ಬುಧವಾರ, ಏಪ್ರಿಲ್ 14, 2021
24 °C

ಗೊಬ್ಬರ ಬೆಲೆ ಏರಿಕೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಕೇಂದ್ರದ ಯುಪಿಎ ಸರ್ಕಾರ ರಸಗೊಬ್ಬರ ಬೆಲೆ ಏರಿಕೆ ಮಾಡಿ ರುವುದನ್ನು ಖಂಡಿಸಿ ಜಿಲ್ಲಾ  ಜಿಜೆಪಿ ರೈತ ಮೊರ್ಚಾ ನೇತೃತ್ವದಲ್ಲಿ ರೈತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಜಿಲ್ಲೆಯ ನರಗುಂದ, ಶಿರಹಟ್ಟಿ, ರೋಣ, ಮುಂಡರಗಿ, ಗಂಜೇದ್ರಗಡ ತಾಲ್ಲೂಕುಗಳಿಂದ ಆಗಮಿ ಸಿದ್ದ ನೂರಾರು ರೈತರು ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೇಂದ್ರ ಸರ್ಕಾರ ರಸಗೊಬ್ಬರಗಳ ಬೆಲೆಯನ್ನು 2007-08ರಿಂದ ಸುಮಾರು 2ರಿಂದ ಮೂರು ಪಟ್ಟು ಹೆಚ್ಚಳ ಮಾಡಿರುವುದರಿಂದ ರೈತರಿಗೆ ಗೊಬ್ಬರ ಖರೀದಿಸಲು ತೊಂದರೆ ಯಾಗಿದೆ. 2010-11ನೇ ಸಾಲಿನಿಂದ ರಸಗೊಬ್ಬರಕ್ಕೆ ನಿಶ್ಚಿತ ಮೊತ್ತದ ರಿಯಾಯಿತಿ ನೀಡಿ ರಸಗೊಬ್ಬರಗಳ ಕಂಪೆನಿಗಳಿಗೆ ಮಾರುಕಟ್ಟೆಯಲ್ಲಿ ದರ ನಿಗದಿಗೊಳಿಸಲು ಮುಕ್ತ ಅವಕಾಶ ಮಾಡಿಕೊಟ್ಟಿರುವುದರಿಂದ ಕಂಪೆನಿಗಳು ಒಂದೊಂದು ಬೆಲೆಯನ್ನು ಮಾರು ಕಟ್ಟೆಯಲ್ಲಿ ನಿಗದಿ ಪಡಿಸುತ್ತಿವೆ. ಈ ಕಂಪೆನಿಗಳ ಮೇಲೆ ಕೇಂದ್ರ ಸರ್ಕಾರದ ಯಾವುದೇ ನಿಯಂತ್ರಣ ಇರುವುದಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಕ್ಕರೆ ಬೆಲೆಯನ್ನು ನಿಯಂತ್ರಿಸುತ್ತಿ ರುವ ಕೇಂದ್ರ ಸರ್ಕಾರ, ಕಬ್ಬು ಹಾಗೂ ಭತ್ತದ ಬೆಳೆಗಾರರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ನೀಡದಿರುವುದು ರೈತ ವಿರೋಧಿ ನೀತಿಯನ್ನು ತೋರಿಸುತ್ತದೆ. ರಾಜ್ಯದಲ್ಲಿ ಬರಗಾಲ ಇರುವುದರಿಂದ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಬೇಡಿಕೆ ಈಡೇರಿಸುವ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅವರಿಗೆ ಅರ್ಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಬುದ್ದಪ್ಪ, ಮಾಡಳ್ಳಿ, ಬಸವರಾಜು ಕೊಪ್ಪದ,  ರಾಮನಗೌಡ, ಶಂಕ್ರಪ್ಪ, ಹಂಪಯ್ಯ, ಶಿವಪ್ಪ ಮಡ್ಡಿ, ಕಲ್ಲನಗೌಡ ಕುಲಕರ್ಣಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.