ವಿಜಾಪುರ: ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ತಾಯಿ-ಮಗಳು ಸಜೀವ ದಹನವಾದ ಘಟನೆ ತಾಲ್ಲೂಕಿನ ಶೇಗುಣಸಿ ಗ್ರಾಮದ ತೋಟದಲ್ಲಿ ನಡೆದಿದೆ.

ಕಾಶಿಬಾಯಿ ರಾವುತಪ್ಪ ರೂಗಿ (38) ಮತ್ತು ಆಕೆಯ ಮಗಳು ಭಾಗವ್ವ ರಾವುತಪ್ಪ ರೂಗಿ (9) ಮೃತಪಟ್ಟವರು. ಈ ಘಟನೆಯಲ್ಲಿ ಕಾಶಿಬಾಯಿಯ ಮಗ ಸನೀಲ್ಗೆ (13) ಸುಟ್ಟ ಗಾಯಗಳಾಗಿವೆ. ಗುಡಿಸಲಿನಲ್ಲಿದ್ದ ಮೇಕೆ, ಕೋಳಿಗಳೂ ಬೆಂಕಿಗೆ ಆಹುತಿಯಾಗಿವೆ. ಅಲ್ಲದೇ ಎಲ್ಲ ವಸ್ತುಗಳೂ ಸುಟ್ಟುಕರಕಲಾಗಿವೆ.

ತಮ್ಮ ತೋಟದಲ್ಲಿರುವ ಗುಡಿಸಲಿನಲ್ಲಿ ಇವರೆಲ್ಲ ಮಲಗಿದ್ದರು. ಗುಡಿಸಲಿನಲ್ಲಿ ಹಚ್ಚಿಟ್ಟಿದ್ದ ದೀಪವನ್ನು ಬೆಕ್ಕು ಉರುಳಿಸಿದ್ದರಿಂದ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಪ್ರಭಾರ ಎಸ್ಪಿ ಎಫ್.ಎ. ಟ್ರಾಸ್ಗರ್ ತಿಳಿಸಿದ್ದಾರೆ. ಬಬಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.