ಮೈಸೂರು: ಆಸ್ಟ್ರೇಲಿಯದ ರೆಡ್ ಡಸ್ಟ್ ಸದಸ್ಯರು ಮತ್ತು ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷ ಮತ್ತು ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಗುರುವಾರ ನಾಗರಹೊಳೆ ಅಭಯಾರಣ್ಯದ ಸುಂಕದಕಟ್ಟೆ ಗಿರಿಜನರ ಹಾಡಿಗೆ ಭೇಟಿ ನೀಡಿದರು.

ಹಾಡಿಯ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಮತ್ತು ಕ್ರಿಕೆಟ್ ಆಟದ ಕೌಶಲ್ಯಗಳ ಕುರಿತು ತಿಳಿಸಿಕೊಟ್ಟರು. ಜೊತೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ಆಹಾರ ಸೇವನೆ, ಕ್ರೀಡೆ ಮತ್ತು ಪರಿಸರ ಜಾಗೃತಿ ಕುರಿತು ತರಬೇತಿ ನೀಡಿದರು. ಸುಮಾರು ಮೂರು ಗಂಟೆಗಳವರೆಗೆ ಅವರು ಇಲ್ಲಿದ್ದರು.

ರೆಡ್ ಡಸ್ಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಾನ್ ವ್ಯಾನ್ ಗ್ರೋನಿಯನ್, ವಿಕ್ಟೋರಿಯನ್ ಬುಷ್ ರೇಂಜರ್ಸ್ ತಂಡದ ಕ್ರಿಕೆಟ್ ಆಟಗಾರ ಗ್ಲೆನ್ ಮಾಕ್ಸ್ವೆಲ್, ಆಸೀಸ್ ಕ್ರಿಕೆಟ್ ಟ್ರೇನರ್ ಬ್ರಾಡ್ ಗ್ರೀನ್, ಕ್ರಿಕೆಟ್ ವಿಕ್ಟೋರಿಯಾ ವ್ಯವಸ್ಥಾಪಕ ಜಾನ್ ವಾಟ್ಕಿನ್, ಕ್ರಿಕೆಟ್ ಟ್ರೈನರ್ ಬೆನ್ ರಾಬರ್ಟ್ಸನ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.