ಸೋಮವಾರ, ಜನವರಿ 20, 2020
27 °C

ಗ್ರಾಹಕರಿಗೆ ಕಾದಿದೆ ಗಂಡಾಂತರ

–ಸದಾನಂದ ದೀಕ್ಷಿತ,ಹುಬ್ಬಳ್ಳಿ Updated:

ಅಕ್ಷರ ಗಾತ್ರ : | |

ಇಷ್ಟು ದಿನ ಆಧಾರ್ ಅವಾಂತರ,  ಇನ್ನು ಮುಂದೆ  ಅಡುಗೆ ಅನಿಲ ಏಜೆನ್ಸಿಯವರ  ಮಂಗನಾಟಕ್ಕೆ ಗ್ರಾಹಕರು ಸಿದ್ಧರಾಗಬೇಕಿದೆ. ಅದೇನೆಂದರೆ, ಒಬ್ಬ ಎಲ್‌ಪಿಜಿ ಗ್ರಾಹಕನಿಗೆ ವರ್ಷಕ್ಕೆ 9 ಸಿಲಿಂಡರ್‌ಗಳು ಮಾತ್ರ ಎಂದು ಕೇಂದ್ರ ಸರ್ಕಾರ ಈಗಾಗಲೇ ಆದೇಶಿದೆ.ಒಂದು ವೇಳೆ ಗ್ರಾಹಕರು ಮುಂದಿನ ವರ್ಷದ, ಫೆಬ್ರುವರಿ ತಿಂಗಳ ಕೊನೆಯಲ್ಲಿ 8 ಸಿಲಿಂಡರ್‌ಗಳನ್ನು ಪಡೆದಿದ್ದರೆ ಈ ಗ್ರಾಹಕನ ಕೋಟಾದಲ್ಲಿ ಇನ್ನೂ ಒಂದು ಎಲ್‌ಪಿಜಿ ಸಿಲಿಂಡರ್ ಬಾಕಿ ಇರುತ್ತದೆ. ಮಾರ್ಚ್ ತಿಂಗಳಲ್ಲಿ  ಕಡೆಯ ಸಿಲಿಂಡರ್‌ ಬುಕ್ ಮಾಡಿದರೆ ಆ ತಿಂಗಳೊಳಗೆ ಗ್ರಾಹಕನ ಕಡೆಯ ಸಿಲಿಂಡರ್  ಮನೆ ಬಾಗಿಲಿಗೆ ಬಂದು ತಲುಪುತ್ತದೆ ಎಂದು ಭಾವಿಸಿದರೂ ಸಿಲಿಂಡರ್ ಬರದೆ ಅದು  ಏಪ್ರಿಲ್ 1ನೇ ತಾರೀಖಿನ ಬಳಿಕ ಬಂದರೆ ಗ್ರಾಹಕನನ್ನು ಏಪ್ರಿಲ್ ಫೂಲ್ ಮಾಡಿದ ಹಾಗೂ ಆಯಿತು, ವಿತರಕನಿಗೆ ಒಂದು ಸಿಲಿಂಡರ್‌ ಉಳಿತಾಯವೂ ಆಯಿತು! ಹೇಗೆಂದಿರಾ?ಗ್ರಾಹಕನ ಕೋಟಾದ 9 ಸಿಲಿಂಡರ್‌ಗಳ ಲೆಕ್ಕ ಹಾಕುವುದಕ್ಕೆ ವಿತರಣೆಯೇ ಆಧಾರವೇ ಹೊರತು ಕಾದಿರಿಸುವ ದಿನ ಅಲ್ಲ! ಆ ಪ್ರಕಾರ ಗ್ರಾಹಕ ಮಾರ್ಚ್ ತಿಂಗಳಲ್ಲಿ ಕಾದಿರಿಸಿದ ಸಿಲಿಂಡರ್‌ ಏಪ್ರಿಲ್ 1ರಂದು  ವಿತರಣೆಯಾದರೆ, ಅದು ಕಳೆದು ಹೋದ ವರ್ಷದ ಲೆಕ್ಕದಲ್ಲಿ ಬರುವುದಿಲ್ಲ. ಹೇಗಿದೆ ನೋಡಿ ಎಲ್‌ಪಿಜಿ ಮಾಫಿಯಾ ಜಾಣ್ಮೆ. ಇದನ್ನು ಈಗಿನಿಂದಲೇ ಎಲ್ಲರೂ  ಪ್ರತಿಭಟಿಸಬೇಕು. ಇಲ್ಲದಿದ್ದರೆ ಮತ್ತಷ್ಟು ಅವಾಂತರಗಳು ಖಂಡಿತ ಕಾದಿರುತ್ತವೆ.  

 

ಪ್ರತಿಕ್ರಿಯಿಸಿ (+)