ದೊಡ್ಡಬಳ್ಳಾಪುರ: ಘನತ್ಯಾಜ್ಯ ನಿರ್ವಹಣೆ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಬೇಕಿದೆ. ಈ ದಿಸೆಯಲ್ಲಿ ನಗರಸಭೆ ಕೈಗೊಳ್ಳುವ ಕ್ರಮಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ನಗರಸಭೆ ಪೌರಾಯುಕ್ತ ಚಿಕ್ಕಣ್ಣ ಹೇಳಿದರು.

ನಗರದ ಮೈತ್ರಿ ಸರ್ವ ಸೇವಾ ಸಮಿತಿ ಹಾಗೂ ನಗರಸಭೆ ವತಿಯಿಂದ ದೇಶದಪೇಟೆ ವಾರ್ಡ್ನಲ್ಲಿ ನಡೆದ ಸ್ವಚ್ಛತಾ ಆಂದೋಲನ ಘನತ್ಯಾಜ್ಯ ನಿರ್ವಹಣೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದ ಸ್ವಚ್ಛತೆ ಇಂದು ದೊಡ್ಡ ಸವಾಲಾಗಿದ್ದು ನಗರಸಭೆ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ. ನಾಗರಿಕರ ಸಹಕಾರ ಇಲ್ಲದೆ ಈ ಕಾರ್ಯಗಳು ಯಶಸ್ವಿಯಾಗುವುದಿಲ್ಲ ಎಂದರು.

ಮೈತ್ರಿ ಸರ್ವ ಸೇವಾ ಸಮಿತಿ ಸಂಯೋಜಕ ಕೆ.ಗುರುದೇವ್ ಸ್ವಚ್ಛತಾ ಆಂದೋಲನ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ವಡ್ಡರಹಳ್ಳಿರವಿ, ನಗರಸಭೆ ಆರೋಗ್ಯ ನಿರೀಕ್ಷಕ ಸೂಲಪ್ಪ, ಹರೀಶ್, ಮುಕ್ತಾಂಬ, ವಿಜ್ಞಾನ ಬರಗಾರ ಡಾ.ಎ.ಒ.ಆವಲಮೂರ್ತಿ, ಜಗದೀಶ್, ನಾರಾಯಣಪ್ಪ, ಎಸ್.ನಟರಾಜ್, ಮೈತ್ರಿ ಸಂಸ್ಥೆಯ ಸಂಯೋಜಕಿ ಗೌರಮ್ಮ ಮತ್ತು ತಾಂತ್ರಿಕ ತಜ್ಞರಾದ ಸೌಮ್ಯ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.