ಶನಿವಾರ, ಏಪ್ರಿಲ್ 17, 2021
31 °C

ಗುಣಮಟ್ಟವಿಲ್ಲದ ಔಷಧ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ವಿಶ್ಲೇಷಕರು ಔಷಧ ಪರಿಕ್ಷಾ ಪ್ರಯೋಗಾಲಯ ಬೆಂಗಳೂರು ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯ ಮಹಾರಾಷ್ಟ್ರ ಇವರು ಈ ಕೆಳಕಂಡ ಔಷಧಿಗಳು ಉತ್ತಮ ಗುಣಮಟ್ಟವಿಲ್ಲದ ಕಾರಣ ನಿಷೇಧಿಸಿವೆ.ಆಸ್ಟಿರಿನ್ ಡಿಲೇಯ್ಡಿ ರಿಲೀಸ್, ಎಕೊಸ್ಪಿರಿನ್, ಫೆನ್‌ಜೆಸಿಕ್ (ಡೈಕ್ಲೋಫೆನಾಕ್ ಸೋಡಿಯಂ ಇಂಜೆಕ್ಷನ್ ಐಪಿ), ಟ್ರೊಪಿಕಮೈಡ್ ಆಪ್‌ತಾಲ್‌ಮಿಕ್ ಸಲ್ಯೂಶನ್ ಯುಎಸ್‌ಪಿ ಈ ಔಷಧಗಳನ್ನು ವ್ಯಾಪಾರಿಗಳು, ವೈದ್ಯರು ಮತ್ತು ನರ್ಸಿಂಗ್ ಹೋಮ್‌ಗಳು ದಾಸ್ತಾನು ಅಥವಾ ಮಾರಾಟ ಮಾಡುವುದನ್ನು ನಿಷೇಧಿಸಿದೆ. ಯಾರಾದರೂ ದಾಸ್ತಾನು ಹೊಂದಿದ್ದಲ್ಲಿ ಸಂಬಂಧಪಟ್ಟ ಇಲಾಖೆಗೆ ಸೂಚಿಸುವಂತೆ ಪ್ರಕಟಣೆ ತಿಳಿಸಿದೆ.ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಇಸ್ಕಾನ್ ಬೆಂಗಳೂರು ಶ್ರೀ ರಾಧಾ ಕೃಷ್ಣ ಮಂದಿರವು 2010-11ನೇ ಸಾಲಿನ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಪರೀಕ್ಷಾ ಪ್ರವೇಶ ಪತ್ರ, ಆದಾಯ ಪತ್ರ, ಪಾಲಕರ ಉದ್ಯೋಗ ಗುರುತಿನ ಪ್ರಮಾಣ ಪತ್ರಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನೆಲೆ ಮತ್ತು ಕುಟುಂಬದ ಆರ್ಥಿಕ ಅವಶ್ಯಕತೆಗಳ ಆಧಾರದ ಮೇಲೆ ವಿದ್ಯಾರ್ಥಿ ವೇತನ ನೀಡಲಾಗುವುದು. ಕಾರ್ಯನಿರ್ದೇಶಕರು, ಇಸ್ಕಾನ್ ಸ್ಕಾಲರ್‌ಷಿಫ್, ಶ್ರೀ ರಾಧಾ ಕೃಷ್ಣ ಮಂದಿರ, ಹರೇ ಕೃಷ್ಣಗಿರಿ, ಕಾರ್ಡ್‌ರಸ್ತೆ, ರಾಜಾಜಿನಗರ ಈ ವಿಳಾಸಕ್ಕೆ ಕಳುಹಿಸುಂತೆ ಪ್ರಕಟಣೆ ಕೋರಿದೆ. ದೂರವಾಣಿ : 3251 3702.ಕರಡಚ್ಚು ತರಬೇತಿ ಕಮ್ಮಟ

ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕರ್ನಾಟಕ ಪ್ರಕಾಶಕರ ಸಂಘವು ವಿಶ್ವ ಪುಸ್ತಕ ದಿನಾಚರಣೆಯ ಅಂಗವಾಗಿ ಇದೇ 23 ರಂದು ಕರಡಚ್ಚು ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ಕರಡಚ್ಚು ತಿದ್ದುವುದು, ಬಳಸುವ ಚಿಹ್ನೆಗಳು, ಡಿ.ಟಿ.ಪಿ. ಸಂಯೋಜನೆಯಲ್ಲಿ ಕರಡಚ್ಚು ಸಮಸ್ಯೆಗಳು ಮುಂತಾದ ಅಂಶಗಳ ಬಗ್ಗೆ ಪರಿಣತರೊಂದಿಗೆ ಚರ್ಚೆ, ಸಂವಾದ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. 50 ವರ್ಷ ವಯೋಮಾನದೊಳಗಿನ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಇದೇ 18 ಹೆಸರು ನೋಂದಣಿಗೆ ಕೊನೆಯ ದಿನ. ದೂರವಾಣಿ ಸಂಖ್ಯೆ- 2248 4516.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.