ಶಿವಮೊಗ್ಗ: ಗುಟ್ಕಾ ನಿಷೇಧದ ರಾಜ್ಯ ಸರ್ಕಾರದ ನಿಲುವಿಗೆ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕ್ಯಾಂಪ್ಕೋ, ಬಿಜೆಪಿ ಮಾಜಿ ಶಾಸಕ ಆರಗ ಜ್ಞಾನೇಂದ್ರ, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಗುರುವಾರ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ನಿರ್ಧಾರವನ್ನು ಆತುರದ ಕ್ರಮ ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ 6ಲಕ್ಷ ಕುಟುಂಬಗಳು ಅಡಿಕೆ ಬೆಳೆಯನ್ನು ಆಶ್ರಿಯಿಸಿವೆ. 140 ತಾಲ್ಲೂಕುಗಳಲ್ಲಿ ಅಡಿಕೆ ಬೆಳೆ ಇದೆ. ವಾರ್ಷಿಕ ಸುಮಾರು 3.5 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ದೇಶದ ಒಟ್ಟಾರೆ ಉತ್ಪಾದನೆಯಲ್ಲಿ ಶೇ 60ರಷ್ಟು ಕರ್ನಾಟಕದಲ್ಲೇ ಆಗುತ್ತಿದೆ. ರಾಜ್ಯದಲ್ಲಿ ಪ್ರತಿ ವರ್ಷ ರೂ.2.5ಲಕ್ಷ ಕೋಟಿ ವಹಿವಾಟು ನಡೆಯುತ್ತದೆ. ಸರ್ಕಾರದ ಈ ನಿರ್ಧಾರದಿಂದ ಬಹುದೊಡ್ಡ ಉದ್ಯಮಕ್ಕೆ ಬಲವಾದ ಪೆಟ್ಟು ಬೀಳುತ್ತದೆ ಎಂದು ಮಾಜಿ ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ಸಿಗರೇಟು ನಿಷೇಧ ಮಾಡದ ಸರ್ಕಾರ ಗುಟ್ಕಾ ನಿಷೇಧಕ್ಕೆ ಮುಂದಾಗಿರುವುದರಿಂದ ಸಿಗರೇಟು ಕಂಪೆನಿಗಳ ಲಾಭಿ ಕೆಲಸ ಮಾಡಿದೆ ಎಂದು ಆರೋಪಿಸಿದ ಅವರು, ಗುಟ್ಕಾ ವಿಷಕಾರಕ ಎಂದು ಸರ್ಕಾರದ ಯಾವ ವರದಿಯೂ ಹೇಳಿಲ್ಲ. ಒಂದು ವೇಳೆ ವಿಷಕಾರಕವಾಗಿದ್ದರೆ ಸರ್ಕಾರ ಇದುವರೆಗೂ ಅದನ್ನು ಏಕೆ ನಿಯಂತ್ರಿಸಿಲ್ಲ ಎಂದು ಪ್ರಶ್ನಿಸಿದರು.

ಈಗಾಗಲೇ ಗುಟ್ಕಾ ನಿಷೇಧಿಸಿದ ರಾಜ್ಯಗಳಲ್ಲಿ ಅಡಿಕೆ ಬೆಳೆಯುತ್ತಿಲ್ಲ. ಕೇರಳ, ಕರ್ನಾಟಕ ಮಾತ್ರ ಅಡಿಕೆ ಬೆಳೆಯುವ ರಾಜ್ಯಗಳಾಗಿದ್ದು, ಇಲ್ಲಿ ಗುಟ್ಕಾ ನಿಷೇಧಿಸಿದರೂ ಅಡಿಕೆ ಧಾರಣೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದರು.

ಈಗ ಅಡಿಕೆ ಬೆಳೆಗಾರರು ತಮ್ಮ ಮಕ್ಕಳನ್ನು ಶಾಲೆ-ಕಾಲೇಜುಗಳಿಗೆ ಸೇರಿಸುವ ಸಂದರ್ಭ. ಹದ ಮಳೆಯಾದ ಹಿನ್ನೆಲೆಯಲ್ಲಿ ಗೊಬ್ಬರ, ಬಿತ್ತನೆ ಬೀಜ ಖರೀದಿಸುವ ಸಮಯ. ಇಂತಹ ಸಂದರ್ಭದಲ್ಲೇ ಅಡಿಕೆ ಧಾರಣೆ ಕುಸಿತ ಕಂಡರೆ ಬೆಳೆಗಾರರ ಗತಿ ಏನು ಎಂದರು.

ಬೆಳೆಗಾರರ ಹಿತಕಾಪಾಡದ ಈ ಭಾಗದ ಶಾಸಕರು, ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ.ಸಿದ್ದರಾಮಣ್ಣ, `ಕಾಡಾ' ಅಧ್ಯಕ್ಷ ಗಿರೀಶ್ ಪಟೇಲ್, `ಸೂಡಾ' ಅಧ್ಯಕ್ಷ ಎಸ್. ದತ್ತಾತ್ರಿ, ಮಾಧ್ಯಮ ಪ್ರಮುಖರಾದ ಮಧು ಸೂದನ್, ಶ್ರೀನಾಥ ನಗರಗದ್ದೆ ಉಪಸ್ಥಿತರಿದ್ದರು.

`ಪರ್ಯಾಯ ನಂತರ ಕ್ರಮ ಕೈಗೊಳ್ಳಿ'
ಸರ್ಕಾರ ತಂಬಾಕು ಬಳಕೆಯ ಮೇಲೆ ಸಂಪೂರ್ಣ ನಿಷೇಧ ಹೇರಲು ಅಭ್ಯಂತರವಿಲ್ಲ. ಗುಟ್ಕಾ ನಿಷೇಧ ಮಾಡುವುದರ ಬಗ್ಗೆಯೂ ವಿರೋಧವಿಲ್ಲ. ಆದರೆ, ಅಡಿಕೆ ಬಳಕೆಗೆ ಸಂಬಂಧಿಸಿದಂತೆ ಪರ್ಯಾಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಆ ನಂತರವೇ ಗುಟ್ಕಾ ನಿಷೇಧ ಕುರಿತಂತೆ ಚಿಂತನೆ ನಡೆಸಲಿ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಂಕೋಡಿ ಪದ್ಮನಾಭ ಭಟ್ ಸಲಹೆ ಮಾಡಿದರು.

ಎಲ್ಲದಕ್ಕಿಂತ ಮುಖ್ಯವಾಗಿ ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿದೆ.
ಜುಲೈ 17 ರಂದು ವಿಚಾರಣೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಹೊರಬೀಳುವವರೆಗೂ ಕಾದು ನೋಡುವ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದರು. ಬೆಳೆಗಾರರು ಇದರಿಂದ ಆತಂಕ ಪಡುವುದು ಬೇಡ. ಅವಸರದಿಂದ ಅಡಿಕೆ ಮಾರಾಟಕ್ಕೆ ಮುಂದಾಗಬಾರದು ಎಂದು ಸಲಹೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶಿರಸಿ ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ, ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಶಿವಕುಮಾರ್, ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಉಪಸ್ಥಿತರಿದ್ದರು.

`ಪಾನ್ಮಸಾಲ ನಿಷೇಧ ಬೇಡ'
ಗುಟ್ಕಾಕ್ಕಿಂತ ಪಾನ್ಮಸಾಲ ನಿಷೇಧ ಮಾಡಿರುವುದು ಅಡಿಕೆ ಬೆಳೆಗಾರರಿಗೆ ಆತಂಕ ತಂದಿದೆ. ಹೆಚ್ಚಿನ ಅಡಿಕೆ ಪಾನ್ಮಸಾಲಕ್ಕೆ ಹೋಗುತ್ತಿರುವುದರಿಂದ ಅಡಿಕೆ ಬೆಲೆ ತೀವ್ರ ಕುಸಿತ ಕಾಣುತ್ತದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಆತಂಕ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಆತುರದಿಂದ ನಿರ್ಧಾರದಿಂದ ತತ್ತರಿಸುವ ಅಡಿಕೆ ಬೆಳೆಗಾರರ ಪುನಶ್ಚೇತನದ ಕ್ರಮವಾಗಿ ಗೋರಕ್ಸಿಂಗ್ ವರದಿ ಜಾರಿಗೆ ತರಬೇಕು. ಅಡಿಕೆಗೆ ಶಾಶ್ವತ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.

ಅಡಿಕೆ ಮಂಡಳಿ ಸ್ಥಾಪನೆ ಮಾಡಿ, ಆ ಮೂಲಕವೇ ಅಡಿಕೆ ಸಂಬಂಧಿತ ನಿರ್ಣಯಗಳನ್ನು ಕೈಗೊಳ್ಳುವಂತಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿಮುಲ್ ಅಧ್ಯಕ್ಷ ಕೆ.ಎಲ್.ಜಗದೀಶ್ವರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಷಡಕ್ಷರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.