ಶನಿವಾರ, ಜನವರಿ 18, 2020
27 °C

ಚರಂಡಿ ಸ್ವಚ್ಛಗೊಳಿಸಿ ವಿನೂತನ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚರಂಡಿ ಸ್ವಚ್ಛಗೊಳಿಸಿ ವಿನೂತನ ಪ್ರತಿಭಟನೆ

ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆಯ ಚರಂಡಿಗಳು ಕೊಳಚೆಯಿಂದ ತುಂಬಿವೆ. ಯಾವ ಪ್ರದೇಶಕ್ಕೆ ಹೋದರೂ ಅಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಸಾರ್ವಜನಿಕರು ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗದೆ ಈಗ ತಾವೇ ಮುಂದಾಗಿ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಸ್ಥಳೀಯ ದಲಾಲ ಲೇನ್‌ನಲ್ಲಿ ದಿನಾಲೂ ಅಲ್ಲಿಯ ನಜೀರ್ ಎಂಬ ಯುವಕ ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾನೆ.



ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಹೇಳಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇನ್ನೂ ಮುಂದಾದರೂ ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ನಗರದ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯ ನಾಗರಿಕರು ಈರಣ್ಣ ಜಿಗಜಿನ್ನಿ, ಕಿರಣ ಆಳಗಿ, ಪ್ರಕಾಶ ನಾವಿ, ವಿಶ್ವನಾಥ ಮುಗತಿ ಆಗ್ರಹಿಸಿದ್ದಾರೆ.



 

ಪ್ರತಿಕ್ರಿಯಿಸಿ (+)