆಲ್ಲೂ ಬೋರ್ವೆಲ್. 50 ಅಡಿಗೆ ಸಿಗುತ್ತಿದ್ದ ನೀರು 500 ಅಡಿಯಲ್ಲೂ ಸಿಗದಂತಾಗಿದೆ. ಭೂಮಿತಾಯಿಯೇ ನಮ್ಮ ಕೊಳ್ಳುಬಾಕತನಕ್ಕೆ ಉತ್ತರಿಸುತ್ತಿದ್ದಾಳೆ.

ತೆಂಗಿನ ಮರವನ್ನು ಪೂಜಿಸುತ್ತಿದ್ದ ನಾವು ಅದನ್ನು ನೆಟ್ಟು ಬೆಳೆಸುವುದಿರಲಿ, ಕಡಿದು ಮನೆಯ ಛಾವಣಿಗೆ ಹಾಕಿಕೊಳ್ಳುತ್ತಿದ್ದೇವೆ. ಯಾರಿಗೇ ಆಗಲಿ ಮನೆಯ ಮುಂದೆ ಒಂದು ಗಿಡ ನೆಟ್ಟು ಬೆಳೆಸುವುದು ಕಷ್ಟ ಆಗಲಿಕ್ಕಿಲ್ಲ. ಪ್ರತಿಯೊಬ್ಬರೂ ಸ್ವಂತ ಆಸಕ್ತಿಯಿಂದ ಪರಿಸರ ರಕ್ಷಣೆ ಬಗ್ಗೆ ಪಣ ತೊಡಬೇಕು.

ನಮ್ಮ ಮನೆಯ ಮೇಲ್ಭಾಗದಲ್ಲಿ 60 ಪಾಟ್ಗಳಿವೆ. ಪಾತ್ರೆ ತೊಳೆದ ನೀರನ್ನು ಬಕೆಟ್ನಲ್ಲಿ ಸಂಗ್ರಹಿಸಿ ಅದೇ ನೀರನ್ನು ಗಿಡಗಳಿಗೆ ಹಾಕುತ್ತೇವೆ. ಮನೆಗೆ ಬೇಕಾಗುವಷ್ಟು ತರಕಾರಿ ನಾವೇ ಬೆಳೆದುಕೊಳ್ಳುತ್ತೇವೆ. ಅವಶ್ಯಕತೆಗೆ ತಕ್ಕಂತೆ ಬಳಕೆಯೂ ಆಗಬೇಕು.'

ಈಶ್ವರ್ಪ್ರಸಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.