ಭಾನುವಾರ, ಮೇ 9, 2021
19 °C
ರೈಲಿನ ಮೇಲೆ ನಕ್ಸಲ್ ದಾಳಿ: ಪೊಲೀಸರ ಹೇಳಿಕೆ

ಗುಂಪಿನಲ್ಲಿ ಮಹಿಳೆಯರೂ ಇದ್ದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ/ಜಮುಯಿ (ಪಿಟಿಐ): ಧನಬಾದ್-ಪಟ್ನಾ ಇಂಟರ್‌ಸಿಟಿ ರೈಲಿನ ಮೇಲೆ ಗುರುವಾರ ದಾಳಿ ನಡೆಸಿದ್ದ 150ಕ್ಕೂ ಹೆಚ್ಚು ಶಸ್ತ್ರಸಜ್ಜಿತ ನಕ್ಸಲರಲ್ಲಿ ಮಹಿಳೆಯರು ಕೂಡ ಭಾಗಿಯಾಗಿದ್ದರು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್.ಕೆ. ಭಾರದ್ವಾಜ್ ತಿಳಿಸಿದ್ದಾರೆ.`ದಾಳಿ ನಡೆಸಿದ ನಕ್ಸಲರ ಗುಂಪಿನಲ್ಲಿ ಮಹಿಳೆಯರೂ ಇದ್ದರು ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ' ಎಂದು ಪೂರ್ವ ಮಧ್ಯ ರೈಲ್ವೆ ಅಧಿಕಾರಿ ಅಮಿತಾಭ್ ಪ್ರಭಾಕರ್ ಹೇಳಿದ್ದಾರೆ.15ರಿಂದ 20 ಮಹಿಳೆಯರು ನಕ್ಸಲರ ಗುಂಪಿನಲ್ಲಿದ್ದರು ಎಂಬ ವಿಷಯವನ್ನು ಜಮುಯಿ ಪೊಲೀಸರು ಸಹ ಖಚಿತಪಡಿಸಿದ್ದಾರೆ.

ಪೂರ್ವ ಮಧ್ಯ ರೈಲ್ವೆ ವ್ಯಾಪ್ತಿಗೆ ಬರುವ ದಾನಾಪುರ ವಿಭಾಗದಲ್ಲಿ ರೈಲುಗಳ ಓಡಾಟ ಎಂದಿನಂತೆ ಸಾಮಾನ್ಯವಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.ಗಾಯಗೊಂಡು ಲಖಿಸರಾಯಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐದು ಜನರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.`ರೈಲಿನ ಮೇಲೆ ನಕ್ಸಲರು ದಾಳಿ ನಡೆಸಿದ ವಿಷಯ ತಿಳಿದು ಹಲವು ಪ್ರಯಾಣಿಕರು ಬೋಗಿಯ ಶೌಚಾಲಯದಲ್ಲಿ ಅವಿತುಕೊಂಡಿದ್ದರು' ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.ಬಿಹಾರ ಪೊಲೀಸರು, ಅರೆಸೇನಾ ಪಡೆ, ರೈಲ್ವೆ ರಕ್ಷಣಾ ಪಡೆ  ಜಮುಯಿಯ ದಟ್ಟಾರಣ್ಯದಲ್ಲಿ ನಕ್ಸಲರ ವಿರುದ್ಧ ಕೂಬಿಂಗ್ ಕಾರ್ಯಾಚರಣೆ ಮುಂದುವರೆಸಿದ್ದಾರೆ.150ಕ್ಕೂ ಹೆಚ್ಚು ನಕ್ಸಲರು ಗುರುವಾರ ಜಮುಯಿ ಜಿಲ್ಲೆಯ ಕುಂಧಾರ್ ಬಳಿ ರೈಲನ್ನು ಬಲವಂತವಾಗಿ ತಡೆದು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಮೂವರು ಸತ್ತು, 12 ಜನ ಗಾಯಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.