ಬಾಗೇಪಲ್ಲಿ: ಕುಡಿಯುವ ನೀರು ಪೂರೈಕೆ ಸ್ಥಳದಲ್ಲಿ ಹರಿಯುವ ನೀರಿನ ಚರಂಡಿ, ತಿಪ್ಪೆಗುಂಡಿಗಳ ನಡುವೆ ಗ್ರಾಮ, ಜಾನವಾರುಗಳಿಗೆ ಕುಡಿಸುವ ನೀರಿನ ತೊಟ್ಟಿಯಲ್ಲೇ ಬಟ್ಟೆ, ಪಾತ್ರೆಗಳ ಶುದ್ಧಗೊಳಿಸುವಿಕೆ, ಸೊಳ್ಳೆಗಳ ಅವಾಸ ಸ್ಥಾನ.... ಇಂತಹ ಹಲವು ಅವ್ಯವಸ್ಥೆಯಿಂದ ಕೂಡಿರುವ ಗ್ರಾಮವನ್ನು ನೋಡಬೇಕಿದ್ದರೆ ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡ್ಲಪಲ್ಲಿಗೆ ಭೇಟಿ ನೀಡಬೇಕು.

ಗ್ರಾಮದ ಬಹುತೇಕ ರಸ್ತೆಗಳು ಈವರೆಗೆ ಡಾಂಬರೀಕರಣವಾಗದೇ ಕಲ್ಲು ಚಪ್ಪಡಿಗಳಿಂದ ಕೂಡಿದೆ. ಚರಂಡಿ ವ್ಯವಸ್ಥೆಯಿಲ್ಲದೆ ತ್ಯಾಜ್ಯ ನೀರು ರಸ್ತೆಗಳ ಮೇಲೆ ಹರಿಸಲಾಗುತ್ತಿದೆ. ಇದರಿಂದ ರಸ್ತೆಗಳು ಹಾಳಾಗಿವೆ.

ವಾಹನ ಸವಾರರು ಸಂಚರಿಸಲು ಪ್ರಯಾಸ ಪಡಬೇಕಾಗಿದೆ. ರಸ್ತೆಗಳಲ್ಲಿ ಚರಂಡಿಯಿದ್ದರೂ ನೀರು ಹರಿಯಲು ವ್ಯವಸ್ಥೆ ಕಲ್ಪಿಸಲಾಗಿಲ್ಲ. ಹಾಗಾಗಿ ಕಲುಷಿತ ನೀರು ಅಲ್ಲಲ್ಲೇ ನಿಂತಿರುತ್ತದೆ. ಕುಡಿಯುವ ನೀರನ್ನು ಪೂರೈಸುವ ನೀರಿನ ಟ್ಯಾಂಕ್ ಹಾಗೂ ನಲ್ಲಿಗಳು ಮಲಿನ ವಾಗಿವೆ. ಗ್ರಾಮವನ್ನು ನೈರ್ಮಲೀಕರಣ ಮಾಡು ವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಗ್ರಾಮದಲ್ಲಿ ವಾಸವಾಗಿರುವ ಮನೆಗಳ ಸುತ್ತಮುತ್ತಲಿನ ಖಾಲಿ ನಿವೇಶನಗಳಲ್ಲಿ ತಿಪ್ಪೆಗುಂಡಿಗಳ ಸರಮಾಲೆಯೇ ಇದೆ. ತಿಪ್ಪೆ ಗುಂಡಿಗಳು ನಿರ್ಮಿಸಿಕೊಂಡಿರುವುದರಿಂದ ಸೊಳ್ಳೆ ಗಳ ಅವಾಸ ಸ್ಥಾನವನ್ನಾಗಿರಿಸಿಕೊಂಡಿದೆ. ಇದರಿಂದ ಸಂಕ್ರಾಮಿಕ ರೋಗಗಳ ಹರಡುವ ಭಯ ಬೀತಿಯ್ಲ್ಲಲೇ ಗ್ರಾಮದ ಜನರು ವಾಸಿಸುತ್ತಿದ್ದಾರೆ.

ನೀರಿನ ಟ್ಯಾಂಕಿನ ಬಳಿಯೇ ಪಾತ್ರೆ, ಬಟ್ಟೆಗಳನ್ನು ತೊಳೆಯಲಾಗುತ್ತಿದೆ. ಇದೇ ಟ್ಯಾಂಕಿನಲ್ಲಿ ಕುಡಿಯುವ ನೀರು ಬಳಸಲಾಗುತ್ತಿದೆ. ಪಟ್ಟಣದಿಂದ ಸುಮಾರು 6-8 ಕಿ.ಮೀ.ನಷ್ಟು ದೂರದಲ್ಲಿರುವ ಈ ಗ್ರಾಮವು ಬಾಗೇಪಲ್ಲಿ- ಚಿಂತಾಮಣಿ ಮುಖ್ಯರಸ್ತೆಯಿಂದ ಸುಮಾರು 2-3 ಕಿ.ಮೀ. ದೂರದಲ್ಲಿದೆ. ಉತ್ತಮ ಸಾರಿಗೆ ಸೌಕರ್ಯ ಇರದ ಕಾರಣ ಜನರು ಖಾಸಗಿ ವಾಹನ ಗಳಲ್ಲಿ ಸಂಚರಿಸುತ್ತಾರೆ.

`ಗ್ರಾಮದಲ್ಲಿ ತಿಪ್ಪೆಗುಂಡಿ ಗಳಿಂದ ಸಂಕ್ರಾಮಿಕ ರೋಗಗಳು ಹರಡುವ ಭೀತಿ ವ್ಯಕ್ತವಾಗುತ್ತಿದೆ. ಜಾನವಾರುಗಳನ್ನು ನಿರ್ದಿಷ್ಟ ಪ್ರದೇಶದಲ್ಲಿ ಕಟ್ಟಿಕೊಳ್ಳಬೇಕಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ಗ್ರಾಮದ ಜನತೆ ಸಹಕಾರ ಅಗತ್ಯವಾಗಿದೆ. ನೀರಿನ ಟ್ಯಾಂಕ್ ಹಾಗೂ ನಲ್ಲಿಗಳನ್ನು ಸ್ವಚ್ಚ ಮಾಡಿಸುವುದರಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಇದರಿಂದ ಚರಂಡಿ ನೀರಿನ ಕಲುಷಿತ ವಾತಾವರಣದಿಂದ ಸೊಳ್ಳೆಗಳು ಕಡಿತವೂ ಹೆಚ್ಚಾಗಿದೆ. ಹಲವು ಮಂದಿ ಅಸ್ವಸ್ಥಗೊಂಡು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ~ ಎಂದು ಗ್ರಾಮದ ರವೀಂದ್ರ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.