ಸೋಮವಾರ, ಮೇ 10, 2021
25 °C

ಗೊಬ್ಬರಗುಂಪಿಯಲ್ಲಿ ರೇಷ್ಮೆ ಕೃಷಿ ಕ್ಷೇತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವಲಗುಂದ: ರೈತರು ರೇಷ್ಮೆ ವ್ಯವಸಾಯ ಮಾಡುವುದರಿಂದ ಹೆಚ್ಚು ಆರ್ಥಿಕವಾಗಿ ಸುಧಾರಣೆಯಾಗಬಹುದು. ವ್ಯವಸಾಯದಲ್ಲಿ ಸರಳ ತಾಂತ್ರಿಕತೆ ಉಪಯೋಗಿಸಿ ಕೊಂಡಾಗ ಉತ್ತಮ ಬೆಳೆ ಪಡೆಯಬಹುದಾಗಿದೆ ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಡಿ.ಕೆ.ಪುಟ್ಟರಂಗಸ್ವಾಮಿ ರೈತರಿಗೆ ಸಲಹೆ ನೀಡಿದರು.ಇತ್ತೀಚೆಗೆ ತಾಲ್ಲೂಕಿನ ಗೊಬ್ಬರಗುಂಪಿ ಗ್ರಾಮದಲ್ಲಿ ರೈತ ಬಸವಂತಪ್ಪ ಮುಗದ ಅವರ ಹಿಪ್ಪುನೇರಳೆ ತೋಟದಲ್ಲಿ ಏರ್ಪಡಿಸಿದ ರೇಷ್ಮೆ ಕೃಷಿ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.ತಾಲ್ಲೂಕಿನಲ್ಲಿ ರೇಷ್ಮೆ ವ್ಯವಸಾಯವನ್ನು 2007-08ನೇ ಸಾಲಿನಿಂದ ಅರಹಟ್ಟಿ ಗ್ರಾಮದ ಗದಿಗೆಪ್ಪ ಜಲಾದಿ, ತಡಹಾಳ ಗ್ರಾಮದ ರಮೇಶ ಮೇಟಿ ಅವರಿಂದ ಪ್ರಾರಂಭಿಸಿದ್ದು, ರಮೇಶ ಮೇಟಿ, ರೂ.12 ಲಕ್ಷ ಆದಾಯ ಪಡೆದಿದ್ದಾರೆ ಎಂದು ರೇಷ್ಮೆ ನಿರೀಕ್ಷಕ ಎಸ್.ಎಫ್.ದಾನಪ್ಪಗೌಡ್ರ ವಿವರಿಸಿದರು.ಬೆಳವಟಗಿ ಗ್ರಾ.ಪಂ.ಸದಸ್ಯ ಸಿದ್ದನಗೌಡ ಕರೆಪ್ಪಗೌಡ್ರ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯ ಮಲ್ಲನಗೌಡ ರಾಟಿಮನಿ ಪಾಲ್ಗೊಂಡಿದ್ದರು.ರೇಷ್ಮೆ ವಿಸ್ತರಣಾ ಅಧಿಕಾರಿ ಎಸ್.ಜಿ.ದಾನಿ ರೇಷ್ಮೆ ಇಲಾಖೆಯಲ್ಲಿನ ವಿವಿಧ ಯೋಜನೆಗಳು, ಪ್ರೋತ್ಸಾಹಧನ, ರೇಷ್ಮೆ ಹುಳು ಸಾಕಾಣಿಕೆ, ಹೊಸ ತಳಿ ಹಿಪ್ಪು ನೇರಳೆ ನಾಟಿಗೆ ಹಾಗೂ ರೇಷ್ಮೆ ಉಪಕರಣಗಳ ಖರೀದಿ ಕುರಿತು ಮಾತನಾಡಿದರು.ಎಸ್.ಸಿ.ಜಾಲಿಕಟ್ಟಿ ಮಾತನಾಡಿ ರೈತರು ನೀರಾವರಿ ಭೂಮಿಯಲ್ಲಿ ವರ್ಷಕ್ಕೆ ಎರಡು ಬೆಳೆ ಮಾತ್ರ ಬೆಳೆಯುತ್ತಾರೆ. ಆದರೆ ರೇಷ್ಮೆ ವ್ಯವಸಾಯ ಮಾಡಿದರೆ ಪ್ರತಿ ವರ್ಷ 4 ರಿಂದ 5 ಬೆಳೆ ಬೆಳೆಯಬಹುದೆಂದು ತಿಳಿಸಿದರು.ಕೃಷಿ ಅಧಿಕಾರಿ ಆರ್.ಎಚ್.ಪದಕಿ ಭೂಮಿ ಫಲವತ್ತತೆ ಕಾಪಾಡಿಕೊಂಡು ಆದಾಯ ಹೆಚ್ಚಿಸಿಕೊಳ್ಳುವುದರ ಕುರಿತು ಮಾತನಾಡಿದರು. ಪ್ರಗತಿಪರ ರೈತ ಮಲಕಾಜಗೌಡ ಉಪಸ್ಥಿತರಿದ್ದರು. ಎಸ್.ಎಫ್.ದಾನಪ್ಪಗೌಡ್ರ ಸ್ವಾಗತಿಸಿದರು. ಬಿ.ಎ.ಗಾಣಿಗೇರ ವಂದಿಸಿದರು.ಓಶೋ ಧ್ಯಾನ ಶಿಬಿರ 8ರಂದು

ಹುಬ್ಬಳ್ಳಿ:
ಬುದ್ಧ ಧ್ಯಾನ ಕೇಂದ್ರದ ವತಿಯಿಂದ ಇದೇ 8ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯಾನಗರದ ಜಯನಗರದ ಚೇತನಾ ಕಾಲೊನಿಯ 3ನೇ ಕ್ರಾಸ್‌ನಲ್ಲಿಯ ಬುದ್ಧ ಧ್ಯಾನ ಕೇಂದ್ರದಲ್ಲಿ ಓಶೋ ಧ್ಯಾನ ಶಿಬಿರವನ್ನು ಏರ್ಪಡಿಸಲಾಗಿದೆ.ಶಿಬಿರದಲ್ಲಿ ಓಶೋ ವಿಚಾರಧಾರೆ, ಅವರ ಅಸಂಪ್ರದಾಯಿಕ ಧ್ಯಾನ ಪದ್ಧತಿಗಳನ್ನು ಹಾಗೂ ಬುದ್ಧನ ವಿಪಷನ ಧ್ಯಾನ ಕಲಿಸಲಾಗುತ್ತದೆ. ಅಲ್ಲದೇ ಬುದ್ಧ-ಓಶೋ-ಸೂಫಿ-ತಾವೋ ಅವರ ಧ್ಯಾನ ವಿಧಾನಗಳನ್ನು ಹೇಳಿಕೊಡಲಾಗುತ್ತದೆ. ಆಸಕ್ತರು ಜಯದೇವ ಪೂಜಾರ (9448146225) ಇಲ್ಲವೆ ರಘು (9845284576) ಅವರನ್ನು ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.