ಗೂಗಲ್ನ ಈ ಕಾರಿಗೆ ಚಾಲಕನೇ ಬೇಡ

ಕ್ಯಾಲಿಫೋರ್ನಿಯಾ: ಗೂಗಲ್ ಸಂಸ್ಥೆಯು ಚಾಲಕರಹಿತ ಕಾರಿನ ಮಾದರಿಯನ್ನು ಅನಾವರಣಗೊಳಿಸಿದೆ. ಇನ್ನೊಂದು ವರ್ಷದಲ್ಲಿ ಈ ವಾಹನ ರಸ್ತೆಯಲ್ಲಿ ಓಡಾಡಲಿದೆ ಎಂದು ಗೂಗಲ್ ಹೇಳಿದೆ.
ನಿಲ್ಲು/ಹೋಗು (ಸ್ಟಾಪ್/ಗೊ) ಗುಂಡಿಗಳನ್ನು ಮಾತ್ರ ಹೊಂದಿರುವ ಕಾರು ತಾಸಿಗೆ ಸುಮಾರು 40 ಕಿಲೋಮೀಟರ್ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ ಎಂದು ಮಾದರಿ ಬಿಡುಗಡೆ ಮಾಡಿದ ಗೂಗಲ್ ಸಹ ಸಂಸ್ಥಾಪಕ ಸರ್ಗೆ ಬ್ರಿನ್ ತಿಳಿಸಿದರು.
ಮನುಷ್ಯನ ಯಾವುದೇ ಹಸ್ತಕ್ಷೇಪ ಇಲ್ಲದೆ ಕಾರ್ಯನಿರ್ವಹಿಸುವಂತೆ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರಿನಲ್ಲಿ ಅಕ್ಸಲರೇಟರ್, ಸ್ಟಿಯರಿಂಗ್ ಇತ್ಯಾದಿ ಯಾವುದೂ ಇರುವುದಿಲ್ಲ. ಕಾರಿನಲ್ಲಿ ಅಳವಡಿಸಲಾಗಿರುವ ಸಾಫ್ಟ್ವೇರ್ ಮತ್ತು ಸೆನ್ಸರ್ಗಳೇ ಚಾಲನೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ನಿರ್ವಹಿಸಲಿವೆ ಎಂದು ಯೋಜನೆ ನಿರ್ದೇಶಕ ಕ್ರಿಸ್ ಉರ್ಮ್ಸನ್ ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.