ಮಂಗಳವಾರ, ಮೇ 24, 2022
30 °C

ಗ್ರಾ.ಪಂ.ಗೆ ಮುತ್ತಿಗೆ- ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಹೋಬಳಿಯಾದ್ಯಂತ ಹದಗೆಟ್ಟಿರುವ ರಸ್ತೆಗಳ ಬಗ್ಗೆ ಜನರ ಗಮನ ಸೆಳೆಯಲು ಅಖಿಲ ಭಾರತ ಯುವಜನ ಫೆಡರೇಶನ್ ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ಮತ್ತು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿತು.ಕೈಮರದಿಂದ ಆರಂಭಗೊಂಡ ಪ್ರತಿಭಟನಾ ಮೆರ ವಣಿಗೆಯಲ್ಲಿ ಗ್ರಾ.ಪಂ., ತಾ.ಪಂ. ಮತ್ತು ಜಿ.ಪಂ. ಸದಸ್ಯರು, ಅಧ್ಯಕ್ಷರಿಗೆ ಧಿಕ್ಕಾರ ಹಾಕಲಾಯಿತು. ರಸ್ತೆ ಗಳು ಶೋಚನೀಯ ಸ್ಥಿತಿಗೆ ತಲುಪಿದ್ದರೂ ನಿರ್ವ ಹಣೆಗೆ ಗಮನ ನೀಡದ ಅಧಿಕಾರಿಗಳ ವಿರುದ್ಧವೂ ಘೋಷಣೆಗಳು ಕೇಳಿ ಬಂದವು.ಸಿ.ಪಿ.ಐ. ಮುಖಂಡರಾದ ಗೋಪಾಲ ಶೆಟ್ಟಿ, ಲಕ್ಷ್ಮಣಾಚಾರ್ ನೇತೃತ್ವದಲ್ಲಿ ನಡೆದ ಮೆರವಣಿಗೆ ಯಲ್ಲಿ ಎಐವೈಎಫ್‌ಮುಖಂಡರಾದ ಪೆರಿಯ ಸ್ವಾಮಿ, ಸುಂಕ ಸಾಲೆ ರವಿ, ಅಣ್ಣಪ್ಪ ಮತ್ತಿತರರು ಭಾಗವಹಿಸಿದ್ದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಆನಂತರ ಕಳಸ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದರು. ಕಚೇರಿಯ ಮೆಟ್ಟಿಲುಗಳಲ್ಲಿ ಸುಡುಬಿಸಿಲಿನಲ್ಲಿ ಎರಡು ಗಂಟೆಗಳ ಕಾಲ ಕಾರ್ಯಕರ್ತರು ಕುಳಿತಿದ್ದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಲಕ್ಷ್ಮಣಾಚಾರ್, ಗೋಪಾಲ ಶೆಟ್ಟಿ, ಪೆರಿಯಸ್ವಾಮಿ ಮಾತನಾಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾವೀರ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ಕಂಚಿನಕೆರೆ, ಕಾಳಿಕೆರೆ ಗ್ರಾಮಗಳಿಗೆ ನೀರು ಮತ್ತು ರಸ್ತೆ ಸೌಲಭ್ಯ ಅಸಮರ್ಪಕವಾಗಿದೆ ಎಂದು  ಪ್ರತಿಭಟನಾಕಾರರು ಗ್ರಾ.ಪಂ. ಅಧ್ಯಕ್ಷರ ಗಮನ ಸೆಳೆದರು.ಲೋಕೋಪಯೋಗಿ ಇಲಾಖೆಯ ಸುಪರ್ದಿಗೆ ಒಳಪಡುವ ಕಳಸ-ಕೊಟ್ಟಿಗೆಹಾರ, ಕಳಸ-ಬಸರೀಕಟ್ಟೆ, ಕಳಸ-ಹೊರನಾಡು ರಸ್ತೆಗಳೂ ಅವನತಿಯ ಅಂಚಿಗೆ ತಲುಪಿವೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತ ಪಡಿಸಿದರು.

 

ಗ್ರಾ.ಪಂ. ಅಧ್ಯಕ್ಷ ಭರತ್‌ರಾಜ್ ಮಾತ ನಾಡಿ, ರಸ್ತೆಗಳ ಅಭಿವೃದ್ಧಿಗೆ ಅನುದಾನದ ಕೊರತೆ ಇದೆ. ಕಂಚಿನಕೆರೆ ದಲಿತ ಕಾಲೊನಿಗೆ ರಸ್ತೆ ದುರಸ್ತಿಗೊಳಿಸಲು ಮತ್ತು ನೀರು ಪೂರೈಕೆ ಸರಿಪಡಿಸಲು 50 ಸಾವಿರ ರೂಪಾಯಿಯನ್ನು ನಿಗದಿ ಮಾಡಲಾಗಿದೆ ಎಂದರು.ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಚೆನ್ನಯ್ಯ ಮಾತನಾಡಿ, ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುತ್ತದೆ. ಕಳಸ ರಥಬೀದಿಯ ಕಾಂಕ್ರೆಟ್  ಕಾಮಗಾರಿ ಸದ್ಯದಲ್ಲೇ ಆರಂಭಗೊಳ್ಳಲಿದೆ ಎಂದು ಸ್ಪಷ್ಟನೆ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.