ಗುರುವಾರ , ಜೂನ್ 17, 2021
21 °C

ಗೈರು: ಇಬ್ಬರು ಶಿಕ್ಷಕಿಯರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ತಾಲ್ಲೂಕಿನ ಇಬ್ಬರು ಶಿಕ್ಷಕಿಯರು ದೀರ್ಘಕಾಲ ಗೈರು ಹಾಜರಾದ ಹಿನ್ನೆಲೆಯಲ್ಲಿ ಇಬ್ಬರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ.ತಾಲ್ಲೂಕಿನ ಗೋವಿಂದಗಿರಿ ತಾಂಡದ ಸರ್ಕಾರಿ ಹಿ.ಪ್ರಾ.ಶಾಲೆಯ ಜೆ.ಕೆ.ಶೋಭಾ ಎಂಬ ಶಿಕ್ಷಕಿ 2011ರ ಜುಲೈ 1ರಿಂದ ಶಾಲೆಗೆ ಅನಧಿಕೃತ ಗೈರು ಹಾಜರಾಗಿರುತ್ತಾರೆ.ಚಿಕ್ಕಜೋಗಿಹಳ್ಳಿ ತಾಂಡದ ವಿ.ಕೆ. ಸುವರ್ಣ ಎಂಬ ಶಿಕ್ಷಕಿ 2009ರಿಂದ ಕೆಲವು ದಿನಗಳವರೆಗೆ ಹಾಗೂ 2010ರಿಂದ 2012 ಫೆಬ್ರುವರಿ 27ರವರೆಗೆ ಶಾಲೆಗೆ ಅನಧಿಕೃತ ಗೈರು ಹಾಜರಾಗಿರುತ್ತಾರೆ.

 ಈ ಕುರಿತು ಇಬ್ಬರು ಶಿಕ್ಷಕಯರಿಗೂ ನೋಟೀಸ್‌ಗಳನ್ನು ಕಳಿಸಿದ್ದರೂ, ದೂರವಾಣಿಯ ಮೂಲಕ ತಿಳಿಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲವಾದ್ದರಿಂದ ಕೆಸಿಎಸ್‌ಆರ್ ನಿಯಮಾವಳಿಗಳ ಪ್ರಕಾರ ಇವರನ್ನು ಅಮಾನತುಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.