ಹಾಸನ: `ಜಾಗತೀಕರಣದಲ್ಲಿ ವಿದ್ಯಾವಂತ ಗ್ರಾಹಕರೇ ಮೋಸಕ್ಕೆ ಒಳಗಾಗುತ್ತಿದ್ದಾರೆ. ಅವಿದ್ಯಾವಂತ ಜನರ ಸ್ಥಿತಿ ಶೋಚನೀಯವಾಗಿದೆ~ ಎಂದು ಕಾನೂನು ಕಾಲೇಜು ಸಹಪ್ರಾಧ್ಯಾಪಕ ಪ್ರೊ . ಲಕ್ಷ್ಮಣ್ ಆತಂಕ ವ್ಯಕ್ತಪಡಿಸಿದರು.

ಗೋರೂರು ಎ.ಎನ್. ವರದರಾಜುಲು ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಆರ್ಥಿಕ ಚಿಂತನಾ ವೇದಿಕೆಯ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ವಿದ್ಯಾವಂತರು ಎಚ್ಚೆತ್ತುಕೊಂಡು ವಂಚನೆಗೆ ಒಳಗಾಗುತ್ತಿರುವ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು~ ಎಂದರು.

ಉಪನ್ಯಾಸಕರಾಗಿದ್ದ ಸರ್ಕಾರಿ ಕಾನೂನು ಕಾಲೇಜು ಸಹಪ್ರಾಧ್ಯಾಪಕ ಡಾ. ರಾಜೇಂದ್ರಕುಮಾರ್ ಹಿಟ್ಟಣಗಿ, `ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವುದೇ ಗ್ರಾಹಕರ ದಿನಾಚರಣೆ ಉದ್ದೇಶ.

ಶೋಷಣೆಗೊಳಗಾಗದೆ ಯಾವ ರೀತಿ ಕಾನೂನಿನ ಮೂಲಕ ನ್ಯಾಯ ದೊರಕಿಸಕೊಳ್ಳಬಹುದು ಎಂಬುದನ್ನು ಎಲ್ಲರೂಅರಿತುಕೊಳ್ಳಬೇಕು~ ಎಂದರು.

ಉಪನ್ಯಾಸಕಿ ಸಿ.ಆರ್. ಪುಷ್ಪವತಿ, ಕಾಲೇಜು ಪ್ರಾಂಶುಪಾಲ ಡಾ. ಎಂ.ಆರ್. ಚಂದ್ರಶೇಖರ್ ಮತನಾಡಿದರು. ಉಪನ್ಯಾಸಕ ಜೆ.ಪಿ. ಧರ್ಮೇಗೌಡ ಉಪಸ್ಥಿತರಿದ್ದರು.
ವಿದ್ಯಾರ್ಥಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ವಾಣಿ ವಂದಿಸಿದರು.

ಸಮ್ಮಿಶ್ರ ಸರ್ಕಾರ ಸೂಕ್ತ: ಕಾಲೇಜಿನ ರಾಜಕೀಯ ಚಿಂತನಾ ವೇದಿಕೆ ಆಶ್ರಯದಲ್ಲಿ ಈಚೆಗೆ `ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮ್ಮಿಶ್ರಸರ್ಕಾರ ಸೂಕ್ತ~ ವಿಷಯದ ಕುರಿತು ವಿಚಾರಗೋಷ್ಠಿ ಏರ್ಪಡಿಸಲಾಗಿತ್ತು.

ವಿಷಯದ ಪರವಾಗಿ ಅಂತಿಮ ಬಿ.ಎ ವಿದ್ಯಾರ್ಥಿ ಯು.ಪಿ ರಾಕೇಶ್, ಶೇಖರ್, ವಿಷಯದ ವಿರುದ್ಧವಾಗಿ ಎಚ್.ಆರ್ ಸಂತೋಷ್, ಅಶ್ವಿನಿ ವಿಚಾರ ಮಂಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಂತಿಮ ಬಿ.ಎ ವಿದ್ಯಾಥಿ ಗಂಗಾಧರ್, `ಕಾಲೇಜಿನಲ್ಲಿ ಈ ರೀತಿಯ ಚರ್ಚಾ ಗೋಷ್ಠಿ ಆಯೋಜಿಸಿದರೆ ವಿದ್ಯಾರ್ಥಿಗಳಿಗೆ ಜ್ಞಾನಾಭಿವೃದ್ಧಿಗೆ ಅನುಕೂಲವಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ~ ಎಂದರು.

ಪ್ರಚಾರ್ಯ ಡಾ. ಎಂ.ಆರ್. ಚಂದ್ರಶೇಖರ್, ಉಪನ್ಯಾಸಕ ಎಚ್.ಡಿ. ಲೋಕೇಶ್. ಭಾಗವಹಿಸಿದ್ದರು. ವಿದ್ಯಾರ್ಥಿ ಅಭಿಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಸಂತಕುಮಾರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.