ಭಾನುವಾರ, ಜೂನ್ 7, 2020
23 °C

ಗುಜರಾತಿ ನೃತ್ಯ, ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಜರಾತಿ ನೃತ್ಯ, ಪೂಜೆ

ಒಂಬತ್ತು ದಿನವೂ ದೇವಿಯ ಆರಾಧನೆ, ಭಜನೆ, ಸತ್ಸಂಗ, ಉಪವಾಸ ಇವು ನವರಾತ್ರಿಯ ವಿಶೇಷ.ಗುಜರಾತಿ ಸಮುದಾಯದಲ್ಲಿ ಗರ್ಬಾ ಮತ್ತು ದಾಂಡಿಯಾ ನೃತ್ಯಗಳಿಲ್ಲದೆ ನವರಾತ್ರಿ ಪೂರ್ಣಗೊಳ್ಳುವುದಿಲ್ಲ. ಇದರಲ್ಲಿ ವಯಸ್ಸು, ಲಿಂಗಭೇದವಿಲ್ಲದೆ ಎಲ್ಲರೂ ಸಾಂಪ್ರದಾಯಿಕ ಉಡುಪು ಧರಿಸಿ ಪಾಲ್ಗೊಳ್ಳುತ್ತಾರೆ.ಸಿಲಿಕಾನ್ ನಗರಿಯ ಗುಜರಾತಿಗಳಿಗಾಗಿ ಶ್ರೀ ಮಾ ಮಂಗಲ ಅ. 6ರ ವರೆಗೂ  ಗರ್ಬಾ, ದಾಂಡಿಯಾ ರಾಸ್ ಆಯೋಜಿಸಿದೆ. ಗುಜರಾತ್‌ನಿಂದ ಬಂದ ಪಾರಂಪರಿಕ ವಾದ್ಯಗಾರರ ವಾದನ, ಧೋಳ್ ಕಳೆಕಟ್ಟಲಿದೆ. ರಾತ್ರಿ 11.30ರ ನಂತರ ಆರತಿ.

ಸ್ಥಳ: ಪ್ರಿನ್ಸ್ ಗಾಲ್ಫ್, ಅರಮನೆ ಮೈದಾನ (ಬಳ್ಳಾರಿ ರಸ್ತೆ). * ನಿರ್ಮಾಣ್ ದೇವಾಲಯಗಳ ವಿಶ್ವಸ್ಥ ಮಂಡಳಿ: ಮಂಗಳವಾರ ದುರ್ಗಾ ನಮಸ್ಕಾರ ಪೂಜೆ. ಬುಧವಾರ ಮಹಾಸುದರ್ಶನ ಪೂಜೆ, ಗುರುವಾರ ವಿದ್ಯಾಗೋಪಾಲ ಪೂಜೆ.

ಸ್ಥಳ: ನಿಸರ್ಗ ಬಡಾವಣೆ, ಬನ್ನೇರುಘಟ್ಟ ರಸ್ತೆ. ನಿತ್ಯ ಬೆಳಿಗ್ಗೆ 9.30.* ದಿ ಆರ್ಟ್ ಆಫ್ ಲಿವಿಂಗ್: ಮಂಗಳವಾರ ಬೆಳಿಗ್ಗೆ 7ಕ್ಕೆ ಶತಚಂಡಿ ಹೋಮ, ಬುಧವಾರ ಬೆಳಿಗ್ಗೆ 9ಕ್ಕೆ ಗುರುದೇವತಾ ಪೂಜೆ. ಗುರುವಾರ ಬೆಳಿಗ್ಗೆ 9ಕ್ಕೆ  ವಿಜಯ ದಶಮಿ ಪೂಜೆ. ನಿತ್ಯ ಸಂಜೆ 6ಕ್ಕೆ ಲಲಿತಾ ಸಹಸ್ರನಾಮ ಪಾರಾಯಣ.

ಸ್ಥಳ: ಕನಕಪುರ ಮುಖ್ಯ ರಸ್ತೆ, ಉದಯಪುರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.