ಬೆಂಗಳೂರು: ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮೂಲಕ 1,163 ಕೋಟಿ ರೂಪಾಯಿ ವೆಚ್ಚದಲ್ಲಿ ಎಂಟು ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮುಂಗಾರು ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಖರೀದಿಸಲು ನಿರ್ಧರಿಸಲಾಯಿತು ಎಂದು ಕಾನೂನು ಸಚಿವ ಎಸ್.ಸುರೇಶಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

1.5 ಲಕ್ಷ ಟನ್ ಯೂರಿಯಾ, ಮೂರು ಲಕ್ಷ ಟನ್ ಡಿಎಪಿ, 2.5 ಲಕ್ಷ ಟನ್ ಕಾಂಪ್ಲೆಕ್ಸ್ ಹಾಗೂ ಒಂದು ಲಕ್ಷ ಟನ್ ಎಂಒಪಿ ರಸಗೊಬ್ಬರ ಖರೀದಿಸಲಾಗುತ್ತದೆ. 1,163 ಕೋಟಿ ರೂಪಾಯಿಗೆ ಸರ್ಕಾರ ಖಾತರಿ ನೀಡಲಿದೆ. ವರ್ಷಕ್ಕೆ 30.5 ಕೋಟಿ ರೂಪಾಯಿ ಬಡ್ಡಿ, 14.63 ಕೋಟಿ ರೂಪಾಯಿ ಶೇಖರಣಾ ವೆಚ್ಚ, 6.75 ಕೋಟಿ ರೂಪಾಯಿ ಸಾಗಾಣಿಕೆ ಮತ್ತು ಹಮಾಲಿ ವೆಚ್ಚ ಭರಿಸಲು ಸಂಪುಟ ಒಪ್ಪಿಗೆ ನೀಡಿದೆ.

ಆಯೋಗ ರಚನೆ: ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ, ಸುಧಾರಣೆ ತರುವ ನಿಟ್ಟಿನಲ್ಲಿ ಕರ್ನಾಟಕ ಆರೋಗ್ಯ ವ್ಯವಸ್ಥೆ ಆಯೋಗ ರಚಿಸಲು ತೀರ್ಮಾನಿಸಲಾಗಿದೆ. ಆರೋಗ್ಯ ಕ್ಷೇತ್ರದ ಸುಧಾರಣೆ ಮತ್ತು ಸಂಶೋಧನೆ ಬಗ್ಗೆ ಸಲಹೆಗಳನ್ನು ಕೊಡುವುದು, ಖಾಸಗಿ ಸಹಭಾಗಿತ್ವ ಪಡೆಯುವುದು, ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೋಗ್ಯ ವಲಯದಲ್ಲಿ ಸಂಶೋಧನಾ ವರದಿಯನ್ನು ತಯಾರಿಸುವುದು ಇತ್ಯಾದಿಗಳ ಬಗ್ಗೆ ಆಯೋಗ ವರದಿ ನೀಡಲಿದೆ.

ಹುಬ್ಬಳ್ಳಿಯಲ್ಲಿ ವಿವಿಧೋದ್ದೇಶ ಕಾಯಂ ವಸ್ತುಪ್ರದರ್ಶನ ಕೇಂದ್ರ ಸ್ಥಾಪಿಸಲಾಗುತ್ತದೆ. 2007-08ನೇ ಸಾಲಿನ ಬಜೆಟ್ನಲ್ಲಿ ಕೇಂದ್ರ ಸ್ಥಾಪನೆಯ ಘೋಷಣೆ ಮಾಡಲಾಗಿತ್ತು. ಹುಬ್ಬಳ್ಳಿ-ಧಾರವಾಡ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಈ ಬಗ್ಗೆ ಯೋಜನಾ ವರದಿ ಸಲ್ಲಿಸಿದೆ. ಇದಕ್ಕಾಗಿ 9 ಎಕರೆ ಭೂಮಿ ಗುರುತಿಸಲಾಗಿದ್ದು, ಕೇಂದ್ರ ಸ್ಥಾಪನೆಗೆ 7 ಕೋಟಿ ರೂಪಾಯಿ ವೆಚ್ಚವಾಗಲಿದೆ. 5.95 ಕೋಟಿ ರೂಪಾಯಿಯನ್ನು ಸರ್ಕಾರ ಮತ್ತು ಮಹಾಸಂಸ್ಥೆ ರೂ 1.05 ಕೋಟಿ ಭರಿಸಲಿದೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಭೂಮಿ ಸ್ವಾಧೀನಪಡಿಸಿಕೊಂಡಾಗ 529 ಜನರು ನಿವೇಶನ ಕಳೆದುಕೊಂಡಿದ್ದು, ಅವರಲ್ಲಿ 267 ಜನರು ಬದಲಿ ನಿವೇಶನಕ್ಕೆ ಮನವಿ ಮಾಡಿದ್ದರು. ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 70 ನಿವೇಶನ ಸದ್ಯ ಲಭ್ಯವಿದ್ದು, ಆದ್ಯತೆ ಮೇಲೆ ನೀಡಲು ನಿರ್ಧರಿಸಲಾಗಿದೆ ಎಂದರು.

ಮತ್ತೊಂದು ಖಾಸಗಿ ವಿ.ವಿ.ಗೆ ಒಪ್ಪಿಗೆ
ಬೆಂಗಳೂರು: ನಗರದಲ್ಲಿ ಎಂ.ಎಸ್. ರಾಮಯ್ಯ ಆನ್ವಯಿಕ ವಿಜ್ಞಾನಗಳ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಎಲ್ಲ ಕೋರ್ಸ್ಗಳ ಪ್ರವೇಶಾತಿಯಲ್ಲಿ ಸ್ಥಳೀಯರಿಗೆ ಶೇ 50ರಷ್ಟು ಸೀಟುಗಳನ್ನು ನೀಡಬೇಕು ಎಂಬ ಷರತ್ತು ವಿಧಿಸಲಾಗುತ್ತದೆ. ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಪಟ್ಟಂತೆ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು.

100 ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲಸೌಕರ್ಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಇನ್ನೂ ರೂ. 150 ಕೋಟಿ ರೂಪಾಯಿ ವೆಚ್ಚ ಮಾಡುವುದಾಗಿ ಸಚಿವರು ಹೇಳಿದರು.

ಸಂಪುಟದ ಇತರ ನಿರ್ಧಾರ
ಬಂಟ್ವಾಳ ತಾಲ್ಲೂಕು ಆಸ್ಪತ್ರೆಗೆ 100 ಹಾಸಿಗೆಗಳ ಸಾಮರ್ಥ್ಯದ 5.58 ಕೋಟಿ ರೂಪಾಯಿ ವೆಚ್ಚದ ಕಟ್ಟಡ ನಿರ್ಮಾಣ.

ನರಗುಂದ ತಾಲ್ಲೂಕು ಆಸ್ಪತ್ರೆಯ 100 ಹಾಸಿಗೆಗಳ ಸಾಮರ್ಥ್ಯದ ಕಟ್ಟಡವನ್ನು ರೂ 8.65 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಒಪ್ಪಿಗೆ.

ಜಮಖಂಡಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ 20.71 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಒಪ್ಪಿಗೆ.

ಹುಬ್ಬಳ್ಳಿಯ `ಕಿಮ್ಸ~ ಆವರಣದಲ್ಲಿ 375 ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪರೀಕ್ಷಾ, ಉಪನ್ಯಾಸ ಕೊಠಡಿ, ಆಡಳಿತ ವಿಭಾಗ ಕಟ್ಟಡ ನಿರ್ಮಿಸಲು 11.31 ಕೋಟಿ ವೆಚ್ಚದ ಯೋಜನೆಗೆ ಸಮ್ಮತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.