ಶನಿವಾರ, ಜನವರಿ 18, 2020
18 °C

ಗೆಹ್ಲೋಟ್‌ ರಾಜೀನಾಮೆ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ (ಪಿಟಿಐ): ರಾಜಸ್ತಾನ ವಿಧಾನಸಭೆ ನಡೆದ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್  ವಿಫಲವಾದ ಬೆನ್ನಲ್ಲೆ ಮುಖ್ಯಮಂತ್ರಿ ಸ್ಥಾನಕ್ಕೆ ಅಶೋಕ್‌ ಗೆಹ್ಲೋಟ್ ಭಾನುವಾರ ರಾಜೀನಾಮೆ ನೀಡಿದ್ದಾರೆ. ಆದರೆ ತಮ್ಮ ಪಕ್ಷ ಜನತೆಯ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿದೆ ಎಂದು ನುಡಿದಿದ್ದಾರೆ.

ರಾಜ್ಯಪಾಲ ಮಾರ್ಗರೇಟ್‌ ಆಳ್ವಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ‘ಸೋಲನ್ನು ವಿನಯ ಪೂರ್ವಕವಾಗಿ ಸ್ವೀಕರಿಸುವೆ ಹಾಗೂ ಜಯ ದಾಖಲಿಸಿದವರಿಗೆ ಶುಭಕೋರುವೆ. ಮುಂದೆಯೂ ನಾವು  ಜನರ ಅಭಿವೃದ್ಧಿ ಕಾರ್ಯ ಮುಂದುವರಿಸುವ ಜೊತೆಗೆ ಸಕಾರಾತ್ಮಕ ಪಾತ್ರ ನಿಭಾಯಿಸುತ್ತೇವೆ’ ಎಂದು ಹೇಳಿದರು.

ಉತ್ತಮ ಅಭಿವೃದ್ಧಿ ಮಾಡಿದ್ದಾಗ್ಯೂ‘ ಸೋಲುಕಂಡಿದ್ದೇವೆ. ಇದು ವಿಶ್ಲೇಷಣೆ ಒಳಪಡಿಸುವ ವಿಷಯ’ ಎಂದೂ ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)