ಗರಿಷ್ಠ ವಿಕೆಟ್
ಐದು ಪಂದ್ಯಗಳಲ್ಲಿ ಒಟ್ಟು 23 ವಿಕೆಟ್‌ಗಳನ್ನು ಉರುಳಿಸಿರುವ ಸಿರಾಜ್, ಪ್ರಸ್ತುತ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಇದರೊಂದಿಗೆ ಅವರು, ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯಲ್ಲಿ ಭಾರತದ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ. 2021–22ರ ಟೂರ್ನಿಯಲ್ಲಿ ಜಸ್‌ಪ್ರಿತ್ ಬೂಮ್ರಾ ಅವರೂ 23 ವಿಕೆಟ್ ಪಡೆದಿದ್ದರು. ಭುವನೇಶ್ವರ್ ಕುಮಾರ್ 2014ರಲ್ಲಿ 19 ವಿಕೆಟ್‌ಗಳನ್ನು ಉರುಳಿಸಿದ್ದರು.