ಗುರುವಾರ , ಜೂನ್ 24, 2021
22 °C

ಗೂಗಲ್‌ಗೆ ₨30,500 ಕೋಟಿ ದಂಡ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಏಕಸ್ವಾಮ್ಯ ಕಾಯ್ದೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ತನಿಖೆ ಎದುರಿಸುತ್ತಿರುವ ಇಂಟರ್‌ನೆಟ್‌ ದೈತ್ಯ ಗೂಗಲ್‌, ಒಂದು ವೇಳೆ ದೇಶದ ಸ್ಪರ್ಧಾತ್ಮಕ ನಿಯಮ­ಗಳನ್ನು ಉಲ್ಲಂಘಿ­ಸಿದ್ದು ಸಾಬೀತಾದಲ್ಲಿ ₨30,500 ಕೋಟಿ ದಂಡ ತೆರಬೇಕಾಗುತ್ತದೆ.ಈ ನಡುವೆ, ಸಿಸಿಐ ನಡೆಸುತ್ತಿರುವ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಗೂಗಲ್‌ ಹೇಳಿದೆ. ಅಮೆರಿಕದ ಹಕ್ಕುಸ್ವಾಮ್ಯ ನಿಗಾ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಿ, ತಾನು ನೀಡುತ್ತಿರುವ ಸೇವೆ ಯೋಗ್ಯವಾಗಿದೆ ಎಂಬುದಾಗಿ ವರದಿ ನೀಡಿದೆ ಎಂದೂ ಗೂಗಲ್‌ ಹೇಳಿಕೊಂಡಿದೆ.ಪೈಪೋಟಿಯಲ್ಲಿ ಮುಂಚೂಣಿ­ಯಲ್ಲಿರುವ ಗೂಗಲ್ ತನ್ನ ಸ್ಥಾನವನ್ನು ದುರುಪಯೋಗ ಪಡೆಸಿಕೊಂಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಐ ಎರಡು ವರ್ಷಗಳಿಂದ ತನಿಖೆ ನಡೆಸುತ್ತಿದೆ. ಭಾರತದ ಸ್ಪರ್ಧಾತ್ಮಕ ನಿಯಮಗಳ ಉಲ್ಲಂಘನೆ ಸಾಬೀತಾದರೆ ಕಂಪೆನಿಯ ಮೂರು ವರ್ಷಗಳ ಸರಾಸರಿ ವಹಿ­ವಾಟಿನ ಶೇ 10ರವರೆಗೆ ದಂಡ ವಿಧಿಸ­ಬಹುದು.ಗೂಗಲ್‌ನ ಮೂರು ವರ್ಷಗಳ ಸರಾಸರಿ ವಹಿವಾಟು ಸುಮಾರು ₨3.01 ಲಕ್ಷ ಕೋಟಿ ಇದೆ. ಹಾಗಾಗಿ ಗರಿಷ್ಠ ₨30,500 ಕೋಟಿ ದಂಡವನ್ನು ವಿಧಿಸಬಹುದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.