ಶುಕ್ರವಾರ, ಏಪ್ರಿಲ್ 16, 2021
30 °C

ಚಂದ್ರಪಾಲ್ ಅಜೇಯ ದ್ವಿಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ (ಎಎಫ್‌ಪಿ): ಮೊದಲ ದಿನ ಅಜೇಯ ಶತಕ ಗಳಿಸಿದ್ದ ಶಿವನಾರಾಯಣ ಚಂದ್ರಪಾಲ್ (ಔಟಾಗದೆ 203) ಅದನ್ನು ದ್ವಿಶತಕವಾಗಿ ಪರಿವರ್ತಿಸಿದರಲ್ಲದೆ, ಬಾಂಗ್ಲಾದೇಶ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್‌ನ ಬೃಹತ್ ಮೊತ್ತಕ್ಕೆ ಕಾರಣರಾದರು.ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಬುಧವಾರ ವಿಂಡೀಸ್ 144 ಓವರ್‌ಗಳಲ್ಲಿ 4 ವಿಕೆಟ್‌ಗೆ 527 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.  ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 36 ಓವರ್‌ಗಳಲ್ಲಿ 3 ವಿಕೆಟ್‌ಗೆ 164 ರನ್ ಗಳಿಸಿದ್ದು, ಮರುಹೋರಾಟದ ಸೂಚನೆ ನೀಡಿದೆ. ಏಕದಿನ ಪಂದ್ಯದ ಶೈಲಿಯಲ್ಲಿ ಬ್ಯಾಟ್ ಬೀಸಿದ ತಮೀಮ್ ಇಕ್ಬಾಲ್ (72, 71 ಎಸೆತ, 10 ಬೌಂ, 2 ಸಿಕ್ಸರ್) ಆತಿಥೇಯರ ಪರ ಮಿಂಚಿದರು. ನಯೀಮ್ ಇಸ್ಲಾಮ್ (27) ಮತ್ತು ಶಕೀಬ್ ಅಲ್ ಹಸನ್ (16) ಗುರುವಾರ ಆಟ ಮುಂದುವರಿಸಲಿದ್ದಾರೆ.ಇದಕ್ಕೂ ಮುನ್ನ 4 ವಿಕೆಟ್‌ಗೆ 361 ರನ್‌ಗಳಿಂದ ಆಟ ಮುಂದುವರಿಸಿದ್ದ ವಿಂಡೀಸ್ ತನ್ನ ಮೊತ್ತವನ್ನು ಮತ್ತಷ್ಟು ಹಿಗ್ಗಿಸಿತು. ಚಂದ್ರಪಾಲ್ ಮತ್ತು ದಿನೇಶ್ ರಾಮ್ದಿನ್ (ಅಜೇಯ 126) ಮುರಿಯದ ಐದನೇ ವಿಕೆಟ್‌ಗೆ 296 ರನ್ ಸೇರಿಸಿ ಬಾಂಗ್ಲಾ ತಂಡವನ್ನು ಕಾಡಿದರು. ಇವರಿಬ್ಬರು ಕ್ರಮವಾಗಿ 123 ಹಾಗೂ 52 ರನ್‌ಗಳಿಂದ ಆಟ ಮುಂದುವರಿಸಿದ್ದರು.372 ಎಸೆತಗಳನ್ನು ಎದುರಿಸಿದ ಚಂದ್ರಪಾಲ್ 22 ಸಲ ಚೆಂಡನ್ನು ಬೌಂಡರಿಗೆ ಅಟ್ಟಿದರು. 236 ಎಸೆತಗಳನ್ನು ಎದುರಿಸಿದ ರಾಮ್ದಿನ್ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು.ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 144 ಓವರ್‌ಗಳಲ್ಲಿ 4 ವಿಕೆಟ್‌ಗೆ 527 (ಶಿವನಾರಾಯಣ ಚಂದ್ರಪಾಲ್ 203, ದಿನೇಶ್ ರಾಮ್ದಿನ್ ಔಟಾಗದೆ 126, ಸೊಹಾಗ್ ಗಾಜಿ 145ಕ್ಕೆ 3) ಬಾಂಗ್ಲಾದೇಶ: ಮೊದಲ ಇನಿಂಗ್ಸ್ 36 ಓವರ್‌ಗಳಲ್ಲಿ 3 ವಿಕೆಟ್‌ಗೆ 164 (ತಮೀಮ್ ಇಕ್ಬಾಲ್ 72, ಶಹರಿಯಾರ್ ನಫೀಸ್ 31, ನಯೀಮ್ ಇಸ್ಲಾಮ್ ಬ್ಯಾಟಿಂಗ್ 27, ಶಕೀಬ್ ಅಲ್ ಹಸನ್ ಬ್ಯಾಟಿಂಗ್ 16, ರವಿ ರಾಂಪಾಲ್ 49ಕ್ಕೆ 2)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.