ಮೊಹಾಲಿ (ಪಿಟಿಐ): `ಪುಣೆ ವಾರಿಯರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಗೆಲುವು ಸಾಧಿಸಲು ನಮ್ಮ ಬೌಲರ್ಗಳ ಸಮರ್ಥ ದಾಳಿ ಕಾರಣ. ಶಾನ್ ಮಾರ್ಷ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಸಹ ಇದಕ್ಕೆ ನೆರವಾಯಿತು. ಆದ್ದರಿಂದ ಈ ಗೆಲುವಿನ ಶ್ರೇಯ ಬೌಲರ್ಗಳಿಗೆ ಹಾಗೂ ಮಾರ್ಷ್ ಅವರಿಗೆ ಸಲ್ಲಬೇಕು~ ಎಂದು ಕಿಂಗ್ಸ್ ಇಲೆವೆನ್ ತಂಡದ ನಾಯಕ ಆ್ಯಡಮ್ ಗಿಲ್ಕ್ರಿಸ್ಟ್ ಹೇಳಿದರು.

ಡಿಮಿಟ್ರಿ ಮಸ್ಕರೆನಾಸ್ ಐದು ವಿಕೆಟ್ ಪಡೆದು ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು. ಮಾರ್ಷ್ ಔಟಾಗದೆ 64 ರನ್ ಗಳಿಸಿದ್ದರು. ಇದರಿಂದ ಪಂಜಾಬ್ ಐಪಿಎಲ್ ಐದನೆಯ ಆವೃತ್ತಿಯಲ್ಲಿ ಮೊದಲ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ವಾರಿಯರ್ಸ್ 115 ರನ್ ಗಳಿಸಿತ್ತು. ಗಿಲ್ಕ್ರಿಸ್ಟ್ ಪಡೆ 17.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಈ ಗುರಿ ತಲುಪಿತ್ತು.

ಇಂಗ್ಲೆಂಡ್ನ ಮಸ್ಕರೆನಾಸ್ ಅವರಿಗೆ ಹರ್ಮಿತ್ ಬಸ್ನಾಲ್ (2 ವಿಕೆಟ್) ಹಾಗೂ ಪಿಯೂಷ್ ಚಾವ್ಲಾ (1 ವಿಕೆಟ್) ಸಾಥ್ ನೀಡಿದ್ದರು. ವೇಗಿಗಳಾದ ಪ್ರವೀಣ್ ಕುಮಾರ್, ಪರ್ವೀಂದರ್ ವಿಕೆಟ್ ಪಡೆಯದಿದ್ದರೂ, ಹೆಚ್ಚು ರನ್ ಬಿಟ್ಟುಕೊಡಲಿಲ್ಲ.

`ಪಂದ್ಯದ ಹಿಂದಿನ ದಿನ ಮಳೆ ಬಂದ ಕಾರಣ ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡೆವು. ಪರಿಸ್ಥಿತಿಗೆ ತಕ್ಕಂತೆ ಬೌಲರ್ಗಳು ಚೆಂಡನ್ನೆಸೆದರು. ಇದು ನಮ್ಮ ತಂಡಕ್ಕೆ ಅನುಕೂಲವಾಯಿತು~ ಎಂದು ಪಂದ್ಯದ ನಂತರ ಗಿಲ್ಕ್ರಿಸ್ಟ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.