ಕೊಲಂಬೊ: ಅಂತೂ ಇಂತೂ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಸತತ 34 ಪಂದ್ಯಗಳಲ್ಲಿ ಗೆದ್ದು ಬೀಗುತ್ತಿದ್ದ ಕಾಂಗರೂ ಪಡೆಗೆ ಪಾಕಿಸ್ತಾನ ಆಘಾತ ನೀಡಿದೆ. ಪ್ರೇಮದಾಸ ಕ್ರೀಡಾಂಗಣದಲ್ಲಿ ಶನಿವಾರ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಶಾಹೀದ್ ಅಫ್ರಿದಿ ಪಡೆ ನಾಲ್ಕು ವಿಕೆಟ್ಗಳಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಪಾಕ್ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.

ರಿಕಿ ಪಾಂಟಿಂಗ್ ಪಡೆ ನೀಡಿದ 177 ರನ್ಗಳ ಗುರಿಯನ್ನು ಮುಟ್ಟಲು ಪಾಕ್ಗೆ ಕೊಂಚ ಕಷ್ಟವಾಯಿತಾದರೂ ಅಸಾಧ್ಯವಾಗಲಿಲ್ಲ. 41 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ಗೆರೆ ದಾಟಿದರು.ಬ್ರೆಟ್ ಲೀ ನೀಡಿದ ಆಘಾತದಿಂದ ಪಾಕ್ ಒಂದು ಹಂತದಲ್ಲಿ ಆತಂಕಕ್ಕೆ ಸಿಲುಕಿದ್ದು ನಿಜ. ಏಕೆಂದರೆ 98 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿತ್ತು. ಆದರೆ ಉಳಿದ ಬೌಲರ್ಗಳು ಚಾಂಪಿಯನ್ ಆಸ್ಟ್ರೇಲಿಯಾದ ನೆರವಿಗೆ ನಿಲ್ಲಲಿಲ್ಲ.

ಲೀ ಪಾಕ್ನ ಆರಂಭಿಕ ಬ್ಯಾಟ್ಸ್ಮನ್ಗಳನ್ನು ಬೇಗನೇ ಪೆವಿಲಿಯನ್ಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು. ಈ ತಂಡ 45 ರನ್ಗೆ 2 ವಿಕೆಟ್ ಕಳೆದುಕೊಂಡಾಗ ಅಸಾದ್ ರಫಿಕ್ ಹಾಗೂ ಯೂನಿಸ್ ಖಾನ್ ಆಸರೆಯಾದರು. ಶಫಿಕ್ (46; 81 ಎಸೆತ, 5 ಬೌಂಡರಿ) ತಾಳ್ಮೆಯ ಇನಿಂಗ್ಸ್ ಕಟ್ಟಿದರು.

ಆದರೆ ಮಿಸ್ಬಾ ಉಲ್ ಹಕ್ ಹಾಗೂ ಶಾಹೀದ್ ಅಫ್ರಿದಿ ಹಾಗೇ ಬಂದು ಹೀಗೆ ಹೋದರು. ಆಗ ಪಾಕ್ ಸ್ಕೋರ್ 142/6. ಈ ಹಂತದಲ್ಲಿ ಜೊತೆಗೂಡಿದ ಉಮರ್ ಅಕ್ಮಲ್ ಹಾಗೂ ಅಬ್ದುರ್ ರಜಾಕ್ ಯಾವುದೇ ಅಪಾಯಕ್ಕೆ ಆಸ್ಪದ ನೀಡಲಿಲ್ಲ.ಇವರಿಬ್ಬರು ಮುರಿಯದ ಏಳನೇ ವಿಕೆಟ್ಗೆ 36 ರನ್ ಸೇರಿಸಿದರು. 59 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಗಳಿಸಿದ ಉಮರ್ (ಅಜೇಯ 44) ‘ಪಂದ್ಯ ಪುರುಷೋತ್ತಮ’ ಎನಿಸಿದರು. ಆದರೆ ಬ್ರೆಟ್ ಲೀ (28ಕ್ಕೆ4) ಅವರ ಪ್ರಯತ್ನ ವ್ಯರ್ಥವಾಯಿತು.

ಇದಕ್ಕೂ ಮುನ್ನ ಪಾಕ್ ತಂಡದವರು ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರಿದರು. ಹಾಗಾಗಿ ಹ್ಯಾಟ್ರಿಕ್ ಚಾಂಪಿಯನ್ ಕಾಂಗರೂ ಪಡೆ ಪ್ರತಿ ರನ್ ಗಳಿಸಲು ಪರದಾಡಬೇಕಾಯಿತು. ಟಾಸ್ ಗೆದ್ದು ಬ್ಯಾಟಿಂಗ್ಗೆ ಮುಂದಾದ ಅವರು ಒಂದು ಹಂತದಲ್ಲಿ 75 ರನ್ಗೆ ಒಂದು ವಿಕೆಟ್ ಕಳೆದುಕೊಂಡು ಉತ್ತಮ ಮೊತ್ತದತ್ತ ಮುನ್ನಡೆದಿದ್ದರು. ಈ ಹಂತದಲ್ಲಿ ಮೊಹಮ್ಮದ್ ಹಫೀಜ್ ನಾಯಕ ಪಾಂಟಿಂಗ್ ವಿಕೆಟ್ ಪಡೆದಿದ್ದು ಟರ್ನಿಂಗ್ ಪಾಯಿಂಟ್ ಆಗಿ ಪರಿಣಮಿಸಿತು. ಆ ಬಳಿಕ ಆಸೀಸ್ ಸುಧಾರಿಸಿಕೊಳ್ಳಲೇ ಇಲ್ಲ.

ಬ್ರಾಡ್ ಹಡ್ಡಿನ್ (42) ಹಾಗೂ ಮೈಕಲ್ ಕ್ಲಾರ್ಕ್ (34) ನಡೆಸಿದ ಪ್ರಯತ್ನ ಸಾಕಾಗಲಿಲ್ಲ. 144 ರನ್ ಆಗುವಷ್ಟರಲ್ಲಿ ಪ್ರಮುಖ ಬ್ಯಾಟ್ಸ್ಮನ್ಗಳು ಗೂಡು ಸೇರಿದ್ದರು. ಸ್ಟೀವನ್ ಸ್ಮಿತ್ (25; 32 ಎಸೆತ) ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಕೊನೆಯಲ್ಲಿ 46.4 ಓವರ್ಗಳಲ್ಲಿ 176 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. 1992ರ ನಂತರ ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ಗಳಿಸಿದ ಅತಿ ಕಡಿಮೆ ಮೊತ್ತವಿದು.

ಸ್ಕೋರ್ ವಿವರ

ಆಸ್ಟ್ರೇಲಿಯಾ 46.4 ಓವರ್ಗಳಲ್ಲಿ 176
ಶೇನ್ ವಾಟ್ಸನ್ ಬಿ ಉಮರ್ ಗುಲ್ 09
ಬ್ರಾಡ್ ಹಡ್ಡಿನ್ ಸಿ ಕಮ್ರನ್ ಅಕ್ಮಲ್ ಬಿ ವಹಾಬ್ ರಿಯಾಜ್ 42
ರಿಕಿ ಪಾಂಟಿಂಗ್ ಸಿ ಕಮ್ರನ್ ಅಕ್ಮಲ್ ಬಿ ಮೊಹಮ್ಮದ್ ಹಫೀಜ್ 19
ಮೈಕಲ್ ಕ್ಲಾರ್ಕ್ ಬಿ ಅಬ್ದುಲ್ ರಜಾಕ್ 34
ಕೆಮರೂನ್ ವೈಟ್ ರನ್ಔಟ್ (ಮಿಸ್ಬಾ/ಕಮ್ರನ್) 08
ಮೈಕ್ ಹಸ್ಸಿ ಸಿ ಮಿಸ್ಬಾ ಉಲ್ ಹಕ್ ಬಿ ಅಬ್ದುರ್ ರೆಹಮಾನ್ 12
ಸ್ಟೀವನ್ ಸ್ಮಿತ್ ಬಿ ಶಾಹೀದ್ ಅಫ್ರಿದಿ 25
ಮಿಶೆಲ್ ಜಾನ್ಸನ್ ಸಿ ಕಮ್ರನ್ ಅಕ್ಮಲ್ ಬಿ ಅಬ್ದುಲ್ ರಜಾಕ್ 00
ಜೇಸನ್ ಕ್ರೇಜಾ ಬಿ ಉಮರ್ ಗುಲ್ 07
ಬ್ರೆಟ್ಲೀ ಸಿ ಮಿಸ್ಬಾ ಬಿ ಉಮರ್ ಗುಲ್ 05
ಶೇನ್ ಟೈಟ್ ಔಟಾಗದೆ 00
ಇತರೆ (ಲೆಗ್ಬೈ-5, ವೈಡ್-10) 15
ವಿಕೆಟ್ ಪತನ: 1-12 (ವಾಟ್ಸನ್; 4.3); 2-75 (ಪಾಂಟಿಂಗ್; 18.4); 3-90 (ಹಡ್ಡಿನ್; 23.4); 4-117 (ವೈಟ್; 30.1); 5-134 (ಕ್ಲಾರ್ಕ್; 34.4); 6-144 (ಹಸ್ಸಿ; 37.4); 7-147 (ಜಾನ್ಸನ್; 38.4); 8-169 (ಕ್ರೇಜಾ; 44.3); 9-176 (ಸ್ಮಿತ್; 45.5); 10-176 (ಬ್ರೆಟ್ಲೀ; 46.4).
ಬೌಲಿಂಗ್: ಉಮರ್ ಗುಲ್ 7.4-1-30-3 (ವೈಡ್-1), ಅಬ್ದುರ್ ರೆಹಮಾನ್ 10-0-34-1 (ವೈಡ್-1), ಶಾಹೀದ್ ಅಫ್ರಿದಿ 9-0-34-1 (ವೈಡ್-1), ವಹಾಬ್ ರಿಯಾಜ್ 6-0-39-1 (ವೈಡ್-3), ಮೊಹಮ್ಮದ್ ಹಫೀಜ್ 10-0-26-1, ಅಬ್ದುಲ್ ರಜಾಕ್ 4-0-8-2.

ಪಾಕಿಸ್ತಾನ 41 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178
ಕಮ್ರನ್ ಅಕ್ಮಲ್ ಎಲ್ಬಿಡಬ್ಲ್ಯು ಬಿ ಬ್ರೆಟ್ಲೀ 23
ಮೊಹಮ್ಮದ್ ಹಫೀಜ್ ಸಿ ಅಂಡ್ ಬಿ ಬ್ರೆಟ್ಲೀ 05
ಅಸಾದ್ ಶಫಿಕ್ ಸಿ ವಾಟ್ಸನ್ ಬಿ ಮಿಶೆಲ್ ಜಾನ್ಸನ್ 46
ಯೂನಿಸ್ ಖಾನ್ ಸಿ ಬ್ರಾಡ್ ಹಡ್ಡಿನ್ ಬಿ ಬ್ರೆಟ್ಲೀ 31
ಮಿಸ್ಬಾ ಉಲ್ ಹಕ್ ಸಿ ಹಡ್ಡಿನ್ ಬಿ ಬ್ರೆಟ್ಲೀ 00
ಉಮರ್ ಅಕ್ಮಲ್ ಔಟಾಗದೆ 44
ಶಾಹೀದ್ ಅಫ್ರಿದಿ ಸಿ ಬ್ರೆಟ್ ಲೀ ಬಿ ಜೇಸನ್ ಕ್ರೇಜಾ 02
ಅಬ್ದುಲ್ ರಜಾಕ್ ಔಟಾಗದೆ 20
ಇತರೆ (ಬೈ-2, ಲೆಗ್ಬೈ-1, ವೈಡ್-4) 07
ವಿಕೆಟ್ ಪತನ: 1-12 (ಹಫೀಜ್; 2.4); 2-45 (ಕಮ್ರನ್; 8.4); 3-98 (ಯೂನಿಸ್; 22.4); 4-98 (ಮಿಸ್ಬಾ; 22.5); 5-139 (ಶಫಿಕ್; 31.6); 6-142 (ಅಫ್ರಿದಿ; 32.5).
ಬೌಲಿಂಗ್: ಬ್ರೆಟ್ಲೀ 8-1-28-4, ಶಾನ್ ಟೈಟ್ 8-1-37-0 (ವೈಡ್-3), ಮಿಶೆಲ್ ಜಾನ್ಸನ್ 9-1-40-1 (ವೈಡ್-1), ಶೇನ್ ವಾಟ್ಸನ್ 6-0-26-0, ಜೇಸನ್ ಕ್ರೇಜಾ 10-0-44-1
ಫಲಿತಾಂಶ: ಪಾಕಿಸ್ತಾನಕ್ಕೆ ನಾಲ್ಕು ವಿಕೆಟ್ ಗೆಲುವು. ಪಂದ್ಯ ಪುರುಷೋತ್ತಮ: ಉಮರ್ ಅಕ್ಮಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.