ಶನಿವಾರ, ಫೆಬ್ರವರಿ 27, 2021
26 °C

ಗೋ ರಕ್ಷಕರಿಗೆ ಮೋದಿ ಅವಮಾನ: ವಿಎಚ್‌ಪಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋ ರಕ್ಷಕರಿಗೆ ಮೋದಿ ಅವಮಾನ: ವಿಎಚ್‌ಪಿ ಆರೋಪ

ನವದೆಹಲಿ (ಪಿಟಿಐ): ಸ್ವಘೋಷಿತ ನಕಲಿ ಗೋರಕ್ಷಕರು ಸಮಾಜ ಹಾಗೂ ರಾಷ್ಟ್ರವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಗೋ ರಕ್ಷಕರಿಗೆ ಅವಮಾನ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.ಮೋದಿ ಅವರ ಹೇಳಿಕೆಯಿಂದ ನೋವಾಗಿದೆ. ಗೋ ರಕ್ಷಕರ ವಿರುದ್ಧ ಹೇಳಿಕೆ ನೀಡುವ ಮೂಲಕ ಗೋವು ಮತ್ತು ಅವುಗಳನ್ನು ರಕ್ಷಣೆ ಮಾಡುತ್ತಿರುವ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ವಿಎಚ್‌ಪಿಯ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ದೂರಿದ್ದಾರೆ.ಶೇ 80ರಷ್ಟು ಗೋ ರಕ್ಷಕರು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಇದನ್ನು ಅವರು ಸಾಬೀತು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.ಗೋ ಹತ್ಯೆ, ಗೋವುಗಳ ಕಳ್ಳ ಸಾಗಣೆ, ಗೋ ಮಾಂಸ ಮಾರಾಟವನ್ನು ತಡೆಯಲು ಕಾನೂನು ರೂಪಿಸಬೇಕು ಎಂದು ತೊಗಾಡಿಯಾ ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.