ಗುರುವಾರ , ಜೂನ್ 24, 2021
25 °C

ಗುಲ್ಬರ್ಗದಲ್ಲಿ ಪಾಲಿ ಸಂಶೋಧನಾ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗದಲ್ಲಿ ಪಾಲಿ ಸಂಶೋಧನಾ ಕೇಂದ್ರ

ನವದೆಹಲಿ: ರಾಜ್ಯದಲ್ಲಿ ಮೊದಲ ಬಾರಿಗೆ ಪಾಲಿ ಭಾಷೆ ಸಂಶೋಧನಾ ಕೇಂದ್ರ ಸ್ಥಾಪಿಸಲು ಗುಲ್ಬರ್ಗ `ಸಿದ್ಧಾರ್ಥ ವಿಹಾರ~ಕ್ಕೆ ಹತ್ತು ಕೋಟಿ, ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗೆ ಹೆಸರಾದ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ರೂ 50 ಕೋಟಿ ಹಣವನ್ನು 2012- 13ನೇ ಸಾಲಿನ ಬಜೆಟ್‌ನಲ್ಲಿ ನೀಡಲಾಗಿದೆ.

ಒಂದು ಸೆಂಟ್ರಲ್, ಐದು ಡೀಮ್ಡ ಸೇರಿ ದೇಶದ 60 ಕೃಷಿ ವಿವಿಗಳ ಪೈಕಿ ಅತ್ಯುತ್ತಮ ಶಿಕ್ಷಣ ಮತ್ತು ಸಂಶೋಧನೆ ಗುಣಮಟ್ಟ ಹೊಂದಿರುವ ಧಾರವಾಡ ಕೃಷಿ ವಿವಿಯನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಹಣಕಾಸು  ಸಚಿವ ಪ್ರಣವ್ ಮುಖರ್ಜಿ ಬಜೆಟ್ ಭಾಷಣದಲ್ಲಿ ತಿಳಿಸಿದರು. ಬೆಂಗಳೂರು ಮೆಟ್ರೊಗೆ 1670 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಕಳೆದ ಬಜೆಟ್‌ನಲ್ಲಿ 1500ಕೋಟಿ ರೂಪಾಯಿ ನೀಡಲಾಗಿತ್ತು. ಈ ಸಲ ಕೇವಲ 170 ಕೋಟಿ ಹೆಚ್ಚು ಹಣ ಕೊಡಲಾಗಿದೆ. ಇದರಲ್ಲಿ 900 ಕೋಟಿ ಸಾರ್ವಜನಿಕ ಉದ್ದಿಮೆ ಹೂಡಿಕೆ ಬಾಬ್ತಿನಲ್ಲಿ, 570ಕೋಟಿ ಹೊರಗಿನ ಸಾಲವಾಗಿ ಪಡೆಯಬಹುದಾಗಿದೆ. ಕಾಫಿ ಮಂಡಳಿಗೆ 149ಕೋಟಿ ನೀಡಲಾಗಿದೆ. ಇದರಲ್ಲಿ ಯೋಜನೆಗೆ 109ಕೋಟಿ, ಯೋಜನೇತರ ವೆಚ್ಚಗಳಿಗೆ 39 ಕೋಟಿ ಕೊಡಲಾಗಿದೆ. ಹೋದ ವರ್ಷ 196 ಕೋಟಿ ನೀಡಲಾಗಿತ್ತು.

ಬೆಂಗಳೂರು `ಭಾರತೀಯ .ವಿಜ್ಞಾನ ಸಂಸ್ಥೆ~ (ಐಐಎಸ್‌ಸಿ)ಗೆ ಪ್ರಸಕ್ತ ವರ್ಷ 368ಕೋಟಿ ರೂಪಾಯಿ ಇಡಲಾಗಿದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ (ನಿಮ್ಹಾನ್ಸ್)ಗೆ 180 ಕೋಟಿ, ಬಳ್ಳಾರಿ `ವಿಜಯನಗರ ಆರೋಗ್ಯ ಸಂಸ್ಥೆ~ಗೆ 50 ಕೋಟಿಗೂ ಹೆಚ್ಚು ಹಣ ನಿಗದಿ ಮಾಡಲಾಗಿದೆ. ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆ (ಸ್ಪೀಚ್ ಅಂಡ್ ಹಿಯರಿಂಗ್)ಗೆ 49 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ.

ಧಾರವಾಡ ಕೃಷಿ `ವಿವಿಗೆ ಬರಲಿರುವ ಹಣದಲ್ಲಿ ರೈತರ ಜ್ಞಾನ ಕೇಂದ್ರ (ಫಾರ್ಮರ್ಸ್‌ ನಾಲೆಜ್ ಸೆಂಟರ್), ಆಹಾರ ವಿಜ್ಞಾನಕ್ಕೆ ಸಂಬಂಧಿಸಿದ ಪದವಿ ಕೋರ್ಸ್ ತೆರೆಯಲಾಗುವುದು. ಕೃಷಿ ಮೇಳದ ಮೂಲ ಸೌಲಭ್ಯ ಅಭಿವೃದ್ಧಿಗೆ ಹಣ ಬಳಕೆ ಮಾಡುವುದಾಗಿ ಧಾರವಾಡ ಕೃಷಿ ವಿವಿ ಕುಲಪತಿ ಡಾ. ಆರ್.ಆರ್.ಹಂಚಿನಾಳ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.