ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಂಡಿರುವ ಗ್ರಾಮೀಣ ದಸರಾ ಉದ್ಘಾಟನೆ ಸೆ.19ರಂದು ನಡೆಯಲಿದ್ದು, ನಂಜನಗೂಡು ತಾಲ್ಲೂಕಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಗ್ರಾಮೀಣಾಭಿ ವೃದ್ಧಿ ಸಚಿವ ಜಗದೀಶ ಶೆಟ್ಟರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಗ್ರಾಮೀಣರ ಮನೆ ಬಾಗಿಲಿಗೆ ನಾಡಹಬ್ಬ ದಸರಾವನ್ನು ಕೊಂಡೊಯ್ಯಲು ಜಿಲ್ಲಾಡಳಿತ ನಿರ್ಧರಿಸಿದ್ದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ `ಸ್ವಚ್ಛತೆಯೊಂದಿಗೆ ಗ್ರಾಮೀಣ ದಸರಾ~ ಕಾರ್ಯಕ್ರಮನಡೆಯಲಿದೆ.

ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಗುವುದು. ಆಯಾ ಗ್ರಾಮ ಪಂಚಾಯಿತಿ ಯಲ್ಲಿ ಬೀದಿಯನ್ನು ಸ್ವಚ್ಛ ಮಾಡಿದವರಿಗೆ ಬಹುಮಾನ ನೀಡ ಲಾಗುವುದು ಎಂದು ಗ್ರಾಮೀಣ ದಸರಾ ಉಪ ವಿಶೇಷಾಧಿಕಾರಿ ಜಿ.ಸತ್ಯವತಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಹಿಳೆಯರು ಹೆಚ್ಚಾಗಿ ಭಾಗ ವಹಿಸಲು ಅವಕಾಶ ನೀಡಲಿದ್ದು, ಪ್ರತಿ ಮನೆ ಮನೆ ಯವರೂ ದಸರಾದಲ್ಲಿ ಪಾಲ್ಗೊ ಳ್ಳಲು ಮಾಡು ವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸಂಪೂರ್ಣ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಡಿ ಪ್ರತಿ ಗ್ರಾಮಕ್ಕೆ 3 ಸಾವಿರ ರೂಪಾಯಿ ನೀಡುತ್ತಿದ್ದು, ಸ್ವಂತ ಸಂಪನ್ಮೂಲದಿಂದ 3 ಸಾವಿರ ರೂಪಾಯಿ ಸಂಗ್ರಹಿಸಿ ಈ ಕಾರ್ಯಕ್ರಮ ನೆರವೇರಿಸ ಲಾಗುವುದು ಎಂದರು.

ಗ್ರಾಮೀಣ ದಸರಾಕ್ಕೆ ಈ ಬಾರಿ 10ಲಕ್ಷ ರೂಪಾಯಿ ಅನುದಾನ ಬಂದಿದ್ದು, ಇದರಲ್ಲಿ ನಂಜನಗೂಡಿಗೆ 2ಲಕ್ಷ, ಉಳಿದ ತಾಲ್ಲೂಕುಗಳಿಗೆ 1.20ಲಕ್ಷ ರೂಪಾಯಿ ನೀಡಲಾಗಿದೆ.

21ರಂದು ಪಿರಿಯಾಪಟ್ಟಣ, 23ರಂದು ಕೆ.ಆರ್.ನಗರ, ತಿ.ನರಸೀ ಪುರ ಹಾಗೂ ಹುಣಸೂರು, 26ರಂದು ಮೈಸೂರು, 22ರಂದು ಎಚ್. ಡಿ. ಕೋಟೆಯಲ್ಲಿ ಗ್ರಾಮೀಣ ದಸರಾ ನಡೆಯಲಿದೆ ಎಂದರು.

ಗ್ರಾಮೀಣ ದಸರಾದಲ್ಲಿ ಪುರುಷರಿಗಾಗಿ ಕೆಸರು ಗದ್ದೆ ಓಟ, ಗುಂಡು ಎತ್ತುವ ಸ್ಪರ್ಧೆ, ಮೂಟೆ ಹೊತ್ತು ಓಡುವ ಸ್ಪರ್ಧೆ ನಡೆಯ ಲಿದ್ದು, ಮಹಿಳೆ ಯರಿಗಾಗಿ ರಂಗೋಲಿ ಸ್ಪರ್ಧೆ, ನೀರಿನ ಬಿಂದಿಗೆ ಹೊತ್ತು ಓಡು ವುದು, ಬುಟ್ಟಿ ಯಿಂದ ರಾಗಿ ಹೊತ್ತು ಓಡುವ ಸ್ಪರ್ಧೆ ನಡೆಯ ಲಿದೆ. ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿದ್ದು, ಉತ್ತಮ ಪ್ರದರ್ಶನ ನೀಡಿದ ವರನ್ನು ರೈತ ದಸರಾದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದರು.

ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕಂಸಾಳೆ, ಕೋಲಾಟ, ಡೊಳ್ಳುಕುಣಿತ, ಕೀಲು ಕುಣಿತ, ವೀರಗಾಸೆ, ಗೀಗಿ ಪದ, ನಂದಿಕೋಲು, ತಮಟೆ/ನಗಾರಿ, ವೀರ ಮಕ್ಕಳ ಕುಣಿತ, ಭಜನಾತಂಡ, ಸೋಬಾನೆ ಪದ ನಡೆಯಲಿದ್ದು, ಬಹುಮಾನ ಪಡೆದವರನ್ನು ಯುವದಸರಾ, ಆಹಾರಮೇಳ, ಕಲಾಮಂದಿರ ಇನ್ನಿತರೆ ಕಡೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸಲಾಗುವುದು. ಮುಖ್ಯಮಂತ್ರಿ ಸದಾನಂದಗೌಡರು ಹೇಳಿದಂತೆ ಈ ಬಾರಿ ಶೇ.50ಕ್ಕೂ ಹೆಚ್ಚು ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಗ್ರಾಮೀಣ ದಸರಾ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ (1,500) ದ್ವಿತೀಯ (ಒಂದು ಸಾವಿರ) ಹಾಗೂ ತೃತೀಯ (500 ರೂ) ಬಹುಮಾನ ನೀಡಲಾಗುವುದು. ಅಲ್ಲದೇ ಭಾಗವಹಿಸುವ ಕ್ರೀಡಾಪಟುಗಳಿಗೆ ಊಟ, ತಿಂಡಿ, ಸಾರಿಗೆ ವೆಚ್ಚ ಹಾಗೂ ಗೌರವಧನ ನೀಡಲಾಗುವುದು. ದಸರಾಕ್ಕೆ ಹೆಚ್ಚು ಜನರನ್ನು ಸೇರಿಸುವುದು ನಮ್ಮ ಉದ್ದೇಶ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಶಿವರಾಮು, ಗ್ರಾಮೀಣ ದಸರಾ ಉಪ ಸಮಿತಿಯ ಉಪಾಧ್ಯಕ್ಷ ಎಚ್.ಸಿ. ಲಕ್ಷ್ಮಣ್, ಎಚ್.ಎನ್.ಮಂಜುನಾಥ್, ನಂಜನಗೂಡು ತಹಶೀಲ್ದಾರ್ ನವೀನ್ ಜೋಸೆಫ್ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.